ಜಿಲ್ಲಾ ಸುದ್ದಿ

ನನಗೂ ಮೈತ್ರಿಯಾಗೂ ಯಾವುದೇ ರೀತಿಯ ಸಂಬಂಧವಿಲ್ಲ: ಕಾರ್ತಿಕ್ ಗೌಡ

ತಮಗೂ ಮತ್ತು ನಟಿ ಮೈತ್ರಿಯಾ ಗೌಡ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಡಿವಿಎಸ್ ಪುತ್ರ ಕಾರ್ತಿಕ್ ಗೌಡ ಅವರು ಹೇಳಿದ್ದಾರೆ.

ಬೆಂಗಳೂರು: ತಮಗೂ ಮತ್ತು ನಟಿ ಮೈತ್ರಿಯಾ ಗೌಡ ಅವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಶುಕ್ರವಾರ ವಿಚಾರಣೆಗೆ ಹಾಜರಾಗಿರುವ ಡಿವಿಎಸ್ ಪುತ್ರ ಕಾರ್ತಿಕ್ ಗೌಡ ಅವರು ಹೇಳಿದ್ದಾರೆ.

ಮೈತ್ರಿಯಾ-ಕಾರ್ತಿಕ್ ವಿವಾ(ಹ)ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಆರ್.ಟಿ.ನಗರ ಪೊಲೀಸರ ಎದುರು ಹಾಜರಾದ ಕಾರ್ತಿಕ್ ಗೌಡ ಅವರನ್ನು ಪೊಲೀಸರು ಗೌಪ್ಯವಾಗಿ ಮಡಿವಾಳದಲ್ಲಿರುವ ಕೆಎಸ್‌ಆರ್‌ಪಿ ಐಬಿಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ. ಬೆಂಗಳೂರು ಉತ್ತರ ವಿಭಾಗಾಧಿಕಾರಿ ಡಿಸಿಪಿ ಸುರೇಶ್ ಕುಮಾರ್ ಮತ್ತು ಡಿಸಿಪಿ ಓಂಕಾರಯ್ಯ ಅವರ ನೇತೃತ್ವದಲ್ಲಿ ಕಾರ್ತಿಕ್ ಗೌಡ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.

ಸತತ 9 ಗಂಟೆಗಳ ಕಾಲ ಕಾರ್ತಿಕ್ ಗೌಡ ಅವರನ್ನು ವಿಚಾರಣೆಗೊಳಪಡಿಸಲಾಗಿದ್ದು, ಈ ವೇಳೆ ಕಾರ್ತಿಕ್ ತಮಗೂ ಮೈತ್ರಿಯಾಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ನಮ್ಮ ತಂದೆಯ ಹೆಸರಿಗೆ ಧಕ್ಕೆ ತರುವ ಉದ್ದೇಶದಿಂದ ನನ್ನ ವಿರುದ್ಧ ಇಂತಹ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದು ಕಾರ್ತಿಕ್ ಆರೋಪಿಸಿದ್ದಾರೆ. 'ನನಗೂ ಮೈತ್ರಿಯಾಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಕೆಲವೊಂದು ಪಾರ್ಟಿಗಳಲ್ಲಿ ನಾನು ಮೈತ್ರಿಯಾಳನ್ನು ಭೇಟಿ ಮಾಡಿದ್ದೆ. ನನ್ನ ಸ್ನೇಹಿತನೋರ್ವನಿಂದ ಮೈತ್ರಿಯಾಳ ಪರಿಚಯವಾಗಿತ್ತು. ಬಳಿಕ ಮೈತ್ರಿಯಾಳೇ ನನ್ನ ಮೊಬೈಲ್‌ಗೆ ಪದೇ ಪದೇ ಕರೆ ಮಾಡುತ್ತಿದ್ದಳು. ನಾನು ಆಕೆಯನ್ನು ಮದುವೆಯಾಗಿದ್ದೇನೆ ಎಂಬ ಆಕೆಯ ಆರೋಪ ಶುದ್ಧ ಸುಳ್ಳು. ನಾನು ಆಕೆಯನ್ನು ಮದುವೆಯಾಗಿಯೇ ಇಲ್ಲ. ಅಲ್ಲದೆ ನಾನು ಆಕೆಯನ್ನು ಅಪಹರಣ ಮಾಡಿರಲಿಲ್ಲ ಮತ್ತು ಮಂಗಳೂರಿಗೆ ಬಾ ಎಂದು ಕೂಡ ಕರೆದಿರಲಿಲ್ಲ' ಎಂದು ಕಾರ್ತಿಕ್ ಹೇಳಿದ್ದಾರೆ.

'ಮಾಧ್ಯಮಗಳಲ್ಲಿ ಮೈತ್ರಿಯಾ ನೀಡಿರುವ ಕೆಲ ಫೋಟೊಗಳ ಕುರಿತು ನನಗೆ ಅನುಮಾನವಿದ್ದು, ಪಾರ್ಟಿಯಲ್ಲಿನ ಫೋಟೊಗಳನ್ನು ಬಿಟ್ಟರೆ ಕೆಲ ಫೋಟೊಗಳಲ್ಲಿ ನಾನು ಭಾಗಿಯಾಗಿರಲೇ ಇಲ್ಲ. ನನ್ನ ಕೆಲ ಸ್ನೇಹಿತರು ಆಕೆಗೂ ಪರಿಚಯವಿದ್ದು, ಅವರ ಮೂಲಕ ನನ್ನ ಖಾಸಗಿ ವಿಚಾರಗಳ ಕುರಿತು ಆಕೆ ತಿಳಿದುಕೊಂಡಿರುವ ಸಾಧ್ಯತೆ ಇದೆ. ಅಲ್ಲದೆ ಆಕೆ ನನ್ನೊಂದಿಗೆ ಮಾತನಾಡಿದ್ದೇನೆ ಎಂದು ಮಾಧ್ಯಮಗಳಿಗೆ ನೀಡಿರುವ ದೂರವಾಣಿ ಸಂಭಾಷಣೆಗಳಲ್ಲಿ ನಾನು ತೊಡಗಿರಲಿಲ್ಲ. ಇವುಗಳನ್ನು ತಂತ್ರಜ್ಞಾನವನ್ನು ಬಳಸಿ ಮಾಡಲಾಗಿದೆ'.

'ಅಲ್ಲದೆ ಸಂಭಾಷಣೆಯಲ್ಲಿರುವ ಧ್ವನಿ ನನ್ನದಲ್ಲ. ತಂದೆಯ ವರ್ಚಸ್ಸು ಹಾಳು ಮಾಡುವ ಉದ್ದೇಶದಿಂದಲೇ ನನ್ನ ನಿಶ್ಚಿತಾರ್ಥದ ದಿನವೇ ಮೈತ್ರಿಯಾ ಮಾಧ್ಯಮಗಳಲ್ಲಿ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾಳೆ' ಎಂದು ಕಾರ್ತಿಕ್ ಪೊಲೀಸರ ಎದುರು ಹೇಳಿಕೊಂಡಿದ್ದಾರೆ.

ಒಟ್ಟಾರೆ ಕಳೆದ ಹಲವು ದಿನಗಳಿಂದ ರಾಜ್ಯಾದ್ಯಂತ ಚರ್ಚೆಯಾಗುತ್ತಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಮತ್ತು ನಟ ಮೈತ್ರಿಯಾ ಗೌಡ ಅವರ ವಿವಾಹ ವಿವಾದ ಪ್ರಕರಣಕ್ಕೆ ಇಂದು ಹೊಸ ತಿರುವು ದೊರೆತಿದೆ. ಇಷ್ಟು ದಿನ ನಾಪತ್ತೆಯಾಗಿದ್ದ ಕಾರ್ತಿಕ್ ಗೌಡ ನಿರೀಕ್ಷಣಾ ಜಾಮೀನು ಮಂಜೂರಾಗುತ್ತಿದ್ದಂತೆಯೇ ಇಂದು ದಿಢೀರ್ ಎಂದು ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