ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮೂವರ ಪ್ರಾಣ ಉಳಿಸಿ, ತನ್ನ ಪ್ರಾಣ ಬಿಟ್ಟ ಯುವಕ

ಕಾಲು ಜಾರಿ ನೀರಿಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ಮೂವರನ್ನು ರಕ್ಷಿಸಲು ಹೋಗಿ ಯುವಕನೋರ್ವ ತಾನೇ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Srinivasa Murthy VN
Updated On : 16 Oct 2014, 11:07 am

ಶಿವಮೊಗ್ಗ: ಕಾಲು ಜಾರಿ ನೀರಿಗೆ ಬಿದ್ದು ಪ್ರಾಣಾಪಾಯದಲ್ಲಿದ್ದ ಮೂವರನ್ನು ರಕ್ಷಿಸಲು ಹೋಗಿ ಯುವಕನೋರ್ವ ತಾನೇ ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಪಿಕ್ನಿಕ್‌ಗಾಗಿ ತನ್ನ ಕುಟುಂಬದೊಂದಿಗೆ ಶಿವಮೊಗ್ಗದ ಸಾಗರ ತಾಲ್ಲೂಕಿನ ತಳಕಳಲೆ ಜಲಾಶಯಕ್ಕೆ ಆಗಮಿಸಿದ್ದ ಇರ್ಷಾದ್ (27 ವರ್ಷ) ಎಂಬ ಯುವಕ ನೀರಿಗೆ ಬಿದ್ದ ತನ್ನ ಸಹೋದರ ಸಂಬಂಧಿಗಳನ್ನು ರಕ್ಷಿಸಲು ಹೋಗಿ ತಾನೇ ಪ್ರಾಣ ಕಳೆದುಕೊಂಡಿದ್ದಾನೆ. ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ತಳಗಡ್ಡೆ ನಿವಾಸಿಯಾದ ಇರ್ಷಾದ್ ತನ್ನ 8 ಜನರ ಕುಟುಂಬದೊಂದಿಗೆ ತಳಕಳಲೆ ಜಲಾಶಯಕ್ಕೆ ಪಿಕ್ನಿಕ್‌ಗಾಗಿ ಆಗಮಿಸಿದ್ದನು.

ತಳಕಳಲೆ ಜಲಾಶಯದ ಹಿನ್ನೀರಿನಲ್ಲಿ ಆಟವಾಡುವಾಗ ಇರ್ಷಾದ್ ದೊಡ್ಡಪ್ಪನ ಮಕ್ಕಳಾದ ಇಬ್ರಾಹಿಂ, ಅಬ್ದುಲ್, ತಬುಸಮ್ ಬಾನು ಎಂಬುವವರು ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಇರ್ಷಾದ್ ತಾನೇ ನೀರಿಗೆ ಧುಮುಕಿ ಈ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಕೊನೆಯಲ್ಲಿ ಈಜಿ ತಡ ಸೇರಬೇಕು ಎನ್ನುವಾಗ ಇರ್ಷಾದ್ ಸುಳಿಗೆ ಸಿಲುಕಿದ್ದಾನೆ. ಸಾಕಷ್ಟು ಹರಸಾಹಸ ಪಟ್ಟರೂ ಇರ್ಷಾದ್ ಸುಳಿಯಿಂದ ಹೊರಬರಲು ಸಾಧ್ಯವಾಗದೇ ಸಾವನ್ನಪ್ಪಿದ್ದಾನೆ.

ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಕಾರ್ಗಲ್ ಪೊಲೀಸ್ ಠಾಣೆಯ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಅಗ್ನಿಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಮುಳುಗಿದ್ದ ಇರ್ಷಾದ್ ಮೃತದೇಹವನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement