ರಾಹುಲ್ ದ್ರಾವಿಡ್ ಮತ್ತು ಅನ್ವಯ್ 
ಕ್ರಿಕೆಟ್

ವಿನೂ ಮಂಕಡ್ ಟ್ರೋಫಿ: ಕರ್ನಾಟಕ ತಂಡದ ನಾಯಕನಾಗಿ ರಾಹುಲ್ ದ್ರಾವಿಡ್ ಪುತ್ರ ಅನ್ವಯ್ ಆಯ್ಕೆ!

ಅಂಡರ್-19 ಏಕದಿನ ಮಾದರಿಯ ಈ ಪಂದ್ಯಾವಳಿ ಅಕ್ಟೋಬರ್ 8 ರಿಂದ 16 ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಕರ್ನಾಟಕ ಅಂಡರ್ 19 ತಂಡವನ್ನು ಅನ್ವಯ್ ದ್ರಾವಿಡ್ ಮುನ್ನಡೆಸಲಿದ್ದಾರೆ.

ಬೆಂಗಳೂರು: ವಿನೂ ಮಂಕಡ್ ಟ್ರೋಫಿಗೆ ಕರ್ನಾಟಕ ತಂಡದ ನಾಯಕನಾಗಿ, ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಅವರನ್ನು ಬುಧವಾರ ನೇಮಕ ಮಾಡಲಾಗಿದೆ.

ಅಂಡರ್-19 ಏಕದಿನ ಮಾದರಿಯ ಈ ಪಂದ್ಯಾವಳಿ ಅಕ್ಟೋಬರ್ 8 ರಿಂದ 16 ರವರೆಗೆ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಕರ್ನಾಟಕ ಅಂಡರ್ 19 ತಂಡವನ್ನು ಅನ್ವಯ್ ದ್ರಾವಿಡ್ ಮುನ್ನಡೆಸಲಿದ್ದಾರೆ.

ಬಲಗೈ ವಿಕೆಟ್ ಕೀಪರ್-ಬ್ಯಾಟರ್ ದ್ರಾವಿಡ್ ಇತ್ತೀಚೆಗೆ ರಾಜ್‌ಕೋಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತ ಅಂಡರ್-19 ತಂಡದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಿದ್ದರು.

ಈ ವರ್ಷದ ಜುಲೈನಲ್ಲಿ ಭಾರತ ಅಂಡರ್-19 ತಂಡದ ಶ್ರೀಲಂಕಾ ಪ್ರವಾಸಕ್ಕೂ 17 ವರ್ಷದ ಆಟಗಾರ ಅನ್ವಯ್ ಆಯ್ಕೆಯಾಗಿದ್ದರು.

ಕರ್ನಾಟಕವು, ಗುಜರಾತ್, ಜಾರ್ಖಂಡ್, ಚಂಡೀಗಢ, ಹಿಮಾಚಲ ಪ್ರದೇಶ ಮತ್ತು ದೆಹಲಿಯೊಂದಿಗೆ ಎಲೈಟ್ ಗ್ರೂಪ್ Eನಲ್ಲಿ ಸ್ಥಾನ ಪಡೆದಿದೆ.

ಕರ್ನಾಟಕ ತಂಡ

ಅನ್ವಯ್ ದ್ರಾವಿಡ್(ನಾಯಕ), ನಿತೀಶ್ ಆರ್ಯ, ಧ್ರುವ ಕೃಷ್ಣನ್, ಆರ್ ರೋಹಿತ್ ರೆಡ್ಡಿ, ಆದರ್ಶ್ ಎಸ್‌ಜೆ, ಸುಜಯ್ ಕೊರ್ವಾರ್, ವರುಣ್ ಪಟೇಲ್(wk), ಅನಿಕೇತ್ ರೆಡ್ಡಿ, ಪಿ ತೇಜಸ್ ರೆಡ್ಡಿ, ಸಮರ್ಥ್ ಎಂ ಕುಲಕರ್ಣಿ, ವೈಭವ್ ಸಿ, ಗೌರವ್ ವೆಂಕಟೇಶ್, ರತನ್ ಬಿಆರ್, ಡಿ ಪ್ರೀತಂ ರಾಜ್, ಡಿ ಪ್ರೀತಂ ರಾಜ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಫ್ಲೈದುಬೈ ವಿಮಾನದಲ್ಲಿ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ: ಚಾಕುವಿನಿಂದ ಇರಿದ ಸಹೋದ್ಯೋಗಿಯನ್ನು ಎದುರಿಸಿ ಹಿಮ್ಮೆಟ್ಟಿಸಿದ್ದು ಭಾರತೀಯ ಪೈಲಟ್!

Video: ಆಕಾಶದಲ್ಲೇ ಪೈಲಟ್‌ಗಳ ರಕ್ತಸಿಕ್ತ ಮಾರಮಾರಿ; ಇಸ್ರೇಲ್‌ಗೆ ತೆರಳುತ್ತಿದ್ದ ವಿಮಾನ ಸೌದಿಯಲ್ಲಿ ತುರ್ತು ಲ್ಯಾಂಡಿಂಗ್; ತಪ್ಪಿದ ದೊಡ್ಡ ದುರಂತ!

ವಿಧಾನಸೌಧದ ಮೆಟ್ಟಿಲುಗಳ ಮೇಲೆ 'ಉರ್ದು ಹಬ್ಬ'ಕ್ಕೆ BJP ಆಕ್ಷೇಪ; ಸರ್ಕಾರಕ್ಕೆ 8 ಪ್ರಶ್ನೆಗಳನ್ನು ಕೇಳಿದ ಸುರೇಶ್ ಕುಮಾರ್

ODI Rankings: 55ನೇ ಶತಕದ ಬೆನ್ನಲ್ಲೇ 2ನೇ ಸ್ಥಾನಕ್ಕೇರಿದ 'ಕಿಂಗ್' ಕೊಹ್ಲಿ; ಅಗ್ರ ಸ್ಥಾನಕ್ಕೆ ಗಿಲ್ ಜತೆ ಫೈಟ್!

ಬೆಂಗಳೂರು: ವಿದ್ಯಾರ್ಥಿಗಳ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ; ಬಿಕಾಂ ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಸಹಪಾಠಿ!