ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ದಿನೇಶ್ ಗುಂಡುರಾವ್‌ರನ್ನು ಸಂಪುಟದಿಂದ ಕೈ ಬಿಡಿ: ಹಿರೇಮಠ್ ಆಗ್ರಹ

Srinivasa Murthy VN
Updated On : 11 Aug 2014, 4:18 am

ಬೆಂಗಳೂರು: ಸರ್ಕಾರಿ ಭೂಮಿ ಕಬಳಿಕೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಸಚಿವ ದಿನೇಶ್ ಗುಂಡುರಾವ್‌ರನ್ನು ಸಂಪುಟದಿಂದ ಕೈ ಬಿಡುಬೇಕು ಎಂದು ರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಸಂಸ್ಥೆ ಆಗ್ರಹಿಸಿದೆ.

ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್.ಆರ್.ಹಿರೇಮಠ್ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಒಡೆಯರು ಎಂಬುದನ್ನು ಮರೆತು ತಮ್ಮ ಭ್ರಷ್ಟತೆಯನ್ನು ಪ್ರದರ್ಶಿಸುತ್ತಿರುವ ರಾಜಕೀಯ ಅಧಿಕಾರಿಗಳಲ್ಲಿ ದಿನೇಶ್ ಗುಂಡುರಾವ್ ಒಬ್ಬರು, ಸರ್ಕಾರಿ ಭೂಮಿಯನ್ನು 10 ವರ್ಷಗಳ ಕಾಲ ತಮ್ಮ ಅಸ್ತಿತ್ವದಲ್ಲಿರಿಸಿಕೊಂಡು ತದನಂತರ ಭೂಮಿಯನ್ನು ಸರ್ಕಾರಕ್ಕೆ ಹಿಂತಿರುಗಿಸಿ ತಮ್ಮ ಭ್ರಷ್ಟತೆಯನ್ನು ನೇರವಾಗಿ ಪ್ರದರ್ಶಿಸಿರುವ ದಿನೇಶ್ ಗುಂಡುರಾವ್‌ನನ್ನು ಕೂಡಲೇ ಸಚಿವ ಸಂಪುಟದಿಂದಲೇ ಕೈಬಿಡಬೇಕು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement