ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಆಗಸ್ಟ್ 21ಕ್ಕೆ ಎಂಎಸ್.ರಾಮಯ್ಯ ಕಾಲೇಜಿನಲ್ಲಿ ಪ್ರಾದೇಶಿಕ ಮಟ್ಟದ ಸ್ಪರ್ಧೆ

Srinivasa Murthy VN
Updated On : 14 Aug 2014, 8:30 am

ಬೆಂಗಳೂರು: ಎಂಎಸ್.ರಾಮಯ್ಯ ಕಾಲೇಜಿನ ತಾಂತ್ರಿಕ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗವು ಆಗಸ್ಟ್ 21 ಮತ್ತು 22ರಂದು ಎಲೆಕ್ಟ್ರಾನಿಕ್ಸ್ ನೈಪುಣ್ಯ ಎಂಬ ಪ್ರಾದೇಶಿಕ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ.

ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಾಂತ್ರಿಕ ಮತ್ತು ಸಂವಹನ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಸಿ.ಶರ್ಮಿಳಾ ಸುತ್ತೂರು ಸ್ಪರ್ಧೆಯನ್ನು 2 ವರ್ಷಕ್ಕೊಂದು ಬಾರಿ ನಡೆಸಿಕೊಂಡು ಬರುತ್ತಿದ್ದು, ವರ್ಲ್ಡ್ ಸ್ಕಿಲ್ಸ್ ಇಂಡಿಯಾ ಮತ್ತು ನ್ಯಾಷನಲ್ ಸ್ಕಿಲ್ ಡೆವಲಪ್‌ಮೆಂಟ್ ಸಹಯೋಗದಿಂದ ಮಾಡಲಾಗುತ್ತಿದೆ. ಯಾವುದೇ ಕ್ಷೇತ್ರದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆದರೆ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಬೆಳೆಸಿಕೊಂಡಿರಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಸುಮ.ಕೆ.ವಿ ಅವರು 2015 ರ ಆಗಸ್ಟ್ 11 ರಿಂದ 16ರವರೆಗೆ ಬ್ರೆಜಿಲ್‌ನಲ್ಲಿ ನಡೆಯಲಿರುವ 43ರ ಅಂತರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಸ್ಪರ್ಧೆಗಾಗಿ ಹೊಸ ಪ್ರತಿಭೆಗಳನ್ನು ಹುಡುಕುವ ಪ್ರಯತ್ನವನ್ನು ಕಾಲೇಜು ಮಾಡುತ್ತಿದ್ದು, ಇಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟಕ್ಕೆ ಹೋಗಿ ಅಲ್ಲಿ ತರಭೇತಿಯನ್ನು ಪಡೆದು ಬಳಿಕ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಬಹುದು ಮತ್ತು ಸ್ಪರ್ಧೆಯಲ್ಲಿ ವಿಜೇತರಾದ ಮೂವರಿಗೆ ನಗದು ಬಹುಮಾನವನ್ನು ವಿತರಿಸಲಾಗುತ್ತದೆ. ಸ್ಪರ್ಧೆಯಲ್ಲಿ ಏಕವ್ಯಕ್ತಿ ಪ್ರತಿಭೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಗುಂಪು ಪ್ರತಿಭೆ ಪ್ರದರ್ಶನಕ್ಕೆ ಸ್ಥಾನವಿರುವುದಿಲ್ಲ ಎಂದು ತಿಳಿಸಿದರು.

ಭಾಗವಹಿಸಲಿಚ್ಚಿಸುವ ಪ್ರತಿಯೊಬ್ಬ ವಿದ್ಯಾರ್ಥಿಯೂ 500 ರುಪಾಯಿಗಳನ್ನು ನೀಡಿ, ಆಗಸ್ಟ್ 17ರ ಒಳಗೆ ಈ ಕೆಳಕಂಡ ಇಮೇಲ್ ವಿಳಾಸಕ್ಕೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳ ಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9535963208, 9880570917, 9448482145
ecskills@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement