ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಪ್ರೇಮಲತಾ ದಂಪತಿಗೆ ಭೂಗತ ಪಾತಕಿಯಿಂದ ಬೆದರಿಕೆ

Srinivasa Murthy VN
Updated On : 1 Nov 2014, 1:46 am

ದ.ಕನ್ನಡ: ರಾಮಚಂದ್ರಾಪುರ ಮಠಾಧೀಶರ ರಾಘೇಂದ್ರ ಭಾರತಿ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ವಾಪಸ್ ಪಡೆಯದಿದ್ದರೆ ನಿಮ್ಮನ್ನು ಕೊಲೆ ಮಾಡುವುದಾಗಿ ದೂರು ದಾಖಲಿಸಿರುವ ಪ್ರೇಮಲತಾ ಮತ್ತು ದಿವಾಕರ್ ದಂಪತಿಗೆ ಭೂಗತ ಪಾತಕಿಯೋರ್ವ ಕರೆ ಮಾಡಿದ್ದಾನೆ.

ಕಲಿ ಯೋಗೀಶ್ ಎಂಬಾತನಿಂದ ದಿವಾಕರ್ ಅವರಿಗೆ ಕರೆ ಬಂದಿದ್ದು, ನಿಮ್ಮ ಸಮಸ್ಯೆ ಏನಿದ್ದರೂ ಸಮಾಜದ ವತಿಯಿಂದ ಪರಿಹರಿಸಿಕೊಳ್ಳುವಂತೆಯೂ ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಹೇಳಿದ್ದಾನೆ. ಮೂಲಗಳ ಪ್ರಕಾರ ಕಲಿಯೋಗೀಶ್ ಮೂಲತಃ ಮಂಗಳೂರು ಮೂಲದವನಾಗಿದ್ದು, ವಿದೇಶದಿಂದ ಪ್ರೇಮಲತಾ ಅವರ ಪತಿ ದಿವಾಕರ್ ಅವರಿಗೆ ಕರೆ ಮಾಡಿ ಕೇಸ್ ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.

ಸ್ವಾಮೀಜಿ ವಿರುದ್ಧ ಕೇಸ್ ಹಾಕಿರುವುದು ಸರಿಯಲ್ಲ. ಕೇಸು-ಗೀಸು ಅನ್ನೋದೆಲ್ಲಾ ಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ. ನಿಮ್ಮ ಲೆದರ್ ವ್ಯವಹಾರವೂ ಗೊತ್ತು. ಸ್ವಾಮೀಜಿ ವಿರುದ್ಧ ಕೇಸ್ ಹಾಕಲು ಯಾರು ಹೇಳಿದ್ದು ಮತ್ತು ಅದರ ಹಿಂದೆ ಯಾರಿದ್ದಾರೆ. ನಿಮಗೆ ಯಾರು ಹಣ ನೀಡುತ್ತಿದ್ದಾರೆ ಎಂಬ ಎಲ್ಲ ಅಂಶಗಳು ನಮಗೆ ಗೊತ್ತು.

ಸಮಾಜಕ್ಕೆ ನೀವು ಕೆಟ್ಟ ಹುಳುಗಳಿದ್ದಂತೆ. 90 ಬಾರಿ ಅತ್ಯಾಚಾರವಾಗಿದೆ ಎಂದು ಹೇಳಿದ್ದೀರಲ್ಲ. ಮೊದಲೇ ಏಕೆ ಹೇಳಲಿಲ್ಲ. ಗೋ ಸಂರಕ್ಷಣೆ ಮಾಡುತ್ತಾ ಸಮಾಜ ಸೇವೆಯಲ್ಲಿ ಸ್ವಾಮೀಜಿ ತೊಡಗಿದ್ದಾರೆ. ಒಳ್ಳೆಯ ಕೆಲಸ ಮಾಡುವವರ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ನಿಮ್ಮ ಸಮಾಜದವರ ಮಧ್ಯಸ್ಥಿಕೆಯಲ್ಲಿಯೇ ಸಮಸ್ಯೆ ಬಗೆಹರಿಸಿಕೊಳ್ಳಿ. ಇಲ್ಲವಾದರೆ ನಿಮ್ಮನ್ನು ಕೊಂದುಹಾಕುತ್ತೇನೆ ಎಂದು ಕಲಿ ಯೋಗೀಶ್ ಬೆದರಿಕೆ ಹಾಕಿದ್ದಾನೆ.

ಬೆದರಿಕೆ ಕರೆ ಹಿನ್ನಲೆಯಲ್ಲಿ ಪ್ರೇಮಲತಾ ಪತಿ ದಿವಾಕರ ಶಾಸ್ತ್ರಿ ಅವರು ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕರೆಯ ಸಂಖ್ಯೆಯನ್ನು ಆಧರಿಸಿ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement