ಲೈಂಗಿಕ ದೌರ್ಜನ್ಯ: ಪ್ರತಿಭಟನೆ ವೇಳೆ ಬಾಲಕಿ ತಾಯಿ ಅಸ್ವಸ್ಥ
ಕೇಂಬ್ರಿಡ್ಜ್ ಶಾಲೆಯ 6 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌಜನ್ಯಕ್ಕೆ ......
ಬೆಂಗಳೂರು: ಕೇಂಬ್ರಿಡ್ಜ್ ಶಾಲೆಯ 6 ವರ್ಷದ ಬಾಲಕಿ ಮೇಲಿನ ಲೈಂಗಿಕ ದೌಜನ್ಯಕ್ಕೆ ಸಂಬಂಧಿಸಿದಂತೆ ಇಂದು ಪ್ರತಿಭಟನೆಗಳಿದಿದ್ದ ಬಾಲಕಿಯ ತಾಯಿ, ಶಾಲೆಯ ಆವರಣದಲ್ಲೇ ಅಸ್ವಸ್ಥಗೊಂಡಿದ್ದಾರೆ.
ದೌರ್ಜನ್ಯ ಕುರಿತಂತೆ ಬಾಲಕಿಯು ಶಾಲೆಯ ಮುಖ್ಯಸ್ಥರು ಹಾಗೂ ಸಹ ಮುಖ್ಯಸ್ಥರಿಗೆ ನಡೆದ ಸಂಗತಿಯನ್ನು ಸಂಪೂರ್ಣವಾಗಿ ತಿಳಿಸಿದ್ದಳು. ಎಲ್ಲಾ ವಿಷಯವನ್ನು ಆಲಿಸಿದ ಶಾಲೆಯ ಮುಖ್ಯಸ್ಥರು ಇಂದು ಪೋಷಕರ ಸಭೆ ಕರೆದಿದ್ದರು. ಆದರೆ ಸಭೆಗೆ ಶಾಲೆಯ ಮುಖ್ಯಸ್ಥರೇ ಗೈರು ಹಾಜರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿರುವ ಬಾಲಕಿ ಪೋಷಕರು, ಘಟನೆ ಕುರಿತಂತೆ ಯಾವುದೇ ಕ್ರಮ ಕೈಗೊಳ್ಳದೆ, ಸಭೆಗೆ ಗೈರು ಹಾಜರಾಗಿರುವ ಶಾಲೆಯ ಮುಖ್ಯಸ್ಥನನ್ನು ಬಂಧಿಸುವಂತೆ ತಿಳಿಸಿದ್ದಾರೆ.
ಅಲ್ಲದೆ ಘಟನೆ ಕುರಿತಂತೆ ಶಿಕ್ಷಣ ಸಚಿವರು ಸ್ಥಳಕ್ಕಾಗಮಿಸವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಬಾಲಕಿಯ ತಾಯಿ ಸ್ಥಳದಲ್ಲೇ ಅಸ್ವಸ್ಥರಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.