ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕಿಸ್ಸಿಂಗ್ ಡೇ ತಡೆಯಲು ಸಿದ್ಧ

ಕೊಚ್ಚಿಯ ಮರಿನ್ ಡ್ರೈವ್‌ನಲ್ಲಿ ನ.2ರಂದು ಆಯೋಜಿಸಲಾಗಿರುವ ಕಿಸ್ಸಿಂಗ್‌ಡೇ ಆಚರಣೆಯನ್ನು ತಡೆಯಲು ಶ್ರೀರಾಮ ಸೇನೆ ಕಾನೂನು ಕೈಗೆತ್ತಿಕೊಳ್ಳಲು ಸಿದ್ಧ!

Srinivasa Murthy VN
Updated On : 1 Nov 2014, 10:32 am

ಹುಬ್ಬಳ್ಳಿ: ಕೊಚ್ಚಿಯ ಮರಿನ್ ಡ್ರೈವ್‌ನಲ್ಲಿ ನ.2ರಂದು ಆಯೋಜಿಸಲಾಗಿರುವ ಕಿಸ್ಸಿಂಗ್‌ಡೇ ಆಚರಣೆಯನ್ನು ತಡೆಯಲು ಶ್ರೀರಾಮ ಸೇನೆ ಕಾನೂನು ಕೈಗೆತ್ತಿಕೊಳ್ಳಲು ಸಿದ್ಧ!

ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕೇರಳ ಶ್ರೀರಾಮಸೇನೆ ಘಟಕ ಕಿಸ್ಸಿಂಗ್ ಡೇ ವಿರುದ್ಧ ಹೋರಾಟ ನಡೆಸಲಿದೆ ಎಂದಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿಸ್ಸಿಂಗ್ ಡೇನಂತಹ ಪ್ರವೃತ್ತಿ  ಸರಿಯಲ್ಲ. ಇದು ಭಾರತೀಯ ಸಂಸ್ಕೃತಿಯಲ್ಲ. ಇದನ್ನು ಭಾರತೀಯರು ಒಪ್ಪುವುದಿಲ್ಲ. ನಮ್ಮದು ಸಂಪ್ರದಾಯಬದ್ಧ ರಾಷ್ಟ್ರ. ಹಾದಿ ಬೀದಿಯಲ್ಲಿ ಮುತ್ತಿಕ್ಕುವುದಕ್ಕೆ ನಾವು ವಿದೇಶಿಯರಲ್ಲ. ಇಂಥ ಹುಚ್ಚು ಕಾರ್ಯಕ್ರಮಗಳಿಗೆ ಸರ್ಕಾರ ಅವಕಾಶ ನೀಡಬಾರದು. ಶ್ರೀರಾಮ ಸೇನೆಯ ಕೇರಳ ಘಟಕದ ರಾಜ್ಯಾಧ್ಯಕ್ಷ  ಜಯೇಷ್ ಈಗಾಗಲೇ ಕಿಸ್ಸಿಂಗ್ ಡೇ ಆಚರಣೆಗೆ ಅವಕಾಶ ನೀಡಬಾರದು ಎಂದು ಕೇರಳದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಇಷ್ಟಾಗಿಯೂ ಆಚರಣೆಗೆ ಅವಕಾಶ ನೀಡಿದ್ದೇ ಆದರೆ ಅದನ್ನು ಶ್ರೀರಾಮ ಸೇನೆ ತಡೆಯುತ್ತದೆ. ಒಂದೊಮ್ಮೆ ಗಲಾಟೆ, ಹಾನಿ ಸಂಭವಿಸದರೆ ಇದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ ಎಂದಿದ್ದಾರೆ.

ಮೋದಿ ವಿರೋಧಿ ಹೇಳಿಕೆ: ಬುಖಾರಿ ಬಂಧಿಸಿ
ದೆಹಲಿಯ ಜಾಮಾ ಮಸೀದಿಯ ಮುಖ್ಯಸ್ಥ ಸೈಯ್ಯದ್ ಅಹ್ಮದ್ ಬುಖಾರಿ ತನ್ನ ಮಗನ ಉತ್ತರಾಧಿಕಾರಿ ನೇಮಕ ಸಮಾರಂಭಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸುವುದಿಲ್ಲ ಎಂಬ ಹೇಳಿಕೆ ಖಂಡನೀಯ. ಈ ಹಿನ್ನಲೆಯಲ್ಲಿ ಬುಖಾರಿಯನ್ನು ಬಂಧಿಸಬೇಕು. ಮೋದಿ ಅವರನ್ನು ಬುಖಾರಿ ಸಮಾರಂಭಕ್ಕೆ ಆಹ್ವಾನಿಸಬೇಕೆಂದಿಲ್ಲ. ಆದರೆ ವಿರೋಧಿ ರಾಷ್ಟ್ರ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್‌ರನ್ನು ಅಹ್ವಾನಿಸಿ ಇಡೀ ಭಾರತ ದೇಶದ ನಿಂದನೆ ಮಾಡಿದ್ದಾರೆ. ಬುಖಾರಿ ವಿರುದ್ಧ ದೇಶದ್ರೋಹ ಪ್ರಕರಣ ಹಾಕಬೇಕು. ದೇಶದ್ರೋಹ ಚಟುವಟಿಕೆಯಲ್ಲಿ ಭಾಗಿಯಾಗಿರುವ ಬುಖಾರಿ ವಿರುದ್ಧ 18 ಪ್ರಕರಣಗಳು ದಾಖಲಾಗಿವೆ. ಭಾರತೀಯ ಮುಸ್ಲಿಮರೂ ಬುಖಾರಿಯನ್ನು ಒಪ್ಪುವುದಿಲ್ಲ. ಇಂಥ ದೇಶದ್ರೋಹಿ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುತಾಲಿಕ್ ಆಗ್ರಹಿಸಿದರು.

ದತ್ತ ಪೀಠಕ್ಕೆ ಅರ್ಚಕರನ್ನು ನೇಮಿಸಿ: ಪ್ರತಿ ವರ್ಷದಂತೆ ಈ ಸಲವೂ ನ.2ರಂದು ದತ್ತಮಾಲಾ ಅಭಿಯಾನ ನಡೆಸಲಾಗುವುದು. ಈ ಬಾರಿ 5000 ಭಕ್ತರು ದತ್ತಮಾಲೆ ಧರಿಸಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಅಂದು ಶೋಭಾಯಾತ್ರೆ ನಡೆಸಲಾಗುವುದು. ದತ್ತ ಪೀಠವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಒಪ್ಪಿಸಬೇಕು. ದತ್ತಪೀಠದಲ್ಲಿ ಮುಸ್ಲಿಮರಿಂದ ಪೂಜೆ, ಪ್ರಸಾದ ವಿತರಣೆ ಮಾಡಿಸುವುದನ್ನು ತಡೆದು ಹಿಂದೂ ಅರ್ಚಕರನ್ನು ನೇಮಿಸಲು ಸರ್ಕಾರ ಮುಂದಾಗಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement