ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕಾಶ್ಮೀರ ಪ್ರವಾಹ: ಕರ್ನಾಟಕಕ್ಕೆ ಮರಳಿದ ಕನ್ನಡಿಗರ ತಂಡ

ಕಾಶ್ಮೀರ ಪ್ರವಾಹಕ್ಕೆ ಸಿಲುಕಿ ಪ್ರಾಣಾಪಾಯದ ಭೀತಿ ಎದುರಿಸುತ್ತಿದ್ದ ಕನ್ನಡಿಗರ ಪೈಕಿ ೧೦ ಮಂದಿಯನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದೆ.

Srinivasa Murthy VN
Updated On : 10 Sept 2014, 11:42 am

ಬೆಂಗಳೂರು: ಕಾಶ್ಮೀರ ಪ್ರವಾಹಕ್ಕೆ ಸಿಲುಕಿ ಪ್ರಾಣಾಪಾಯದ ಭೀತಿ ಎದುರಿಸುತ್ತಿದ್ದ ಕನ್ನಡಿಗರ ಪೈಕಿ ೧೦ ಮಂದಿಯನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲಾಗಿದೆ.

ಕೃಷ್ಣ ಮೂರ್ತಿ ಅವರ ಪತ್ನಿ ವತ್ಸಲ, ಮಂಜುನಾಥ್, ಸೀತಮ್ಮ, ಕಿರಣ್, ಬಾಲಕ ಶಶಾಂಕ್ ,ಗಂಗಾಧರ್, ಭಾರತಿ, ಶ್ರೀ ಹರ್ಷ ಮತ್ತು ಪೂರ್ಣಿಮಾ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಸರ್ಕಾರ ಆಯೋಜನೆ ಮಾಡಿದ್ದ ವಿಶೇಷ ವಿಮಾನದಲ್ಲಿ ಶ್ರೀನಗರ, ಅಮೃತಸರ, ಮುಂಬೈ ಮಾರ್ಗವಾಗಿ ಬೆಂಗಳೂರು ತಲುಪಿದ್ದಾರೆ.

ಪ್ರವಾಸಕ್ಕೆಂದು ಕಳೆದ ಸೆ.೩ರಂದು ಕಾಶ್ಮೀರಕ್ಕೆ ತೆರಳಿದ್ದ ಬೆಂಗಳೂರಿನ ಸಿಕ್ಕಲಸಂದ್ರ ಮತ್ತು ಹೊಸಕೆರೆಹಳ್ಳಿಯ ಕೃಷ್ಣ ಮೂರ್ತಿ ಕುಟುಂಬ ಸೆ.೬ ರಂದು ಸಂಭವಿಸಿದ್ದ  ಪ್ರವಾಹದಲ್ಲಿ ಅಪಾಯಕ್ಕೆ ಸಿಲುಕಿತ್ತು. ಇವರು ತಂಗಿದ್ದ ಶ್ರೀನಗರದ ಜವಾಹರ್ ರಸ್ತೆಯಲ್ಲಿರುವ ಹೋಟೆಲ್ ಗೆ ಪ್ರವಾಹದ ನೀರು ನುಗ್ಗಿ ಇವರು ಅತಂತ್ರರಾಗಿದ್ದರು.

ಭಾರತೀಯ ಯೋಧರು ನಡೆಸಿದ ರಕ್ಷಣಾ ಕಾರ್ಯಾಚರಣೆಯಿಂದ ಇವರು ಸುರಕ್ಷಿತವಾಗಿ ಪ್ರಾಣಪಾಯದಿದಂದ ಪಾರಾಗಿ ಬಂದಿದ್ದಾರೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇವರನ್ನು ಬಂಧು ಮಿತ್ರರು ಆತ್ಮಿಯವಾಗಿ ಬರ ಮಾಡಿಕೊಂಡರು.

ಪ್ರಸ್ತುತ ಕಾಶ್ಮೀರದಲ್ಲಿ ನೀರಿನ ಪ್ರವಾಹದ ಮಟ್ಟ ಕುಸಿದಿದ್ದು. ಶೀಘ್ರದಲ್ಲಿಯೇ ಉಳಿದ ಕನ್ನಡಿಗರನ್ನು ಬೆಂಗಳೂರಿಗೆ ಕರೆ ತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement