ಆಗಸ್ಟ್ 22 ಕ್ಕೆ ಅಂತರಾಷ್ಟ್ರೀಯ ಕಿರುಚಿತ್ರೋತ್ಸವ
ಬೆಂಗಳೂರು: ಸುಚಿತ್ರ ಫಿಲಂ ಸೊಸೈಟಿಯು ಬೆಂಗಳೂರು ಅಂತರಾಷ್ಟ್ರೀಯ ಕಿರುಚಿತ್ರೋತ್ಸವವನ್ನು ಆಗಸ್ಟ್ 22 ರಿಂದ 24 ರವರೆಗೆ ಆಯೋಜಿಸಿದೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಲಾತ್ಮಕ ನಿರ್ದೇಶಕ ಆನಂದ್ ವರದರಾಜ್, ಕಿರುಚಿತ್ರ ಸ್ಪರ್ಧೆಯಲ್ಲಿ ಸುಮಾರು 300 ಚಿತ್ರಗಳು ಆಯ್ಕೆಯಾಗಿದ್ದು, ಈ ಬಾರಿ ಕಲ್ಪನಾತ್ಮಕ ಕಿರುಚಿತ್ರಗಳಿಗೆ ಮಾತ್ರ ಆದ್ಯತೆ ನೀಡಿದ್ದು, ಮುಂದಿನ ದಿನಗಳಲ್ಲಿ ವಿವಿಧ ಭಾಗಗಳಲ್ಲಿ ನಿರ್ಮಿತವಾದ ಕಿರುಚಿತ್ರಗಳಿಗೆ ಆದ್ಯತೆ ನೀಡಲಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ 40ಕ್ಕೂ ಹೆಚ್ಚು ದೇಶ ಹಾಗೂ ವಿದೇಶಿ ನಿರ್ದೇಶಕರು ಭಾಗವಹಿಸಲಿದ್ದು, ಸಮಾರಂಭದ ಮೊದಲ ದಿನ ಕನ್ನಡ ಚಿತ್ರರಂಗ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಚಿತ್ರರಂಗದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು.
ಕಿರುಚಿತ್ರದಲ್ಲಿ ಪಾಲ್ಗೊಳ್ಳಲಿಚ್ಚಿಸುವವರು ಈ ಕೆಳಕಂಡ ವಿಳಾಸಕ್ಕೆ ಭೇಟಿ ನೀಡಿ ಪಾಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.
ಪಾಸ್ ವಿವರ: ವಿದ್ಯಾರ್ಥಿಗಳಿಗೆ 200 ರುಪಾಯಿ, ಸಾರ್ವಜನಿಕರಿಗೆ 300 ರುಪಾಯಿ
ಸ್ಥಳ: ಸುಚಿತ್ರ, ನಂ.36,
9ನೇ ಮುಖ್ಯರಸ್ತೆ, ಬಿ.ವಿ.ಕಾರಂತ್ ರಸ್ತೆ,
ಬನಶಂಕರಿ 2ನೇ ಹಂತ, ಬೆಂ-70
ದೂ.ಸಂ: 08026711785