ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ರಾಜಧಾನಿ ನಿವಾಸಿಗಳಿಗೆ ಈಗ ಮದ್ರಾಸ್ ಐ ಕಾಟ

ಕನ್ನಡಿಗರಿಗೆ ಸದಾ ತಮಿಳುನಾಡಿನ ಕಾಟ. ಕೆಲವು ದಿನಗಳ ಹಿಂದೆ ಜಯಲಲಿತಾ.......

Srinivasa Murthy VN
Updated On : 5 Nov 2014, 10:04 am

ವ್ಯಾಪಕವಾಗಿ ಹರಡುತ್ತಿದೆ ಕೆಂಗಣ್ಣು ಕಾಯಿಲೆ
ಬೆಂಗಳೂರು: ಕನ್ನಡಿಗರಿಗೆ ಸದಾ ತಮಿಳುನಾಡಿನ ಕಾಟ. ಕೆಲವು ದಿನಗಳ ಹಿಂದೆ ಜಯಲಲಿತಾ ಪರಪ್ಪನ ಅಗ್ರಹಾರ ಜೈಲು ಸೇರಿ ಒಂದಷ್ಟು ಸಮಸ್ಯೆ ಸೃಷ್ಟಿಸಿದ್ದರೆ, ಕನ್ನಡಿಗರನ್ನು ಈಗ ಮದ್ರಾಸ್ ಐ ಕಾಡುತ್ತಿದೆ.
ಕಸ, ಮಳೆ ನೀರು, ರಸ್ತೆ ಗುಂಡಿ ಸಮಸ್ಯೆಗಳ ಬಗ್ಗೆ ಸರ್ಕಾರದ ಮೇಲೆ ಕೋಪದಿಂದ ಕಣ್ಣು ಕೆಂಪು ಮಾಡಿಕೊಂಡಿದ್ದ ಜನರ ಕಣ್ಣು ಈಗ ನಿಜವಾಗಿಯೂ ಕೆಂಪಾಗಿದೆ. ನಗರಕ್ಕೆ ಬಂದಿರುವ ಕಣ್ಣು ಬೇನೆ ಕೆಲ ದಿನಗಳಿಂದ ವ್ಯಾಪಕವಾಗಿ ಹರಡುತ್ತಿದೆ. ನಗರದ ನಾರಾಯಣ ನೇತ್ರಾಲಯವೊಂದರಲ್ಲೇ ದಿನಕ್ಕೆ ಸುಮಾರು 20 ರಿಂದ 30 ಮಂದಿ ಕೆಂಗಣ್ಣು ಬೇನೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾರಾಯಣ ನೇತ್ರಾಲಯ ಮಾತ್ರವಲ್ಲದೆ ಇತರ ನೇತ್ರಾಲಯಗಳನ್ನೂ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಕಣ್ಣುಗಳ ಸುತ್ತ ಇರುವ ಸೂಕ್ಷ್ಮ ಪದರಕ್ಕೆ ತಗಲುವ ಸೋಂಕು ಕೆಂಗಣ್ಣು ಬೇನೆ. ಸಾಮಾನ್ಯವಾಗಿ ವೈರಸ್ ಅಥವಾ ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುವ ಈ ರೋಗದಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ರೋಗದ ಲಕ್ಷಣಗಳು
ಕಣ್ಣಿನ ಸುತ್ತಲೂ ಬಿಳಿಯ ಅಥವಾ ಹಳದಿ ಬಣ್ಣದ ಲೋಳೆ ಆವರಿಸಿಕೊಳ್ಳುತ್ತದೆ. ಕಣ್ಣುಗಳು ಕೆಂಪಗಾಗಿ ನೀರು ಸುರಿಯುತ್ತದೆ. ಒಂದು ಕಣ್ಣಿಗೆ ತಗಲುವ ಸೋಂಕು ಇನ್ನೊಂದು ಕಣ್ಣಿಗೂ ಬೇಗ ತಗುಲುತ್ತದೆ. ಕಣ್ಣಿನ ಊತ ಮತ್ತು ಸೋಂಕಿನಿಂದ ಕಿವಿಯ ಮುಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಗಂಟಲಿನಲ್ಲಿ ಊತ, ಜ್ವರ, ಶೀತ ಮುಂತಾದ ಲಕ್ಷಣಗಳು ಕಂಡು ಬರುತ್ತದೆ.

