ಮಿಸ್ಬಾ ಉಲ್ ಹಕ್ 
ಕ್ರಿಕೆಟ್

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮತ್ತೆ ಬಿರುಗಾಳಿ: ವಿದೇಶಿ-ಸ್ಥಳೀಯ ಕೋಚ್‌ಗಳ ನಡುವೆ ತಾರತಮ್ಯ, ಭಾರತ ಆತುರಪಡಲಿಲ್ಲ: Misbah-ul-Haq ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿ ವಿವಾದಕ್ಕೆ ಗುರಿಯಾದ ಬಳಿಕ ಪಾಕಿಸ್ತಾನ ಕ್ರಿಕೆಟ್ ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ.

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ನಾಯಕ ಹಾಗೂ ರಾಷ್ಟ್ರೀಯ ಆಯ್ಕೆಸಮಿತಿ ಮುಖ್ಯಸ್ಥ ಹುದ್ದೆಯಿಂದ ಕೆಳಗಿಳಿದಿರುವ ಮಿಸ್ಬಾ ಉಲ್ ಹಕ್, ಪಿಸಿಬಿ ವಿರುದ್ದ ಸ್ಫೋಟಕ ಆರೋಪಗಳ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಹೀನಾಯ ಪ್ರದರ್ಶನ ನೀಡಿ ವಿವಾದಕ್ಕೆ ಗುರಿಯಾದ ಬಳಿಕ ಪಾಕಿಸ್ತಾನ ಕ್ರಿಕೆಟ್ ನಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದೆ.

ಹೀನಾಯ ಪ್ರದರ್ಶನದ ಬೆನ್ನಲ್ಲೇ ಇಂಗ್ಲೆಂಡ್ ಸರಣಿಯಿಂದ ಬರೊಬ್ಬರಿ 7 ಆಟಗಾರರನ್ನು ಪಿಸಿಬಿ ತಂಡದಿಂದ ಹೊರದಬ್ಬಿತ್ತು. ಮಾತ್ರವಲ್ಲದೇ ಕೋಚ್, ಆಯ್ಕೆ ಸಮಿತಯಲ್ಲೂ ಆಮೂಲಾಗ್ರ ಬದಲಾವಣೆ ಮಾಡಿತ್ತು.

ಈ ಬೆಳವಣಿಗೆ ಬೆನ್ನಲ್ಲೇ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಮಿಸ್ಬಾ ಉಲ್ ಹಕ್ ಪಿಸಿಬಿ ಮತ್ತು ಪಾಕಿಸ್ತಾನ ತಂಡದ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ನಲ್ಲಿ ವಿದೇಶಿ ಹಾಗೂ ಸ್ಥಳೀಯ ಕೋಚ್‌ಗಳಿಗೆ ವಿಭಿನ್ನ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಯ್ಕೆ ಸಮಿತಿಗೆ ಪಿಸಿಬಿ ನೋಟಿಸ್

ಇಂಗ್ಲೆಂಡ್ ಪ್ರವಾಸದ ವೇಳೆ ಪಾಕಿಸ್ತಾನ ತಂಡದಲ್ಲಿ ಭಾರೀ ಬದಲಾವಣೆಗಳನ್ನು ಮಾಡಿದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಆಯ್ಕೆ ಸಮಿತಿಗೆ ನೋಟಿಸ್ ನೀಡಿತ್ತು. ಇದರ ಬೆನ್ನಲ್ಲೇ ಮಿಸ್ಬಾ ರಾಷ್ಟ್ರೀಯ ಆಯ್ಕೆಗಾರ ಹುದ್ದೆಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಇದೀಗ ಅವರು ವಿದೇಶಿ ಕೋಚ್‌ಗಳಿಗೆ ಹೆಚ್ಚಿನ ಅಧಿಕಾರ ಮತ್ತು ಪ್ರಭಾವ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

‘ಸ್ಥಳೀಯ ಕೋಚ್‌ಗಳ ವಿರುದ್ಧ ಹೆಚ್ಚು ಟೀಕೆ’

ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಿಸ್ಬಾ, “ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಸ್ಥಳೀಯ ಹಾಗೂ ವಿದೇಶಿ ಕೋಚ್‌ಗಳನ್ನು ವಿಭಿನ್ನವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬುದು ಸತ್ಯ. ವಿದೇಶಿ ಕೋಚ್‌ಗಳಿಗೆ ಹೋಲಿಸಿದರೆ ಸ್ಥಳೀಯ ಕೋಚ್‌ಗಳು ಹೆಚ್ಚಿನ ಪರಿಶೀಲನೆ ಮತ್ತು ಟೀಕೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

“ವಿದೇಶಿ ಕೋಚ್‌ಗಳನ್ನು ನೇಮಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನನ್ನನ್ನು ಕಾಡುವ ಸಂಗತಿಯೆಂದರೆ, ಅಭಿಮಾನಿಗಳು, ವಿಮರ್ಶಕರು, ಮಾಧ್ಯಮ ಮತ್ತು PCB ಸೇರಿದಂತೆ ನಾವೆಲ್ಲರೂ ವಿದೇಶಿ ಕೋಚ್‌ಗಳ ಬಗ್ಗೆ ಒಂದು ರೀತಿಯ ಮೃದು ಧೋರಣೆ ಹೊಂದಿದ್ದೇವೆ” ಎಂದು ಅವರು ಹೇಳಿದ್ದಾರೆ.

ವಿದೇಶಿ ಕೋಚ್‌ಗಳಿಗೆ ಹೆಚ್ಚಿನ ಅಧಿಕಾರ

“ನಾವು ವಿದೇಶಿ ಕೋಚ್‌ಗಳಿಗೆ ಹೆಚ್ಚಿನ ಅಧಿಕಾರ ಮತ್ತು ಶಕ್ತಿ ನೀಡುತ್ತೇವೆ. ತಂಡ ಕಳಪೆ ಪ್ರದರ್ಶನ ನೀಡಿದರೂ ಅವರ ಮೇಲೆ ಅಷ್ಟೊಂದು ಹೊಣೆಗಾರಿಕೆ ಹಾಕುವುದಿಲ್ಲ. ಆದರೆ ಸ್ಥಳೀಯ ಕೋಚ್‌ಗಳು ಮಾತ್ರ ಎಲ್ಲರಿಂದಲೂ ನಿರಂತರವಾಗಿ ಟೀಕೆಗೆ ಗುರಿಯಾಗುತ್ತಾರೆ.

ಪಾಕಿಸ್ತಾನದ ಅಭಿಮಾನಿಗಳು, ವಿಮರ್ಶಕರು, ಮಾಜಿ ಆಟಗಾರರು ಹಾಗೂ ಕ್ರಿಕೆಟ್ ಮಂಡಳಿ ಸ್ಥಳೀಯ ಕೋಚ್‌ಗಳಿಗೆ ಹೆಚ್ಚಿನ ಬೆಂಬಲ ನೀಡಬೇಕು. ಕೇವಲ ಟೀಕಿಸುವುದಕ್ಕಾಗಿ ಅವರನ್ನು ಟೀಕಿಸಬಾರದು ಎಂದು ಮಿಸ್ಬಾ ಸಲಹೆ ನೀಡಿದ್ದಾರೆ.

ವಿಫಲರಾದರೆ ಆಟಗಾರರನ್ನು ಮಾನಸಿಕವಾಗಿ ಕುಗ್ಗಿಸಲಾಗುತ್ತಿದೆ

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮತ್ತೊಂದು ನಕಾರಾತ್ಮಕ ಬೆಳವಣಿಗೆ ಕಂಡುಬರುತ್ತಿದೆ ಎಂದಿರುವ ಮಿಸ್ಬಾ, ಆಟಗಾರರು ಕಳಪೆ ಪ್ರದರ್ಶನ ನೀಡಿದ ತಕ್ಷಣ ಅವರನ್ನು ತೀವ್ರವಾಗಿ ಟೀಕಿಸಿ ಮಾನಸಿಕವಾಗಿ ಕುಗ್ಗಿಸಲಾಗುತ್ತಿದೆ.

ಒಮ್ಮೆ ಫಾರ್ಮ್ ಕಳೆದುಕೊಂಡ ಆಟಗಾರರು ಮತ್ತೆ ತಮ್ಮ ಲಯ ಮತ್ತು ಆತ್ಮವಿಶ್ವಾಸವನ್ನು ಮರಳಿ ಪಡೆಯುವುದು ಇದರಿಂದ ತುಂಬಾ ಕಷ್ಟವಾಗುತ್ತದೆ. ಪಾಕಿಸ್ತಾನ ಕ್ರಿಕೆಟ್‌ನ ಪ್ರಮುಖ ಸಮಸ್ಯೆ ಸ್ಥಿರತೆ, ತಾಳ್ಮೆ ಮತ್ತು ದೀರ್ಘಕಾಲೀನ ಯೋಜನೆಯ ಕೊರತೆ ಎಂದು ಮಿಸ್ಬಾ ಅಭಿಪ್ರಾಯಪಟ್ಟಿದ್ದಾರೆ.

“ಒತ್ತಡಕ್ಕೆ ಮಣಿದು ಆತುರದಲ್ಲಿ ಕೇವಲ ಮೇಲ್ನೋಟದ ಬದಲಾವಣೆಗಳನ್ನು ಮಾಡಬಾರದು. ಆಟಗಾರರ ಪ್ರದರ್ಶನ ಮತ್ತು ಪರಿಸ್ಥಿತಿಯನ್ನು ಸಮಗ್ರವಾಗಿ ವಿಶ್ಲೇಷಿಸಿ, ನಂತರ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸಬೇಕು. ದುರದೃಷ್ಟವಶಾತ್, ಪಾಕಿಸ್ತಾನ ಕ್ರಿಕೆಟ್‌ನಲ್ಲಿ ನಾವು ಪ್ರತಿಕ್ರಿಯಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಒಗ್ಗಿಕೊಂಡಿದ್ದೇವೆ” ಎಂದು ಮಿಸ್ಬಾ ಹೇಳಿದ್ದಾರೆ.

‘ಭಾರತ ಆತುರಪಡಲಿಲ್ಲ'

ಇದೇ ವೇಳೆ ಭಾರತೀಯ ಕ್ರಿಕೆಟ್‌ನ ಉದಾಹರಣೆ ನೀಡಿದ ಮಿಸ್ಬಾ, ಭಾರತ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳದೆ ತನ್ನ ಯೋಜನೆಗಳಿಗೆ ಬದ್ಧವಾಗಿದ್ದರಿಂದಲೇ ಕ್ರಿಕೆಟ್‌ನಲ್ಲಿ ಸಾಕಷ್ಟು ಮುಂದೆ ಬಂದಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಅವರು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಉದಾಹರಣೆಯನ್ನು ನೀಡಿದರು. ಭಾರತ ಇದೀಗ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಮೇಲೆ ಪ್ರಾಬಲ್ಯ ಸಾಧಿಸುತ್ತಿರುವುದಕ್ಕೆ ಭಾರತೀಯ ಆಟಗಾರರಿಗೆ ಸಿಕ್ಕಿರುವ ಹೆಚ್ಚಿನ ಅನುಭವ ಮತ್ತು ಒತ್ತಡದ ಸಂದರ್ಭಗಳಲ್ಲಿ ವೃತ್ತಿಪರವಾಗಿ ಹಾಗೂ ಮಾನಸಿಕವಾಗಿ ಗಟ್ಟಿಯಾಗಿ ಪ್ರದರ್ಶನ ನೀಡುವ ಸಾಮರ್ಥ್ಯವೇ ಕಾರಣ ಎಂದು ಮಿಸ್ಬಾ ಹೇಳಿದ್ದಾರೆ.

“ನಮ್ಮ ಯುವ ಆಟಗಾರರು ಅತಿಯಾಗಿ ವೈಟ್-ಬಾಲ್ ಕ್ರಿಕೆಟ್ ಆಡುತ್ತಿದ್ದಾರೆ. ಆದರೆ ರೆಡ್-ಬಾಲ್ ಕ್ರಿಕೆಟ್‌ನಲ್ಲಿ ಅವರಿಗೆ ಸಿಗುತ್ತಿರುವ ಅನುಭವ ಸೀಮಿತವಾಗಿದೆ. ಸಾಕಷ್ಟು ನಾಲ್ಕು ದಿನಗಳ ಪಂದ್ಯಗಳನ್ನು ಆಡುತ್ತಿಲ್ಲ. ಹೀಗಾಗಿ ಒತ್ತಡದ ಸಂದರ್ಭಗಳಲ್ಲಿ ಅವರು ಕುಸಿಯುವ ಸಾಧ್ಯತೆ ಹೆಚ್ಚಾಗಿದೆ” ಎಂದು ಅವರು ಹೇಳಿದ್ದಾರೆ.

“ಭಾರತ ಕೂಡ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಮಯ ತೆಗೆದುಕೊಂಡಿತು. 1990ರ ದಶಕದ ನಂತರ ಅವರು ತಮ್ಮ ಕ್ರಿಕೆಟ್ ವ್ಯವಸ್ಥೆಯಲ್ಲಿ ಹಂತಹಂತವಾಗಿ ಹೂಡಿಕೆ ಮಾಡಿದರು. ಈ ವ್ಯವಸ್ಥೆಗೆ ಯಾವುದೇ ತ್ವರಿತ ಪರಿಹಾರವಿಲ್ಲ” ಎಂದು ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

West asia conflict: ಬೆದರಿಕೆಗೆ ಮಣಿಯಲ್ಲ, ದಾಳಿ ನಿಲ್ಲದ ಹೊರತು ಹಾರ್ಮುಜ್ ಜಲಸಂಧಿ ತೆರೆಯಲ್ಲ: ಅಮೆರಿಕಾಕ್ಕೆ Iran ಖಡಕ್ ಸಂದೇಶ..!

'ಅಹಿಂದ ಯಾರ ಆಸ್ತಿಯೂ ಅಲ್ಲ'.. ಕರೆಯದೇ ಹೇಗೆ ಹೋಗಲಿ?: ಗುರುವಿನ ವಿರುದ್ಧ ಸಚಿವ ಸತೀಶ್ ಜಾರಕಿಹೊಳಿ ಗರಂ!

ದೆಹಲಿ ಹಾಸ್ಟೆಲ್ ದುರಂತ: ಸಾವಿನ ಸಂಖ್ಯೆ 6ಕ್ಕೆ ಏರಿಕೆ; 11 ಮಂದಿ ರಕ್ಷಣೆ, ಮುಂದುವರಿದ ರಕ್ಷಣಾ ಕಾರ್ಯಾಚರಣೆ

ರಸ್ತೆ ಸಾರ್ವಜನಿಕ ಆಸ್ತಿ, ಕಾರು ಮಾಲೀಕರ ಸ್ವತ್ತಲ್ಲ: ಸಂಚಾರ ದಟ್ಟಣೆ ಕಡಿಮೆಯಾಗಬೇಕಾದರೆ ಪಾರ್ಕಿಂಗ್ ನಿಯಂತ್ರಣ ಅಗತ್ಯ; ಸಚಿವ ಕೃಷ್ಣ ಬೈರೇಗೌಡ (INTERVIEW)

Bigg Boss Telugu 10: ನಟ ನಾಗಾರ್ಜುನ ನಡೆಸಿಕೊಡುವ ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಚೈತ್ರಾ ರೈ ಎಂಟ್ರಿ!