ಆಗಸ್ಟ್23ಕ್ಕೆ ಕೃಷ್ಣ ಜಯಂತಿ ಸಮಾರಂಭ
ಬೆಂಗಳೂರು: ಕರ್ನಾಟಕ ರಾಜ್ಯ ಯಾದವ ಸಂಘ ಆಗಸ್ಟ್ 23 ರಂದು ವಿಧಾನಸೌಧದ ಬ್ವಾಕೆಂಟ್ ಹಾಲ್ನಲ್ಲಿ ಕೃಷ್ಣ ಜಯಂತಿಯನ್ನು ಹಮ್ಮಿಕೊಂಡಿದೆ.
ಈ ಕುರಿತು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಯಾದವ ಸಂಘದ ಅಧ್ಯಕ್ಷ ಬಿ.ಎಸ್.ಲಕ್ಷ್ಮಿಪತಿ ಈ ಹಿಂದೆ ನಡೆದಿದ್ದ ಯಾದವ ಸಮಾಜದ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಂದು ಕೃಷ್ಣ ಜನ್ಮಾಷ್ಠಮಿಯನ್ನು ಸರ್ಕಾರ ವತಿಯಿಂದ ಆಚರಿಸುವುದಾಗಿ ಆಶ್ವಾಸನೆ ನೀಡಿದ್ದರು. ಅಂದು ಕೋಟ್ಟ ಮಾತನ್ನು ಮುಖ್ಯಮಂತ್ರಿ ನಡೆಸಿಕೊಡುತ್ತಿರುವುದು ಯಾದವ ಸಮಾಜದ ಎಲ್ಲಾ ಜನರಿಗೂ ಸಂತಸ ತಂದಿದೆ.
ಕಾರ್ಯಕ್ರಮ ಬೆಳಿಗ್ಗೆ 11.30ಕ್ಕೆ ಪ್ರಾರಂಭವಾಗಲಿದ್ದು, ಬೆಳಿಗ್ಗೆ 8.30ಕ್ಕೆ ವೇಣುಗೋಪಾಲ ಸ್ವಾಮಿ ದೇವಸ್ಥಾನ ನರ್ಗತರಪೇಟೆಯಿಂದ ಕೃಷ್ಣ ಸ್ವಾಮಿಯ ಮೆರವಣಿಗೆ ಮೂಲಕ ವಿಧಾನಸೌಧವನ್ನು ತಲುಪಲಿದ್ದು, ಎಲ್ಲಾ ಯಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದಾರೆ.
ಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಡಿ.ಕೆ.ಮೋಹನ್ ಬಾಬು, ಡಾ.ಡಿ.ಎ.ಅನಿಲ್ ಲಕ್ಷ್ಮೀನಾರಾಯಣ್ ಖಜಾಂಚಿ ಎ.ಮುನಿಕೃಷ್ಣಪ್ಪ ಸೇರಿದಂತೆ ಗುಂಡೇಗೌಡ, ಜಯರಾಮ್ ಹಾಜರಿದ್ದರು.