ಕೇಂದ್ರ ಸರ್ಕಾರ ಸ್ವಾಮ್ಯದ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟಿಡ್. 
ಜಿಲ್ಲಾ ಸುದ್ದಿ

ಪವರ್ ಗ್ರಿಡ್‌ಗೆ ಭ್ರಷ್ಟಾಚಾರ ಶಾಕ್!

ಪ್ರಧಾನಿ ಮೋದಿ ಮಿತವ್ಯಯದ ಮಾತನಾಡುತ್ತಿದ್ದರೆ, ಕೇಂದ್ರ ಸರ್ಕಾರ ಸ್ವಾಮ್ಯದ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟಿಡ್..

-ಕಮ ರವಿಶಂಕರ
ಚಿತ್ರದುರ್ಗ:
ಪ್ರಧಾನಿ ಮೋದಿ ಮಿತವ್ಯಯದ ಮಾತನಾಡುತ್ತಿದ್ದರೆ, ಕೇಂದ್ರ ಸರ್ಕಾರ ಸ್ವಾಮ್ಯದ ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟಿಡ್ (ಪಿಜಿಸಿಐಎಲ್)ಅನವಶ್ಯಕ ಸಾಮಗ್ರಿಗಳನ್ನು ಯಥೇಚ್ಛವಾಗಿ ಖರೀದಿಸುತ್ತ ದೇಶಾದ್ಯಂತ ಸಂಸ್ಥೆಯ ಉಗ್ರಾಣಗಳನ್ನೇ ಕಸದ ತೊಟ್ಟಿಗಳನ್ನಾಗಿ ಮಾಡಿಕೊಂಡಿದೆ. ಈ ಸಾರ್ವಜನಿಕ ಉದ್ದಿಮೆಯ ಉಗ್ರಾಣಗಳಲ್ಲಿ ವ್ಯರ್ಥವಾಗಿ ಬಿದ್ದಿರುವ ಪರಿಕರಗಳ ಮೌಲ್ಯ ಬರೋಬ್ಬರಿ 15, 600 ರು.ಕೋಟಿ!

ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರವೀಂದ್ರನಾಥ ನಾಯಕ ಅವರು ಕ್ಷೇತ್ರೀಯ ಕಾರ್ಯಪಾಲಕ ನಿರ್ದೇಶಕರಿಗೆ ಸುತ್ತೋಲೆ ಹೊರಡಿಸಿ, ಪ್ರತಿ ತಿಂಗಳೂ ಉಗ್ರಾಣಗಳ ಪರಿಶೀಲನೆ ನಡೆಸಿ, ಸಾಮಾಗ್ರಿಗಳ ಉಪಯೋಗದ ಯೋಜನೆ ರೂಪಿಸಬೇಕು ಎಂದು ಆದೇಶಿಸಿದ್ದಾರೆ.

ಯಾವುದೇ ಒಂದು ಯೋಜನೆಗೆ ಸಾಮಗ್ರಿ ಖರೀದಿಸಿ, ಅದರ ಉಪಯೋಗದ ಕುರಿತು ವರದಿ ನೀಡಿ, ಮತ್ತೆ ಖರೀದಿಸುವುದು ಕ್ರಮ. ಆದರೆ, ಈ ಸಂಸ್ಥೆಯಲ್ಲಿ ಸಾಮಗ್ರಿಗಳು ಬಳಕೆಯಾಗದೇ ಬಿದ್ದಿದ್ದರೂ ಮತ್ತೆ ಮತ್ತೆ ಸಾಮಗ್ರಿ ಖರೀದಿಸಿರುವುದರ ಹಿಂದೆ ಭಾರಿ ಭ್ರಷ್ಟಾಚಾರದ ಕುರುಹು ಕಾಣುತ್ತದೆ. ಅಲ್ಲದೆ, ಪಿಜಿಸಿಐಎಲ್ ತನ್ನ ಕಚೇರಿಗಳಲ್ಲಿ ಲಕ್ಷಾಂತರ ಬೆಲೆ ಬಾಳುವ ಅಲಂಕಾರಿಕ ದೀಪಗಳು, ಪೀಠೋಪಕರಣಗಳನ್ನು ಅಳವಡಿಸಿಕೊಂಡು ದುಂದು ವೆಚ್ಚದ ಸಂಸ್ಥೆಯಾಗಿ ಮಾರ್ಪಟ್ಟಿದೆ.

ಕಳಪೆ ಸಾಬೀತು: ಪಿಜಿಸಿಐಎಲ್ ರು.400 ಕೋಟಿ ಮೊತ್ತದ ಸೇಲಂ-ಟುಟಿಕುರಾನ್, 750 ಕೆವಿ ವಿದ್ಯುತ್ ಮಾರ್ಗ ನಿರ್ಮಾಣ ಕಾರ್ಯವನ್ನು ಮೆ. ಇಎಂಸಿ ಲಿಮಿಟೆಡ್ ಎಂಬ ಕಂಪನಿಗೆ ನೀಡಿತು. ಈ ಸಂಸ್ಥೆಯ ಕೆವಿ ವಿದ್ಯುತ್ ಮಾರ್ಗ ನಿರ್ಮಾಣ ಬಹುತೇಕ ಕಾಮಗಾರಿ ಕಳಪೆ ಮಟ್ಟದಾಗಿದೆ ಎಂದು ಸಾಬೀತಾಗಿದೆ. ಅದಾಗ್ಯೂ ಮಧುರೈನ ಹೆಸರಾಂತ ತ್ಯಾಗರಾಜ ಕಾಲೇಜ್ ಆಫ್ ಎಂಜಿನಿಯರಿಂಗ್ ಅಧಿಕೃತ ಲ್ಯಾಬ್ ನೀಡಿದೆ ಎಂಬಂತೆ ನಕಲಿ ಟೆಸ್ಟ್ ರಿಪೋರ್ಟ್ ಸೃಷ್ಟಿಸಿ, ಪವರ್ ಗ್ರಿಡ್‌ನಿಂದ ಪೂರ್ಣ ಹಣ ಪಡೆದಿದೆ. ಈ ಬಗ್ಗೆ ತಿಳಿದ ಎಂಜಿನಿಯರಿಂಗ್ ಎಂಜಿನಿಯರಿಂಗ್ ಕಾಲೇಜು ಮಧುರೈ ಪೊಲೀಸ್ ಠಾಣೆಯಲ್ಲಿ ಸಂಬಂಧಿಸಿದ ಕಂಪನಿ ಮತ್ತು ಇತರರ ವಿರುದ್ಧ ಕ್ರಿಮಿನಲ್ ಕೇಸು ದಾಖಲು ಮಾಡಿದೆ. ಆದರೂ ಪವರ್ ಗ್ರಿಡ್ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಯಾವ ಕ್ರಮವನ್ನೂ ಕೈಗೊಂಡಿಲ್ಲ.

ಪವರ್ ಗ್ರಿಡ್ ಉನ್ನತಾಧಿಕಾರಿಗಳು ನಿರ್ಮಾಣ ಆಗಲಿರುವ ವಿದ್ಯುತ್ ಮಾರ್ಗಕ್ಕೆ ವಿದ್ಯುತ್ ಹರಿಸುವ ದಿನಾಂಕವನ್ನು ಮೊದಲೇ ನಿಗದಿ ಮಾಡುತ್ತಾರೆ. ಸಂಬಂಧಿಸಿದ ಎಂಜಿನಿಯರ್ ಮತ್ತು ಗುತ್ತಿಗೆದಾರರ ಮೇಲೆ ವಿಪರೀತ ಒತ್ತಡ ಹಾಕುತ್ತಾರೆ. ಇದರಿಂದಾಗಿ ಕಳಪೆ ಗುಣಮಟ್ಟವಿದ್ದರೂ ಎಂಜಿನಿಯರ್‌ಗಳು ಅನಿವಾರ್ಯವಾಗಿ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಇದೇ ರೀತಿ ಒತ್ತಡ ಹಾಕಿದ್ದರಿಂದ ಕಳೆದ ನ.25ರಂದು ಕಂಪನಿಯ ಜನರಲ್ ಮ್ಯಾನೇಜರ್ ಆರ್‌ವೈ ರಾವ್ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಈ ರೀತಿಯ ಅದೆಷ್ಟೋ ಅವ್ಯವಹಾರಗಳು ಈ ಸಂಸ್ಥೆಯಲ್ಲಿ ಘಟಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಚ್ಚಿಕುಳಿತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!