ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಗಂಡಿನ ಮೇಲಿನ ಲೈಂಗಿಕ ದೌರ್ಜನ್ಯಕ್ಕಿಲ್ಲವೇ ಬೆಲೆ?

ಸಮಾಜ ಹೆಣ್ಣಿನ ಮೇಲಿನ ದೌರ್ಜನ್ಯದ ಬಗ್ಗೆ ಮಾತ್ರ ಧ್ವನಿ ಎತ್ತುತ್ತಿದೆ. ಶೇ.10ರಷ್ಟು ಪುರುಷರು ಹಾಗೂ ಮಕ್ಕಳು ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ..

Srinivasa Murthy VN
Updated On : 5 Nov 2014, 10:30 am

ಬೆಂಗಳೂರು: ಸಮಾಜ ಹೆಣ್ಣಿನ ಮೇಲಿನ ದೌರ್ಜನ್ಯದ ಬಗ್ಗೆ ಮಾತ್ರ ಧ್ವನಿ ಎತ್ತುತ್ತಿದೆ. ಶೇ.10ರಷ್ಟು ಪುರುಷರು ಹಾಗೂ ಮಕ್ಕಳು ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಯಾರೂ ಪ್ರತಿಭಟಿಸುತ್ತಿಲ್ಲ ಎಂದು ಸಮಾಜ ಸೇವಾ ಸಮಿತಿಯ ಮುಖ್ಯಸ್ಥೆ ಶೋಭಾ ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಇತ್ತೀಚೆಗೆ ಗಂಡು ಮಗುವಿನ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಗುವಿನ ಮಾವನೇ ದೈಹಿಕ ಹಿಂಸೆ ನೀಡಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ.

ಮಗುವಿನ ತಂದೆ ಈ ಸಂಬಂಧ ದೂರು ನೀಡಿದರೂ, ಪೊಲೀಸರು ಸ್ವೀಕರಿಸಿಲ್ಲ. ಇಂಥ ಅನೇಕ ಪ್ರಕರಣಗಳು ನಿತ್ಯ ನಡೆಯುತ್ತಿರುತ್ತದೆ. ಗಂಡು ಮಕ್ಕಳ ಮೇಲಿನ ದೌರ್ಜನ್ಯ ಕೂಡ ಕಾನೂನು ಬಾಹಿರ ಕೃತ್ಯ. ಇಂಥ ಪ್ರಕರಣದ ಅಪರಾಧಿಗಳಿಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಕ್ರಿಸ್ಟ್ ಸಂಸ್ಥೆಯ ಅಧ್ಯಕ್ಷ ಕುಮಾರ್ ಜಾಗೀರ್‌ದಾರ ಮಾತನಾಡಿದರು. ದೌರ್ಜನ್ಯಕ್ಕೊಳಗಾದ ಮಗುವಿನ ತಂದೆ ಜಿತಿನ್, ಕೌಟುಂಬಿಕ ಸಲಹೆಗಾರ ಗುರುರಾಜ್ ಈಡಿಗ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ನಾವು 2009ರಲ್ಲಿ ಮದುವೆಯಾಗಿದ್ದೇವೆ. ಈಗ ಹೆಂಡತಿ ಮಗುವಿನ ಜತೆ ತವರು ಮನೆಯಲ್ಲಿದ್ದಾಳೆ. ಹೆಂಡತಿಯ ತಮ್ಮ ನಿತ್ಯ ಮಗನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ. ಅನೇಕ ಬಾರಿ ಇದು ದೃಢಪಟ್ಟಿದ್ದರೂ, ಹೆಂಡತಿ ದೂರು ನೀಡುತ್ತಿಲ್ಲ. ನನ್ನ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಈಗ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ.
-ಜಿತಿನ್, ದೌರ್ಜನ್ಯಕ್ಕೊಳಗಾದ ಮಗುವಿನ ತಂದೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement