ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ
ಬೆಂಗಳೂರು : ರಾಜೀವ್‌ಗಾಂಧಿ ಜನ್ಮದಿನಾಚರಣೆ ಅಂಗವಾಗಿ ಹೆಗಡೆ ಕಲ್ಚರಲ್ ಮತ್ತು ಸೋಷಿಯಲ್ ಅಕಾಡಮಿ ಹಾಗು ನೆಹರು ಯುವಕೇಂದ್ರ ಸಂಘಟನೆ ವತಿಯಿಂದ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಆಗಸ್ಟ್ 24 ರಂದು ಮಧ್ಯಾಹ್ನ 2 ಕ್ಕೆ ನಗರದ ಉದಯಬಾನು ಕಲಾಸಂಘ ಸಂಭಾಗಣದಲ್ಲಿ ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿ ಮಾತನಾಡಿದ ಹೆಗಡೆ ಕಲ್ಚರಲ್ ಮತ್ತು ಸೋಷಿಯಲ್ ಅಕಾಡೆಮಿಯ ಸಂಸ್ಥಾಪಕ ಡಾ.ವಿ.ಎನ್.ಹೆಗಡೆ ಅವರು, ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಗೀತೆ ಗಾಯನ, ನೃತ್ಯ, ವೇಷಭೂಷಣ ಸ್ಪರ್ಧೆ ಹಾಗು ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ವಿಜೇತರಿಗೆ ರಾಜೀವ್‌ಗಾಂಧಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಸಾಂಸ್ಕೃತಿಕ ಸ್ಪರ್ಧೆಗೆ ಭಾಗವಹಿಸಲು ಆಸಕ್ತರು ಆಗಸ್ಟ್ 15 ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ತಿಳಿಸಲಾಗಿದೆ.
ಹೆಚ್ಚಿನ ವಿವರಗಳಿಗಾಗಿ : ಹೆಗಡೆ ಕಲ್ಚರಲ್ ಮತ್ತು ಸೋಷಿಯಲ್ ಅಕಾಡಮಿ ನಂ. 30, ಗಂಗರಾಜು ಬಿಲ್ಡೀಂಗ್, ಅಮ್ಕೊಲೇಔಟ್, ಕೋಡಿಗೆಹಳ್ಳಿ , ಸಹಕಾರನಗರ , ಬೆಂಗಳೂರು -560092 .
ದೂರವಾಣಿ ಸಂಖ್ಯೆ : 9341163008 , 8951345704.