ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ನಿಮ್ಮ ಊರ ಸುದ್ದಿ ನಿಮ್ಮ ಅಂಗೈ ಮೊಬೈಲ್‌ನಲ್ಲಿ

Srinivasa Murthy VN
Updated On : 14 Aug 2014, 8:28 am

ಬೆಂಗಳೂರು: ನಿಮ್ಮ ಊರ ಸುದ್ದಿ ನಿಮ್ಮ ಮೊಬೈಲ್ ಎಂಬ ಶೀರ್ಷಿಕೆಯಡಿ ಕರ್ನಾಟಕ ವಾರ್ತಾ ಲಿಂಕ್ ಸಂಸ್ಥೆ ಕೆವಿಎಲ್ ಮಾಧ್ಯಮವನ್ನು ಹೊರತಂದಿದೆ.

ನೀವಿದ್ದ ಸ್ಥಳದಲ್ಲೇ ತಮ್ಮ ಮೊಬೈಲ್ ಮೂಲಕ ಟಿವಿ ನೋಡಿ ಸುದ್ದಿ ತಿಳಿದುಕೊಳ್ಳುವ ಅವಕಾಶ ಕಲ್ಪಿಸಿದ್ದು, ಕರ್ನಾಟಕ ವಾರ್ತಾ ಲಿಂಕ್ ಸಂಸ್ಥೆ ಕೆವಿಎಲ್ ಮಾಧ್ಯಮದ ಮೂಲಕವಾಗಿ ಈ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿದೆ.

ಈ ಕುರಿತು ಇಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ನಟಿ ರಾಗಿಣಿ ದ್ವಿವೇದಿ ಅವರು ಮಾತನಾಡಿ, ಸಾಮಾನ್ಯವಾಗಿ ಸುದ್ದಿ ತಿಳಿಯಬೇಕಾದರೆ ಮೊದಲು ನೆನಪಾಗುವುದು ಟಿವಿ, ಪತ್ರಿಕೆಗಳು ಆದರೆ ಇಂದು ನಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೂ ಟಿವಿ ನೋಡಿ ಸುದ್ದಿ ತಿಳಿದುಕೊಳ್ಳಬಹುದು ಎಂಬುದು ಸಂತಸಕರ ಸಂಗತಿ. ಇಂತಹ ಪ್ರಯತ್ನವೊಂದನ್ನು ಮಾಡುತ್ತಿರುವ ಕೆವಿಎಲ್ ತಂಡಕ್ಕೆ ಶುಭಹಾರೈಸುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ತಾವು ನಟಿಸಿರುವ ನಮಸ್ತೇ ಮೇಡಮ್ ಚಿತ್ರ ಸದ್ಯದಲ್ಲೇ ತೆರೆಗೆ ಬರುತ್ತಿದ್ದು, ಚಿತ್ರದ ಆಡಿಯೋ ಸಿಡಿಗಳನ್ನು ಗೋಷ್ಠಿಯಲ್ಲಿ ನೆರೆದಿದ್ದವರಿಗೆ ಹಂಚಿದರು.

ನಂತರ ಮಾತನಾಡಿದ ಹಿರಿಯ ನಿರ್ದೇಶಕ ಭಗವಾನ್ ತಂತ್ರಜ್ಞಾನ ಎಂಬುವುದು ಹರಿಯುವ ನೀರಿದ್ದಂತೆ ಇಂದು ಇರುವ ತಂತ್ರಜ್ಞಾನ ಮುಂದಿನ ದಿನ ಇರುವುದಿಲ್ಲ. ಟಿವಿ, ಪತ್ರಿಕೆಗಳಿಂದ ತಿಳಿದುಕೊಳ್ಳಬೇಕಾಗುತ್ತಿದ್ದ ಸುದ್ದಿ ಇಂದು ನಮ್ಮ ಮೊಬೈಲ್‌ಗಳೇ ದೃಶ್ಯ ಮಾದ್ಯಮಗಳಾಗಿ ಸುದ್ದಿ ತಿಳಿಯುವಂತೆ ಮಾಡುತ್ತದೆ ಎಂದರು. ಅಲ್ಲದೆ ಕೆವಿಎಲ್ ಸಂಸ್ಥೆಯ ತಂತ್ರಜ್ಞಾನ ದೊಡ್ಡ ಕೆಲಸವೇ ಸರಿ ಎಂದ ಅವರು, ಮಾಧ್ಯಮಗಳಲ್ಲಿ ಹೊಸದಾಗಿ ಪಾದಾರ್ಪಣೆ ಮಾಡುತ್ತಿರುವ ಕೆವಿಎಲ್ ಸಂಸ್ಥೆಗೆ ಶುಭ ಹಾರೈಸುತ್ತೇನೆ ಎಂದು ತಿಳಿಸಿದರು.

ಸ್ಮಾರ್ಟ್‌ಫೋನ್ ಬಳಕೆದಾರರು ಕೆವಿಎಲ್ ಟಿವಿಯನ್ನು ನೊಡಬಹುದಾಗಿದ್ದು, ನಿಮ್ಮ ಮೊಬೈಲ್‌ನಲ್ಲಿ www.kvl24*7.tv ಎಂದು ಟೈಪ್ ಮಾಡಿ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಂಡು ಕೆವಿಎಲ್ ಟಿವಿಯನ್ನು ವೀಕ್ಷಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement