ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮೈತ್ರಿಯಾ ಯಾರೆಂದು ಗೊತ್ತಿಲ್ಲ: ಡಾಟಿ ಸದಾನಂದಗೌಡ

ನನಗೆ ಮೈತ್ರಿಯಾಗೌಡ ಅವರು ಯಾರೆಂದು ತಿಳಿದಿಲ್ಲ, ಒಂದು ಬಾರಿ ಮಾತ್ರ ದೂರವಾಣಿಯಲ್ಲಿ ಮಾತನಾಡಿದ್ದೆ ಎಂದು ಕಾರ್ತಿಕ್ ಅವರ ತಾಯಿ ಡಾಟಿ ಸದಾನಂದಗೌಡ ಅವರು ಹೇಳಿದ್ದಾರೆ.

Srinivasa Murthy VN
Updated On : 5 Sept 2014, 11:24 am

ಬೆಂಗಳೂರು: ನನಗೆ ಮೈತ್ರಿಯಾಗೌಡ ಅವರು ಯಾರೆಂದು ತಿಳಿದಿಲ್ಲ, ಒಂದು ಬಾರಿ ಮಾತ್ರ ದೂರವಾಣಿಯಲ್ಲಿ ಮಾತನಾಡಿದ್ದೆ ಎಂದು ಕಾರ್ತಿಕ್ ಅವರ ತಾಯಿ ಡಾಟಿ ಸದಾನಂದಗೌಡ ಅವರು ಹೇಳಿದ್ದಾರೆ.

ಕಾರ್ತಿಕ್-ಮೈತ್ರಿ ವಿವಾ(ಹ)ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಕಾರ್ತಿಕ್ ಅವರ ತಾಯಿ ಡಾಟಿ ಸದಾನಂದಗೌಡ ಅವರನ್ನು ಗುರುವಾರ ರಾತ್ರಿ ವಿಚಾರಣೆಗೊಳಪಡಿಸಿದ್ದು. ಈ ವೇಳೆ ಮೈತ್ರಿಯಾ ಗೌಡ ಅವರು ಯಾರೆಂದು ತಮಗೆ ತಿಳಿದಿಲ್ಲ. ಒಂದು ಬಾರಿ ಮಾತ್ರ ದೂರವಾಣಿಯಲ್ಲಿ ಮಾತನಾಡಿದ್ದೆ ಎಂದು ಡಾಟಿ ಹೇಳಿದ್ದಾರೆ.

ಸಂಜಯನಗರದಲ್ಲಿರುವ ಸದನಾಂದಗೌಡ ಅವರ ಮನೆಗೆ ತೆರಳದಿದ ಜೆ.ಸಿನಗರ ಉಪ-ವಿಭಾಗದ ಎಸಿಪಿ ಓಂಕಾರಯ್ಯ ನೇತೃತ್ವದ ಪೊಲೀಸ್ ತಂಡ ತೆರಳಿ ವಿಚಾರಣೆ ನಡೆಸಿದ್ದು, ಈ ವೇಳೆ ಪ್ರಕರಣದ ಕುರಿತು ತಮಗೆ ಹೆಚ್ಚು ಮಾಹಿತಿ ತಿಳಿದಿಲ್ಲ ಎಂದು ಹೇಳಿದ್ದಾರೆ. 'ವೈಯುಕ್ತಿಕವಾಗಿ ಮೈತ್ರಿಯಾಗೌಡ ಯಾರೆಂದು ನನಗೆ ತಿಳಿದಿಲ್ಲ. ಅವರನ್ನು ನಾನು ಎಂದೂ ಭೇಟಿ ಮಾಡಿಲ್ಲ. ಆದರೆ ಒಂದು ಬಾರಿ ಮಾತ್ರ ಕಾರ್ತಿಕ್ ಸ್ನೇಹಿತೆ ಎಂದು ಹೇಳಿಕೊಂಡು ನನಗೆ ಕರೆ ಮಾಡಿದ್ದಳು. ಇದನ್ನು ಹೊರತುಪಡಿಸಿದರೆ ಆಕೆಯ ಕುರಿತು ನನಗೇನೂ ಹೆಚ್ಚು ತಿಳಿದಿಲ್ಲ ಎಂದು ಡಾಟಿ ಸದಾನಂದಗೌಡ ಅವರು ಹೇಳಿದ್ದಾರೆ.

ಇದೇ ವೇಳೆ ತಮ್ಮ ಪುತ್ರ ಕಾರ್ತಿಕ್ ಪ್ರಕರಣದ ಕುರಿತು ಮಾತನಾಡಿದ ಡಾಟಿ ಅವರು, ಪತಿ ಸದಾನಂದಗೌಡ ಅವರ ರಾಜಕೀಯ ಏಳಿಗೆಯನ್ನು ಸಹಿಸಲಾಗದವರು ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಇದರಲ್ಲಿ ಮೈತ್ರಿಯಾಗೌಡ ಪಾತ್ರಧಾರಿಯಾಗಿದ್ದು, ತಮ್ಮ ಕುಟುಂಬದ ಆಸ್ತಿ ಕಬಳಿಸಲು ವಿರೋಧಿಗಳಿಂದ ಹುನ್ನಾರ ನಡೆದಿದೆ ಎಂದು ಡಾಟಿ ಸದಾನಂದಗೌಡ ಅವರು ಪೊಲೀಸರಲ್ಲಿ ಹೇಳಿಕೆ ನೀಡಿದ್ದಾರೆ.

ಡಾಟಿ-ಮೈತ್ರಿಯಾ ದೂರವಾಣಿ ಸಂಭಾಷಣೆ ವಿವರ ಬಹಿರಂಗ
ಇದೇ ವೇಳೆ ಡಾಟಿ ಸದಾನಂದಗೌಡ ಮತ್ತು ಮೈತ್ರಿಯಾಗೌಡ ಅವರ ನಡುವಿನ ದೂರವಾಣಿ ಸಂಭಾಷಣೆ ಬಹಿರಂಗಗೊಂಡಿದ್ದು, ಸಂಭಾಷಣೆಯಲ್ಲಿ ಮೈತ್ರಿಯಾಗೌಡ ಅವರನ್ನು ಡಾಟಿ ಸದಾನಂದಗೌಡ ಅವರು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

'ಕಾರ್ತಿಕ್‌ಗೌಡ ಬಗ್ಗೆ ಮಾತನಾಡಬೇಕು' ಎಂದು ಮೈತ್ರಿಯಾ ಹೇಳಿದಾಗ 'ಕಾರ್ತಿಕ್ ಏನು ಮಾಡಿದ್ದಾನೆ. ಅವನ ಬಗ್ಗೆ ನೀನು ಏನು ಮಾತನಾಡಬೇಕು' ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮೈತ್ರಿಯಾ, 'ಕಾರ್ತಿಕ್ ಹಲವು ದಿನಗಳಿಂದ ತನ್ನನ್ನು ಮಾತನಾಡಿಸುತ್ತಿಲ್ಲ' ಎಂದು ಹೇಳಿದ್ದಾಳೆ. ಇದಕ್ಕೆ ಉತ್ತರಿಸಿದ ಡಾಟಿ ಅವರು, 'ನೀನು ಕೇವಲ 6 ತಿಂಗಳ ಹಿಂದಷ್ಟೇ ಬಂದಿದ್ದೀಯಾ. ಕಾರ್ತಿಕ್‌ನನ್ನು ನಾವು ತುಂಬಾ ಸೂಕ್ಷ್ಮವಾಗಿ ನೋಡಿಕೊಳ್ಳುತ್ತಿದ್ದೇವೆ. ಆತನಿಗೆ ಆರೋಗ್ಯ ಸಮಸ್ಯೆ ಇದ್ದು, ಅವನಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ 'ಕಾರ್ತಿಕ್ ಎಂದೂ ತನಗೆ ಮೆಮೋರಿ ಲಾಸ್ ಇದ್ದಂತೆ ಮಾತನಾಡಿಲ್ಲ. ಸಾಮಾನ್ಯವಾಗಿಯೇ ಮಾತನಾಡುತ್ತಿದ್ದ. ಇತ್ತೀಚೆಗಷ್ಟೇ ಮಾತು ಬಿಟ್ಟಿದ್ದಾನೆ' ಎಂದು ಹೇಳಿದ್ದಾಳೆ.

ಇದಕ್ಕೆ ಉತ್ತರಿಸಿದ ಡಾಟಿ ಅವರು 'ನಮ್ಮ ಮನೆಯಲ್ಲಿ ಇದಕ್ಕೆಲ್ಲಾ ಆಸ್ಪದವಿಲ್ಲ. 'ನಾನು ನನ್ನ ತಾಯಿಯ ಊರಿಗೆ ಬಂದಿದ್ದು, ಮಧ್ಯಾಹ್ನ 12 ಗಂಟೆಯ ಬಳಿಕ ಮನೆಗೆ ಬಾ' ಎಂದು ದೂರವಾಣಿಯನ್ನು ಕಟ್ ಮಾಡಿದ್ದಾರೆ. ಸುಮಾರು ನಿಮಿಷಗಳ ಕಾಲ ದೂರವಾಣಿ ಸಂಭಾಷಣೆ ನಡೆದಿದ್ದು, ಪರೋಕ್ಷವಾಗಿ ಕಾರ್ತಿಕ್-ಮೈತ್ರಿಯಾ ಸಂಬಂಧವನ್ನು ಡಾಟಿ ಸದಾನಂದಗೌಡ ಅವರು ವಿರೋಧಿಸಿದ್ದಾರೆ.

ಪ್ರಸ್ತುತ ಬಹಿರಂಗವಾಗಿರುವ ದೂರವಾಣಿ ಸಂಭಾಷಣೆ ಆಗಸ್ಟ್ 10 ಮತ್ತು 11ರಂದು ದಾಖಲಾಗಿದ್ದು ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement