ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕತ್ತಿ ವರ್ಸಸ್ ಕರ್ನಾಟಕ: 'ಕತ್ತಿ ಹುಳಿ ಇದ್ದಂತೆ, ಅವರ ಬಗ್ಗೆ ಎಚ್ಚರದಿಂದಿರಿ'

ರಾಜ್ಯ ವಿಂಗಡನೆ ಕುರಿತು ಮಾತನಾಡಿದ್ದ ಮಾಜಿ ಸಚಿವ ಉಮೇಶ್ ಕತ್ತಿ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದು, ನಟ ಮತ್ತು ಎಂಎಲ್‌ಸಿ ಸದಸ್ಯ ಜಗ್ಗೇಶ್ ಅವರು ಕಿಡಿಕಾರಿದ್ದಾರೆ.

Srinivasa Murthy VN
Updated On : 14 Sept 2014, 4:42 am

ಬೆಂಗಳೂರು: ರಾಜ್ಯ ವಿಂಗಡನೆ ಕುರಿತು ಮಾತನಾಡಿದ್ದ ಮಾಜಿ ಸಚಿವ ಉಮೇಶ್ ಕತ್ತಿ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿದ್ದು, ನಟ ಮತ್ತು ಎಂಎಲ್‌ಸಿ ಸದಸ್ಯ ಜಗ್ಗೇಶ್ ಅವರು ಕಿಡಿಕಾರಿದ್ದಾರೆ.

ಉಮೇಶ್ ಕತ್ತಿ ಹುಳಿ ಇದ್ದಂತೆ, ಕನ್ನಡಿಗರು ಹಾಲು ಇದ್ದಂತೆ. ಹೀಗಾಗಿ ಕತ್ತಿ ಅವರ ಬಗ್ಗೆ ಎಚ್ಚರದಿಂದಿರಬೇಕು. ಅಖಂಡ ಕರ್ನಾಟಕವನ್ನು ಒಡೆಯುವ ಮಾತುಗಳನ್ನಾಡುತ್ತಿರುವ ಉಮೇಶ್ ಕತ್ತಿ ಅವರಂತಹವರ ಬಗ್ಗೆ ನಾವು ಎಚ್ಚರದಿಂದಿರಬೇಕು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಈಗಲಾದರೂ ಕನ್ನಡಿಗರು ಎಚ್ಚೆತ್ತುಕೊಳ್ಳಬೇಕು ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಉಮೇಶ್ ಕತ್ತಿ ತಮ್ಮ ಪಕ್ಷದವರೇ ಆದರೂ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ರಾಜ್ಯವನ್ನು ವಿಭಜಿಸುವ ಮಾತನಾಡುತ್ತಿರುವ ಕತ್ತಿ ಅವರನ್ನು ನಾನು ವಿರೋಧಿಸುತ್ತೇನೆ ಮತ್ತು ಮತ್ತೊಮ್ಮೆ ಅವರು ರಾಜ್ಯ ವಿಂಗಡನೆ ಕುರಿತು ಮಾತನಾಡಿದರೆ ಅವರಿಗೆ ಧಿಕ್ಕಾರ ಹಾಕುತ್ತೇನೆ ಎಂದು ಜಗ್ಗೇಶ್ ಟ್ವಿಟರ್‌ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement