ಸರೋಜಮ್ಮ ವಿಧಿವಶ
ಹನುಮಸಾಗರ: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ರಂಗ ಕಲಾವಿದೆ ಸರೋಜಮ್ಮ (87) ಶುಕ್ರವಾರ ನಿಧನರಾದರು. ಇತ್ತೀಚೆಗೆ ಮಗ ಬಸವರಾಡ ತೀರಿಕೊಂಡ ಕೊರಗಿನಲ್ಲಿ ಅನಾರೋಗ್ಯ ಪೀಡಿತರಾಗಿದ್ದರು. ಸರೋಜಮ್ಮ ಅವರಿಗೆ ಓರ್ವ ಪುತ್ರಿ ಶ್ರೀದೇವಿ ಇದ್ದಾರೆ. ಶನಿವಾರ ಅಂತ್ಯಕ್ರಿಯೆ ನಡೆಯಲಿದೆ. ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತ ಪಿ.ಬಿ.ದುತ್ತರಗಿಯವರ ಪತ್ನಿಯಾಗಿದ್ದ ಕಲಾವಿದೆ ಸರೋಜಮ್ಮ ಅವರು ಮೇರು ಕಲಾವಿದೆ. ರಂಗಭೂಮಿಗೆ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸರ್ಕಾರ ಅವರಿಗೆ 2007ರ ನ.1ರಂದು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.