ಆಲ್ಕೋಹಾಲಿಕ್ಸ್ ಅನಾನಿಮಸ್ ಸಂಘದ 50ನೇ ವರ್ಷಾಚರಣೆ
ಬೆಂಗಳೂರು: ಆಲ್ಕೋಹಾಲಿಕ್ಸ್ ಅನಾನಿಮಸ್ ಸಂಘ ತನ್ನ 50ನೇ ವರ್ಷಾಚರಣೆಯನ್ನು ಜಯನಗರದ ಕಾರ್ಮೆಲ್ ಕಾನ್ವೆಂಟ್‌ನಲ್ಲಿ, ಆಗಸ್ಟ್ 14 ರಿಂದ 17ರವರೆಗೆ ಆಚರಿಸಲಿದೆ.
ವೈದ್ಯಕೀಯ ಚಿಕಿತ್ಸೆ ಇಲ್ಲದೆಯೇ ಕೇವಲ ಮಾನಸಿಕ ಸ್ಥೈರ್ಯವನ್ನು ನೀಡಿ, ಕುಡಿಯುವ ಚಟವನ್ನು ಬಿಡಿಸುತ್ತಿದ್ದ ಆಲ್ಕೋಹಾಲಿಕ್ಸ್ ಅನಾನಿಮಸ್ ಸಂಘ ತನ್ನ 50ನೇ ಸಂಭ್ರಮಾಚರಣೆಯನ್ನು ಆಚರಿಸುತ್ತಿದೆ. 4 ದಿನಗಳ ಕಾಲ ನಡೆಯುವ ಈ ಸಮಾರಂಭವನ್ನು ಹೈ ಕೋರ್ಟ್ ನ್ಯಾಯಾಧೀಶ ಎನ್.ಕುಮಾರ್ ಉದ್ಘಾಟಿಸಿಲಿದ್ದಾರೆ.
ಕಾರ್ಯಕ್ರಮದಲ್ಲಿ ಡಾ.ಪ್ರತಿಮಾ, ನಿಮಾನ್ಸ್ ಮನಃಶಾಸ್ತ್ರಜ್ಞ ಎಸ್.ಟಿ.ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತಿ ವಹಿಸಲಿದ್ದಾರೆ.
ಸ್ಥಳ: 6, ಕಾರ್ಮೆಲ್,ಮದರ್ ವೆರ್‌ನಿಕ ಆಡಿಟೋರಿಯಂ,
ಈಸ್ಟ್‌ಎಂಡ್ ರಸ್ತೆ, ಜಯನಗರ 4ನೇ ಬ್ಲಾಕ್,
ಬೆಂಗಳೂರು-41