ಇಶಾನ್ ಕಿಶನ್ 
ಕ್ರಿಕೆಟ್

ದುಲೀಪ್ ಟ್ರೋಫಿ ಫೈನಲ್‌: ದ್ವಿಶತಕ ಸಿಡಿಸಿ ಇತಿಹಾಸ ಸೃಷ್ಟಿಸಿದ ಇಶಾನ್ ಕಿಶನ್

ಈಸ್ಟ್ ಝೋನ್ ತಂಡದ ನಾಯಕ ಇಶಾನ್ ಕಿಶನ್ ಅವರು 203 ರನ್ ಗಳಿಸುವ ಮೂಲಕ ದುಲೀಪ್ ಟ್ರೋಫಿ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ ಡಬಲ್ ಸೆಂಚುರಿ ಸಿಡಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

ಚೆನ್ನೈ: ಚೆನ್ನೈನಲ್ಲಿ ಸೋಮವಾರ ನಡೆದ ದುಲೀಪ್ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಇಶಾನ್ ಕಿಶನ್ ಅವರು ಅದ್ಭುತ ದ್ವಿಶತಕ ಬಾರಿಸುವ ಮೂಲಕ ವಿಶೇಷ ದಾಖಲೆ ಸೃಷ್ಟಿಸಿದ್ದಾರೆ.

ಇಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸೌತ್ ಝೋನ್ ವಿರುದ್ಧದ ಫೈನಲ್ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಈಸ್ಟ್ ಝೋನ್ ತಂಡದ ನಾಯಕ ಇಶಾನ್ ಕಿಶನ್ ಅವರು 203 ರನ್ ಗಳಿಸುವ ಮೂಲಕ ದುಲೀಪ್ ಟ್ರೋಫಿ ಇತಿಹಾಸದಲ್ಲೇ ಫೈನಲ್ ಪಂದ್ಯದಲ್ಲಿ ಡಬಲ್ ಸೆಂಚುರಿ ಸಿಡಿಸಿದ ಮೊದಲ ವಿಕೆಟ್ ಕೀಪರ್ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

2ನೇ ದಿನದಂದು ತಿಲಕ್ ವರ್ಮಾ ನೇತೃತ್ವದ ಸೌತ್ ಝೋನ್ ವಿರುದ್ಧ ತಮ್ಮ ಅಬ್ಬರದ ಬ್ಯಾಟಿಂಗ್ ಅನ್ನು ಮುಂದುವರಿಸಿದ ಇಶಾನ್ ಕಿಶನ್, 270 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 25 ಫೋರ್​ಗಳೊಂದಿಗೆ 203* ರನ್​ಗಳಿಸಿ ದ್ವಿಶತಕ ಪೂರೈಸಿದರು.

ದುಲೀಪ್ ಟ್ರೋಫಿ ಫೈನಲ್‌ನಲ್ಲಿ ದ್ವಿಶತಕ ಬಾರಿಸಿದ ಇತರ ಬ್ಯಾಟ್ಸ್‌ಮನ್‌ಗಳೆಂದರೆ ರಮಣ್ ಲಂಬಾ(1987-88ರಲ್ಲಿ ವೆಸ್ಟ್ ಝೋನ್ ವಿರುದ್ಧ 320), ಅಂಶುಮಾನ್ ಗಾಯಕ್ವಾಡ್ (1987-88ರಲ್ಲಿ ನಾರ್ತ್ ಝೋನ್ ವಿರುದ್ಧ 216), ಚೇತೇಶ್ವರ ಪೂಜಾರ (2016-17ರಲ್ಲಿ ಇಂಡಿಯಾ ರೆಡ್ ವಿರುದ್ಧ 256 ನಾಟೌಟ್) ಮತ್ತು ಯಶಸ್ವಿ ಜೈಸ್ವಾಲ್ (2022-23ರಲ್ಲಿ ದಕ್ಷಿಣ ವಲಯದ ವಿರುದ್ಧ 209).

ಇದೀಗ ಈ ಪಟ್ಟಿಗೆ ಇಶಾನ್ ಕಿಶನ್ ಸೇರ್ಪಡೆಯಾಗಿದ್ದು, ಅದು ಸಹ ವಿಕೆಟ್ ಕೀಪರ್, ಬ್ಯಾಟರ್ ಆಗಿ ಕಣಕ್ಕಿಳಿದು ಭರ್ಜರಿ ಡಬಲ್ ಸೆಂಚುರಿ ಸಿಡಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ದುರಂತ: ಮೃತರ ಸಂಖ್ಯೆ 7ಕ್ಕೆ ಏರಿಕೆ; ತಲೆಮರೆಸಿಕೊಂಡಿರುವ PG ಮಾಲೀಕನ ವಿರುದ್ಧ Lookout Notice ಜಾರಿ, ಇಂದು High courtನಲ್ಲಿ ತುರ್ತು ವಿಚಾರಣೆ..!

‘ಓವರ್‌ಟೇಕ್‌ ಎಡವಟ್ಟು, ಮೂರೇ ಸೆಕೆಂಡ್ ನಲ್ಲಿ ದುರಂತ!’; ಮಂಡ್ಯದಲ್ಲಿ ಭೀಕರ ಕಾರು ಅಪಘಾತ: ಮಹಿಳೆ ಸಾವು, Video Viral

ಬಿಜೆಪಿಯವರು 'ಹಣ ಕೊಟ್ಟು ಪಾದಯಾತ್ರೆ' ನಡೆಸ್ತಾ ಇದ್ದಾರೆ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ! Video

Devi Awards 2026: ಮಹಿಳೆಯರನ್ನು ಕೇವಲ ಫಲಾನುಭವಿಗಳಾಗಿ ನೋಡುವ ಬದಲು ಅಭಿವೃದ್ಧಿಯ ಪಾಲುದಾರರು, ನಾಯಕಿಯರನ್ನಾಗಿ ಪರಿಗಣಿಸಬೇಕು- ಒಡಿಶಾ ಡಿಸಿಎಂ

West asia conflict: ಬೆದರಿಕೆಗೆ ಮಣಿಯಲ್ಲ, ದಾಳಿ ನಿಲ್ಲದ ಹೊರತು ಹಾರ್ಮುಜ್ ಜಲಸಂಧಿ ತೆರೆಯಲ್ಲ: ಅಮೆರಿಕಾಕ್ಕೆ Iran ಖಡಕ್ ಸಂದೇಶ..!