ಮುನ್ನೆಚ್ಚರಿಕೆ ಕ್ರಮಗಳೇನು?

ಕೆಂಗಣ್ಣಿನಿಂದ ಬಳಲುತ್ತಿರುವ ವ್ಯಕ್ತಿಯನ್ನು ದಿಟ್ಟಿಸಿ ನೋಡುವುದರಿಂದ ಈ ರೋಗ ಹರಡುವುದಿಲ್ಲ. ಆದರೆ ಸಮಸ್ಯೆಯುಳ್ಳ ವ್ಯಕ್ತಿಯ ಕೈ ಕುಲುಕುವುದರಿಂದ, ಆತ ಬಳಸಿದ ಕರವಸ್ತ್ರ ಮೊಬೈಲ್ ಮುಂತಾದ ವಸ್ತುಗಳನ್ನು ಮುಟ್ಟುವುದರಿಂದ ಸೋಂಕು ಬೇರೆಯವರಿಗೂ ತಗುಲಿ ರೋಗ ಬರುವ ಸಾಧ್ಯತೆಯಿರುತ್ತದೆ. ಪರೋಕ್ಷ ಸಂಪರ್ಕದಿಂದ ಈ ರೋಗ ಹರಡುತ್ತದೆ. ಆದ್ದರಿಂದ ಸೋಂಕು ತಗುಲಿದ ವ್ಯಕ್ತಿ ಜತೆ ಸಂಪರ್ಕ ಬೆಳೆಸಿದಲ್ಲಿ ಕೈ ಹಾಗೂ ಕಣ್ಣುಗಳನ್ನು ತೊಳೆದುಕೊಳ್ಳುವುದು ಅತ್ಯವಶ್ಯ.
ಶಾಲೆಗಳಲ್ಲಿ ಈ ಸೋಂಕು ಹೆಚ್ಚು ವೇಗವಾಗಿ ಹರಡುತ್ತದೆ. ಆದ್ದರಿಂದ ಪೋಷಕರು ಈ ರೋಗ ಕಾಣಿಸಿಕೊಂಡ ಸಂದರ್ಭದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದೇ ಉತ್ತಮ.

ಚಿಕಿತ್ಸೆ ಏನು?
ಕಣ್ಣುಬೇನೆ ಸೋಂಕಿನಿಂದ ಬಳಲುತ್ತಿರುವವರಿಗೆ ದ್ವಿತೀಯ ಹಂತರ ಬ್ಯಾಕ್ಟೀರಿಯಾ ಸೋಂಕು ತಗುಲದಂತೆ ನೇತ್ರ ವೈದ್ಯರು ಆಂಟಿ ಬಯಾಟಿಕ್ ಡ್ರಾಪ್ಸ್‌ನ್ನು ನೀಡುತ್ತಾರೆ. ನೋವು ಮತ್ತು ಕಿರಿಕಿಕಿ ಶಮನಗೊಳಿಸಲು ಮಾತ್ರೆ ಹಾಗೂ ಔಷಧ ನೀಡಲಾಗುತ್ತದೆ. ಸಾಮಾನ್ಯವಾಗಿ 4 ರಿಂದ 7 ದಿನಗಳಲ್ಲಿ ಈ ಸೋಂಕು ವಾಸಿಯಾಗುತ್ತದೆ.

ಸೋಂಕು ತಡೆಗಟ್ಟುವುದು ಹೇಗೆ?

 -ಡಾ. ಎಸ್. ಭುಜಂಗಶೆಟ್ಟಿ,
ಅಧ್ಯಕ್ಷರು, ನಾರಾಯಣ ನೇತ್ರಾಲಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement