ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಅ.17ರಂದು ತಲಕಾವೇರಿಯಲ್ಲಿ ತೀರ್ಥೋದ್ಭವ

ಅಕ್ಟೋಬರ್ 17ರಂದು ಭಾಗಮಂಡಲದ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ ಎಂದು ಭಾಗಮಂಡಲ ದೇವಾಲಯ ಸಮಿತಿ ಘೋಷಿಸಿದೆ.

Srinivasa Murthy VN
Updated On : 10 Sept 2014, 7:18 am

ಕೊಡಗು: ಅಕ್ಟೋಬರ್ 17ರಂದು ಭಾಗಮಂಡಲದ ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿದೆ ಎಂದು ಭಾಗಮಂಡಲ ದೇವಾಲಯ ಸಮಿತಿ ಘೋಷಿಸಿದೆ.

ಕರ್ನಾಟಕದ ಪ್ರಮುಖ ಯಾತ್ರಾ ಮತ್ತು ಪ್ರವಾಸ ಸ್ಥಳವಾದ ತಲಕಾವೇರಿಯಲ್ಲಿ ಅಕ್ಟೋಬರ್ 17ರಂದು ತೀರ್ಥೋದ್ಭವವಾಗಲಿದ್ದು, ಅಂದು ಮೀನ ಲಗ್ನದಲ್ಲಿ ಸಂಜೆ 6 ಗಂಟೆ 7 ನಿಮಿಷಕ್ಕೆ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ ಎಂದು ಭಾಗಮಂಡಲ ದೇವಾಲಯ ಸಮಿತಿ ಘೋಷಿಸಿದೆ.

ಕಾವೇರಿ ಕೊಡಗಿಗರ ಕುಲದೇವತೆಯಾಗಿದ್ದು, ತೀರ್ಥೋದ್ಭವ ದಿನವನ್ನು ಪ್ರಮುಖ ಹಬ್ಬವಾಗಿ ಆಚರಿಸಲಾಗುತ್ತದೆ. ಕಾವೇರಿ ತೀರ್ಥೋತ್ಭವದ ಮುಹೂರ್ತದ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲಿಯೇ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳಲಿದೆ. ಭಾಗಮಂಡಲದ "ತಲಕಾವೇರಿ" ಕಾವೇರಿ ನದಿಯ ಉಗಮ ಸ್ಥಾನವಾಗಿದ್ದು, ತೀರ್ಥೋದ್ಭವದ ದಿನದಂದು ಕಾವೇರಿ ನೀರನ್ನು ಪ್ರೋಕ್ಷಣೆ ಮಾಡಿಕೊಂಡರೆ ಪುಣ್ಯ ಮತ್ತು ಒಳಿತಾಗುತ್ತದೆ ಎಂಬ ಪ್ರತೀತಿ ಇದೆ.

ಹೀಗಾಗಿ ಪ್ರತಿ ವರ್ಷ ನಡೆಯುವ ತೀರ್ಥೋದ್ಭವದಲ್ಲಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ತೀರ್ಥವನ್ನು ತಮ್ಮ ತಮ್ಮ ಮನೆಗೆ ಕೊಂಡೊಯ್ಯುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement