ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಅಕ್ರಮ ಬಯಲಾಗುವ ಭಯದಿಂದ ಎಚ್ಡಿಕೆ ಪ್ರತಿಭಟನೆ: ಕೆ.ಎಸ್.ಶಿವರಾಮ್

1998 ರ ನೇಮಕಾತಿಯೂ ರದ್ದಾಗಿ ಎಲ್ಲಿ ತಮ್ಮ ಹಗರಣಗಳು..

Srinivasa Murthy VN
Updated On : 13 Aug 2014, 4:36 am

ಬೆಂಗಳೂರು: 2011ರ ನೇಮಕಾತಿ ರದ್ದುಗೊಂಡಿರುವ ಹಾಗೆಯೇ, 1998 ರ ನೇಮಕಾತಿಯೂ ರದ್ದಾಗಿ ಎಲ್ಲಿ ತಮ್ಮ ಹಗರಣಗಳು ಬಯಲಾಗುತ್ತದೆ ಎಂಬ ಭಯದಿಂದ ಕುಮಾರಸ್ವಾಮಿ ಅವರು ಪ್ರತಿಭಟನೆಯ ನಾಟಕವಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಆರೋಪಿಸಿದ್ದಾರೆ.

2011ರ ಕೆಪಿಎಸ್ಸಿ ನೇಮಕಾತಿ ರದ್ದು ಮಾಡಿರುವ ಸರ್ಕಾರ ಈ ಹಿಂದೆ ನಡೆದ 1998,99,2004ರ ಸಾಲಿನ ಕೆಎಎಸ್ ಹುದ್ದೆಗಳ ಅಕ್ರಮ ನೇಮಕಾತಿಯನ್ನು ರದ್ದು ಪಡಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಆಗ್ರಹಿಸಿದೆ.

ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮ್ ಅವರು, ಕೆಪಿಎಸ್ಸಿ ನೇಮಕಾತಿಯಲ್ಲಿ ಆಯ್ಕೆಯಾದವರಲ್ಲಿ ಕೆಲವರು ಪ್ರಾಮಾಣಿಕರಿರಬಹುದು. ಅವರಿಗಾಗಿರುವ ಅನ್ಯಾಯ ಸರಿಪಡಿಸಲು ಮುಂದಾದರೆ ಕೆಪಿಎಸ್ಸಿಯಲ್ಲಿ ಭ್ರಷ್ಟರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ಪ್ರಾಮಾಣಿಕ ವಿದ್ಯಾರ್ಥಿಗಳು ಸರ್ಕಾರದ ನಿರ್ಧಾರವನ್ನು ಬೆಂಬಲಿಸಬೇಕು ಎಂದು ಹೇಳಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹಗರಣಗಳ ಬಗ್ಗೆ ಹರಿಹಾಯ್ದ ಅವರು, 1998,99,2004 ರಲ್ಲಿ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಡಾ.ಹೆಚ್.ಎನ್.ಕೃಷ್ಣ ಅವರು, ಕೇವಲ ಕೆಲವರು ಮಾಡಿದ್ದ ತಪ್ಪಿಗೆ ಇಡೀ ಆಯ್ಕೆ ಪ್ರಕ್ರಿಯೆಯನ್ನೇ ರದ್ದು ಮಾಡಿದ್ದರು. ಅಲ್ಲದೆ ಅಧಿಕಾರಿ ವರ್ಗ ಸೇರಿ ತಾವು ಬಯಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದದ್ದು ಸಿಒಡಿ ತನಿಖೆಯಿಂದ ಬಯಲಿಗೆ ಬಂದಿತ್ತು.

ಪ್ರಕರಣದಲ್ಲಿ ಕುಮಾರಸ್ವಾಮಿಯವರ ಕೈವಾಡ ಇದ್ದದ್ದು ಸಾಬೀತಾಗಿತ್ತು. ಅಂದು ಬಹಳಷ್ಟು ಮಂದಿಗೆ ಅನ್ಯಾಯವಾಗಿತ್ತು. ಅಂದು ಕುಮಾರಸ್ವಾಮಿ ಯಾಕೆ ಬಾಯಿ ತೆರಯಲಿಲ.್ಲ.? 2011 ರ ನೇಮಕಾತಿ ರದ್ದತಿಗೆ ವಿರುದ್ಧವಾಗಿ ಪ್ರತಿಭಟನಾಕಾರರೊಂದಿಗೆ ಕುಳಿತು ಕಣ್ಣೀರುಡುತ್ತಿರುವ ಅವರು ನಾಟಕವಾಡುತ್ತಿದ್ದಾರೆ. 2011ರ ನೇಮಕಾತಿ ರದ್ದುಗೊಂಡಿರುವ ಹಾಗೆಯೇ, 1998 ರ ನೇಮಕಾತಿಯೂ ರದ್ದಾಗಿ ಎಲ್ಲಿ ತಮ್ಮ ಹಗರಣಗಳು ಬಯಲಾಗುತ್ತದೆ ಎಂಬ ಭಯದಿಂದ ಕುಮಾರಸ್ವಾಮಿ ಇಂದು ಪ್ರತಿಭಟನಾಕಾರರ ಮಧ್ಯೆ ಕುಳಿತು ಭಾವನಾತ್ಮಕವಾಗಿ ಪ್ರತಿಭಟನಾಕಾರರನ್ನು ಬೆಂಬಲಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

1998,99,2004 ಸಾಲಿನ ಕೆಎಎಸ್ ಹುದ್ದೆಗಳ ಅಕ್ರಮ ನೇಮಕಾತಿ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪ್ರಕರಣ ಅಂತಿಮ ಹಂತದಲ್ಲಿರುವಾಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಹಾಗೂ ಅನಾಮಧೇಯ ಪತ್ರಗಳನ್ನು ಬರೆದು ವಿಚಾರಣೆಯ ದಾರಿ ತಪ್ಪಿಸುತ್ತಿದ್ದಾರೆ. ಇದರ ವಿರುದ್ದ ರಾಜ್ಯ ಸರ್ಕಾರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಶಿವರಾಮ್ ಒತ್ತಾಯಿಸಿದರು.

ಅರಾಜಕತೆ ಮಾಡುತ್ತಿರುವ ಕುಮಾರಸ್ವಾಮಿ ಅವರು, ಅಭ್ಯರ್ಥಿಗಳ ಪರವಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇದರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದ ಅವರು ಆಗ್ರಹಿಸಿದರು. ಅಲ್ಲದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಕುಮಾರಸ್ವಾಮಿ ಅವರು, ಭ್ರಷ್ಟಚಾರಕ್ಕೆ ಬೆಂಬಲಿಸುತ್ತಿದ್ದಾರೆಯೋ ಅಥವಾ ಪ್ರಮಾಣಿಕತೆಗೆ ಬೆಂಬಲಿಸುತ್ತಿದ್ದಾರೆಯೋ ಎಂದು ಶಿವರಾಮ್ ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಪ್ರಾಮಾಣಿಕರೇ ಆಗಿದ್ದರೆ ಚರ್ಚೆ ನಡೆಸಲಿ, ಚರ್ಚೆಗೆ ತಾವು ಸಿದ್ದರಿದ್ದೇವೆ ಎಂದು ಅವರು ಸವಾಲೆಸೆದರು.

ಇದೇ ವೇಳೆ 1998,99,2004ರಲ್ಲಿ ನಡೆದ ನೇಮಕಾತಿಯನ್ನು ರದ್ದು ಗೊಳಿಸುವಂತೆ ಆಗಸ್ಟ್ 18 ರಂದು ಬೆಳಿಗ್ಗೆ 10 ಗಂಟೆಗೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸುವುದಾಗಿಯೂ ಶಿವರಾಮ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement