ಬಾಲಕಿ ಮೇಲೆ ಅತ್ಯಾಚಾರ: ಆರ್ಕಿಡ್ಸ್ ಶಾಲೆಯ ಅಟೆಂಡರ್ ಗುಂಡಣ್ಣ ಸೆರೆ
ಆರ್ಕಿಡ್ಸ್ ಶಾಲೆಯ 3 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಆರೋಪಿ ಗುಂಡಣ್ಣ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು: ಆರ್ಕಿಡ್ಸ್ ಶಾಲೆಯ 3 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿರುವ ಆರೋಪಿ ಗುಂಡಣ್ಣ ಎಂಬುವವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಗುಂಡಣ್ಣ ಆರ್ಕಿಡ್ಸ್ ಶಾಲೆಯ ಅಟೆಂಡರ್ ಎಂದು ತಿಳಿದುಬಂದಿದ್ದು, ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದ ಬಳಿಕ ನಾಪತ್ತೆಯಾಗಿದ್ದನು. ಆರೋಪಿಯ ಬಂಧನಕ್ಕಾಗಿ ಕಳೆದ ಹಲವು ದಿನಗಳಿಂದ ಬಲೆ ಬೀಸಿ ಕಾದು ಕುಳಿತ್ತಿದ್ದ ಸಿಸಿಬಿ ಪೊಲೀಸರು ಇಂದು ಆರೋಪಿ ಗುಂಡಣ್ಣನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುಂಡಣ್ಣನ ಪೂರ್ವಾಪರವನ್ನು ಪೊಲೀಸರು ಪರಿಶೀಲಿಸಿದ್ದು, ಆತನ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿಲ್ಲ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತ ಕಾನೂನು ಪೋಕ್ಸೋ ಕಾಯ್ದೆಯಡಿಯಲ್ಲಿ ಗುಂಡಣ್ಣನನ್ನು ಬಂಧಿಸಲಾಗಿದೆ. ಗುಂಡಣ್ಣ ಆರ್ಕಿಡ್ಸ್ ಶಾಲೆಯ ಕಚೇರಿಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.
ಆರ್ಕಿಡ್ಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಈ ಸಂಬಂಧ ಪೋಷಕರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಅತ್ಯಾಚಾರಕ್ಕೆ ಒಳಗಾದ ಬಾಲಕಿಗೆ ಪೊಲೀಸರು ಫೋಟೋ ತೋರಿಸಿದ್ದಾರೆ. ಫೋಟೋದಲ್ಲಿ ಶಾಲೆಯ ಅಂಟೆಡರ್ ಅನ್ನು ಗುರುತಿಸಿದೆ. ಈ ಅಂಕಲ್ ನನ್ನನ್ನು ಹೊಡೆದಿದ್ದು ಎಂದು ಬಾಲಕಿ ಹೇಳಿಕೆ ನೀಡಿದ್ದಳು.