ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮಾರ್ಚ್ 12ರಿಂದ ದ್ವಿತೀಯ ಪಿಯು ಪರೀಕ್ಷೆ

Srinivasa Murthy VN
Updated On : 17 Oct 2014, 6:42 am

ಬೆಂಗಳೂರು: 2014 ಮತ್ತು 2015ರ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ಶುಕ್ರವಾರ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಪ್ರಸ್ತುತ ವೇಳಾಪಟ್ಟಿಯು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ವೇಳಾಪಟ್ಟಿ ಕುರಿತಂತೆ ಆಕ್ಷೇಪಣೆಗಳಿದ್ದರೆ ಅರ್ಜಿ ಸಲ್ಲಿಸಲು ಇದೇ ನವೆಂಬರ್ 15ರವರೆಗೆ ಕಾಲಾವಕಾಶ ನೀಡಲಾಗಿದೆ. ಬಳಿಕ ಮತ್ತೊಮ್ಮೆ ಸಭೆ ನಡೆಸಿ ವೇಳಾಪಟ್ಟಿ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ತಾತ್ಕಾಲಿಕ ವೇಳಾಪಟ್ಟಿ ಇಂತಿದೆ.
ಮಾರ್ಚ್ 12 – ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ
ಮಾರ್ಚ್ 13 – ಕನ್ನಡ, ತಮಿಳು, ಅರೇಬಿಕ್, ಮಲಯಾಳಂ, ಫ್ರೆಂಚ್
ಮಾರ್ಚ್ 14 – ರಾಜ್ಯಶಾಸ್ತ್ರ, ಭೂಗರ್ಭಶಾಸ್ತ್ರ, ಮೂಲಗಣಿತ
ಮಾರ್ಚ್ 16 - ಅರ್ಥಶಾಸ್ತ್ರ
ಮಾರ್ಚ್ 17 – ಭೂಗೋಳಶಾಸ್ತ್ರ, ಗಣಿತ
ಮಾರ್ಚ್ 18 – ಹಿಂದಿ, ತೆಲುಗು
ಮಾರ್ಚ್ 19 – ತರ್ಕಶಾಸ್ತ್ರ, ಲೆಕ್ಕಶಾಸ್ತ್ರ, ಗೃಹವಿಜ್ಞಾನ
ಮಾರ್ಚ್ 20 – ಭೌತಶಾಸ್ತ್ರ, ಶಿಕ್ಷಣ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ, ಮನಃಶಾಸ್ತ್ರ
ಮಾರ್ಚ್ 23 – ಇತಿಹಾಸ, ಗಣಕ ವಿಜ್ಞಾನ
ಮಾರ್ಚ್ 24 – ಐಚ್ಛಿಕ ಕನ್ನಡ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್
ಮಾರ್ಚ್ 25 - ಸಮಾಜಶಾಸ್ತ್ರ
ಮಾರ್ಚ್ 26 - ಇಂಗ್ಲಿಷ್
ಮಾರ್ಚ್ 27 – ಮರಾಠಿ, ಉರ್ದು, ಸಂಸ್ಕೃತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement