ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಮಾಧ್ಯಮ ಪ್ರತಿನಿಧಿಗಳ ಮೇಲೆ "ನಿತ್ಯಾ'' ಶಿಷ್ಯರ ಹಲ್ಲೆ

ಪುರುಷತ್ವ ಪರೀಕ್ಷೆಗೆ ಒಳಗಾಗಿ ಆಶ್ರಮಕ್ಕೆ ಮರಳಿದ ಕುರಿತು ಸುದ್ದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ನಿತ್ಯಾನಂದನ ಶಿಷ್ಯರು ಹಲ್ಲೆ ಮಾಡಿದ್ದಾರೆ.

Srinivasa Murthy VN
Updated On : 9 Sept 2014, 12:26 pm

ಬೆಂಗಳೂರು: ಪುರುಷತ್ವ ಪರೀಕ್ಷೆಗೆ  ಒಳಗಾಗಿ ಆಶ್ರಮಕ್ಕೆ ಮರಳಿದ ಕುರಿತು ಸುದ್ದಿ ಮಾಡಲು ತೆರಳಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ನಿತ್ಯಾನಂದನ ಶಿಷ್ಯರು ಹಲ್ಲೆ ಮಾಡಿದ್ದಾರೆ.

ನಿತ್ಯಾನಂದನನ್ನು ಕರೆತಂದ ಆಂಬುಲೆನ್ಸ್ ಆಶ್ರಮದ ಬಳಿ ಬರುತ್ತಿದ್ದಂತೆಯೇ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ವಾಹನಗಳನ್ನು ಬೆನ್ನತ್ತಿ ಬಂದ ನಿತ್ಯಾ ಶಿಷ್ಯರು ಏಕಾಏಕಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡಿದರು. ಸುದ್ದಿವಾಹಿನಿಗಳ ವಾಹನಗಳನ್ನು ಜಖಂ ಗೊಳಿಸಿದರು. ಈ ವೇಳೆ ಪೊಲೀಸರು ಸ್ಥಳದಲ್ಲಿಯೇ ಇದ್ದರಾದರೂ ಮೂಕಪ್ರೇಕ್ಷಕರಾಗಿದ್ದರು.

ನಿತ್ಯಾನಂದನ ಶಿಷ್ಯರ ದಾಳಿಯನ್ನು ಖಂಡಿಸಿ ಆಶ್ರಮದ ಮುಂದೆಯೇ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮನಗರ ಎಸ್ಪಿ ಅನುಪಮ್ ಅಗರವಾಲ್ ಅವರು ಸ್ಥಳಕ್ಕೆ ಆಗಮಿಸಿ, ಕರ್ತವ್ಯಲೋಪವೆಸಗಿದ ಪೋಲೀಸರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಲ್ಲದೆ ಪತ್ರಕರ್ತರ ಮೇಲೆ ದಾಳಿ ಮಾಡಿದವರ ವಿರುದ್ಧವಾಗಿಯೂ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡ ಪತ್ರಕರ್ತರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯುಂಟು ಮಾಡಿದ ನಿತ್ಯಾನಂದನ ಶಿಷ್ಯರ ವಿರುದ್ದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement