ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ವಿದೇಶಿಯಿಂದ ಮಹಿಳೆ ಮೇಲೆ 8 ತಿಂಗಳ ನಿರಂತರ ಅತ್ಯಾಚಾರ

ಹರ್ಯಾಣ ಮೂಲದ ಮಹಿಳೆ ಮೇಲೆ ಹಾಲೆಂಡ್ ಮೂಲದ ವ್ಯಕ್ತಿಯೋರ್ವ ಸತತ 8 ತಿಂಗಳಿನಿಂದ ನಿರಂತರ ಅತ್ಯಾಚಾರ ಮಾಡಿರುವ ಕುರಿತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Srinivasa Murthy VN
Updated On : 10 Sept 2014, 5:57 am

ಬೆಂಗಳೂರು: ಹರ್ಯಾಣ ಮೂಲದ ಮಹಿಳೆ ಮೇಲೆ ಹಾಲೆಂಡ್ ಮೂಲದ ವ್ಯಕ್ತಿಯೋರ್ವ ಸತತ 8 ತಿಂಗಳಿನಿಂದ ನಿರಂತರ ಅತ್ಯಾಚಾರ ಮಾಡಿರುವ ಕುರಿತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಾಲೆಂಡ್ ಮೂಲದ ಪೀಟರ್ ಎಂಬಾತ ದೇವನಹಳ್ಳಿಯ ಸ್ವಿಸ್ ಟೌನ್‌ನಲ್ಲಿ ಖಾಸಗಿ ಸಂಸ್ಥೆಯೊಂದನ್ನು ನಡೆಸುತ್ತಿದ್ದು, ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಹರ್ಯಾಣ ಮೂಲದ 33 ವರ್ಷದ ಮಹಿಳೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಪೀಟರ್, ಕಳೆದ ಜನವರಿ ತಿಂಗಳಿನಿಂದಲೂ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇತ್ತೀಚೆಗೆ ಮಹಿಳೆ ಮದುವೆಗಾಗಿ ಆತನನ್ನು ಕೇಳಿದಾಗ ಆತ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ.

ಹೀಗಾಗಿ ಮಹಿಳೆ ಪೊಲೀಸರ ಮೊರೆ ಹೋಗಿದ್ದು, ನಿನ್ನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರ ಬಳಿ ಮಹಿಳೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಸ್ತುತ ಇಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖವಾಗಿ ಪೀಟರ್ ಮೂಲತಃ ಹಾಲೆಂಡ್‌ನವನಾಗಿದ್ದು, ಈ ಕುರಿತು ಭಾರತದಲ್ಲಿರುವ ಹಾಲೆಂಡ್ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಯಭಾರ ಕಚೇರಿಯಿಂದ ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement