ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬಗೆಬಗೆಯ ತಿನಿಸು ಸವಿಯ ಬನ್ನಿ

Srinivasa Murthy VN
Updated On : 12 Oct 2014, 10:21 am

ಬೆಂಗಳೂರು: ಸಿನಿರ್ಜಿಪ್ರೋ ಪ್ರಮೋಷನ್ಸ್ ಆ್ಯಂಡ್ ಈವೆಂಟ್ಸ್ ಇಂಡಿಯಾ ಪ್ರೈ.ಲಿಮಿಟೆಡ್ ವತಿಯಿಂದ ಬೆಂಗಳೂರು ಫುಡ್ ಫೆಸ್ಟಿವಲ್ ಜಯಮಹಲ್ ಪ್ಯಾಲೆಸ್‌ನಲ್ಲಿ ಅ.17ರಿಂದ 17ರವರೆಗೆ ನಡೆಯಲಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರ್. ರಾಘವೇಂದ್ರ, ಬೆಂಗಳೂರು ಬಹು ಸಂಸ್ಕೃತಿಯ ಜನರು ವಾಸಿಸುತ್ತಿದ್ದು, ವಿವಿಧ ಆಹಾರ ಪದ್ಧತಿ ಬಳಕೆಯಲ್ಲಿದೆ. ಇದನ್ನು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ನಗರದಲ್ಲಿ ಪ್ರಥಮ ಬಾರಿಗೆ ಬೃಹತ್ ಆಹಾರ ಮೇಳ ಆಯೋಜಿಸಲಾಗಿದೆ ಎಂದು ಹೇಳಿದರು.

ಮೇಳದಲ್ಲಿ ಬೆಂಗಳೂರಿನ ಸ್ಥಳೀಯ ರುಚಿಗಳಾದ ಅಕ್ಕಿ ಮತ್ತು ರಾಗಿ ರೊಟ್ಟಿ, ಮುದ್ದೆ, ಅವರೆಕಾಳಿನ ತಿನಿಸುಗಳು ದೊರೆಯಲಿವೆ. ಕೊಡಗು, ಮಂಗಳೂರು, ಮೈಸೂರು ಆಹಾರ ಶೈಲಿಯೊಂದಿಗೆ ಕೇರಳ, ಕರ್ನಾಟಕ, ಆಂಧ್ರ, ಪಶ್ಚಿಮ ಬಂಗಾಳ, ರಾಜಸ್ಥಾನ, ಪಂಜಾಬ್, ನಾಗಾಲ್ಯಾಂಡ್, ಉತ್ತರ ಪ್ರದೇಶ ಒಳಗೊಂಡಂತೆ 10 ರಾಜ್ಯಗಳ ವಿಶೇಷ ಆಹಾರ ದೊರೆಯಲಿವೆ. ಇದರೊಂದಿಗೆ ಈ ಅಡುಗೆಗಳನ್ನು ಕಲಿಯ ಬಯಸುವವರಿಗೆ ವಿವಿಧ ಹೊಟೆಲ್‌ಗಳ ಹೆಸರಾಂತ ಬಾಣಸಿಗರು ತಯಾರಿಸುವ ವಿಧಾನ ಹೇಳಿಕೊಡುವರು. ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ ಮೇಳೆ ನಡೆಯಲಿದ್ದು, ಒಗ್ಗರಣೆ ಡಬ್ಬಿ ಅಡುಗೆ ಕಾರ್ಯಕ್ರಮದ ಮುರಳಿ ರಾಯಭಾರಿಯಾಗಿದ್ದಾರೆ. ಹೈವೇ ಆನ್ ಮೈ ಪ್ಲೇಟ್ ಎಂಬ ಆಹಾರ ಕಾರ್ಯಕ್ರಮದ ರಾಕಿ ಸಿಂಗ್ ಮತ್ತು ಮಯೂರ್ ಶರ್ಮಾ ಆಹಾರೋತ್ಸವದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ತಿಳಿಸಿದರು.

ಟ್ರಕ್ಕಲ್ಲಿ ಆಹಾರ: ಆಹಾರೋತ್ಸವದಲ್ಲಿ ದೇಶ, ವಿದೇಶಗಳ ಪ್ರಖ್ಯಾತ ಬಾಣಸಿಗರು ಭಾಗವಹಿಸಲಿದ್ದು, ಇದರೊಂದಿಗೆ 16 ಹೊಟೆಲ್‌ಗಳು ಪಾಲ್ಗೊಳ್ಳಲ್ಲಿವೆ. ಮುಂಬೈ, ಪಶ್ಚಿಮ ಬಂಗಾಳ, ಬೆಂಗಳೂರು, ಮೈಸೂರು, ಪುಣೆಗಳಿಂದ ಬಾಣಸಿಗರು ಬರಲಿದ್ದಾರೆ. ಮೇಳದಲ್ಲಿ ಫುಡ್ ಟ್ರಕ್ ಎಂಬ ವ್ಯವಸ್ಥೆಯಲ್ಲಿ ಟ್ರಕ್‌ನಲ್ಲಿ ಹೋಟೆಲ್ ಅನ್ನೇ ತೆರೆದು ಪಿಜ್ಜಾ, ಬರ್ಗರ್, ನೂಡಲ್ಸ್‌ಗಳನ್ನು ನಿಮಿಷಗಳಲ್ಲಿ ಮಾಡಿಕೊಡಲಿದ್ದಾರೆ. ಮುಂಬೈ ಹಾಗೂ ಬೆಂಗಳೂರಿನ ಆಹಾರ ಟ್ರಕ್‌ಗಳು ಮೇಳಕ್ಕೆ ಬರಲಿವೆ. ಮೇಳದಲ್ಲಿ 40 ಆಹಾರ ಮಳಿಗೆಗಳನ್ನು ತೆರೆಯಲಾಗುವುದು. ದೊಡ್ಡವರಿಗೆ 200 ರುಪಾಯಿ ಪ್ರವೇಶ ಶುಲ್ಕವಿದ್ದು, ಮಕ್ಕಳಿಗೆ ಉಚಿತ.

ಲಖನೌ ದೊನ್ನೆ, ಹೈದರಾಬಾದ್ ಬೊಂಬು ಬಿರಿಯಾನಿ ಸವಿಯಾದ ಅವಕಾಶ ಕಲ್ಪಿಸಲಾಗಿದೆ. ಮೂರು ದಿನವೂ ಸಂಜೆ ಸಂಗೀತ ರಸಸಂಜೆ, ಹಾಸ್ಯ ಕಾರ್ಯಕ್ರಮ, ನೃತ್ಯ ಹಾಗೂ ಫ್ಯಾಶನ್ ಷೋ ಆಯೋಜಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement