ಮಂಗಳೂರು: ಮುಂಬೈ ಬಳಿ ಸಂಭವಿಸಿದ ಅಪಘಾತವೊಂದರಲ್ಲಿ ತುಳು ಸಮುದಾಯದ ಸಕ್ರಿಯ ಸದಸ್ಯ ಪ್ರಖ್ಯಾತ್ ಶೆಟ್ಟಿ (24 ವರ್ಷ) ಎಂಬುವವರು ನಿಧನರಾಗಿದ್ದಾರೆ.
ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಖ್ಯಾತ್ ಶೆಟ್ಟಿ ಕಳೆದ ಮಂಗಳವಾರ ಕಚೇರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮುಂಬೈ ಬಳಿಯ ಚೆಕ್ ಪೋಸ್ಟ್ ಬಳಿ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ.
ಅಮೆರಿಕದಲ್ಲಿ ವಿಧ್ಯಾಭ್ಯಾಸ ಪೂರ್ಣಗೊಳಿಸಿದ್ದ ಪ್ರಖ್ಯಾತ್ ಶೆಟ್ಟಿ, ಅಲ್ಲಿನ ತುಳು ಸಮುದಾಯ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು. ಪ್ರಖ್ಯಾತ್ ಶೆಟ್ಟಿ ಅವರ ನಿಧನಕ್ಕೆ ತುಳು ಸಮುದಾಯ ಕಂಬನಿ ಮಿಡಿದಿದ್ದು, ಪ್ರಖ್ಯಾತ್ ಶೆಟ್ಟಿ ಆತ್ಮಕ್ಕೆ ಶಾಂತಿಕೋರಿದೆ.