ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಬಸ್ಸಲ್ಲಿ ಲೈಂಗಿಕ ಕಿರುಕುಳ ಉಪ ತಹಶೀಲ್ದಾರ್ ಸೆರೆ

Srinivasa Murthy VN
Updated On : 18 Sept 2014, 11:04 am

ತುಮಕೂರು: ಯುವತಿಯೊಬ್ಬಳು ತನಗೆ ಲೈಂಗಿಕ ಕಿರುಕುಳ ನೀಡಿದ ಉಪ ತಹಶೀಲ್ದಾರರಿಗೆ ಕಂಬಿ ಎಣಿಸುವಂತೆ ಮಾಡಿದ್ದಾಳೆ.

ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಸಂಬಂಧಿ ಹಾಗೂ ಆಮ್ ಆದ್ಮಿ ಪಕ್ಷದ ಸಂಚಾಲಕಿಗೆ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಉಪ ತಹಶೀಲ್ದಾರ್ ಮುರಳಿ ಅವರನ್ನು ತುಮಕೂರಿನ ಹೊಸ ಬಡಾವಣೆ ಪೊಲೀಸರು ಬುಧವಾರ ಬಂಧಿಸಿ, ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ 8ನೇ ಮೈಲಿ ನಿವಾಸಿ ಮುರಳಿ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತುಮಕೂರಿಗೆ ತೆರಳುತ್ತಿದ್ದಾಗ ಕುಕೃತ್ಯ ಎಸಗಿದ್ದಾರೆ. ನೆಲಮಂಗಲದ ಬಳಿ ಬಸ್ ಹತ್ತಿ ಆಕೆಯ ಪಕ್ಕದಲ್ಲೇ ಕುಳಿತಿದ್ದಾರೆ. ಕೆಲಸ ಕೊಡಿಸುವ ಭರವಸೆ ನೀಡುವ ನೆಪದಲ್ಲಿ ಅನುಚಿತವಾಗಿ ವರ್ತಿಸಿದ್ದಾರೆ. ಇದರಿಂದ ಸಿಡಿಮಿಡಿಗೊಂಡು ಆಕ್ಷೇಪ ವ್ಯಕ್ತಸಿದರೂ ಕುಚೇಷ್ಟೆ ಮುಂದುವರೆಸಿದ್ದಾರೆ.

ಈ ಸಂದರ್ಭ ಬಸ್ ತುಮಕೂರು ಎಸ್‌ಪಿ ಕಚೇರಿ ಬಳಿ ಆಗಮಿಸಿದ್ದು, ಬಸ್ ನಿಲ್ಲಿಸಿದ ಯುವತಿ ಮುರಳಿ ಅವರನ್ನು ಎಸ್‌ಪಿ ಕಚೇರಿಗೆ ಕರೆ ತಂದಿದ್ದಾರೆ. ಬಳಿಕ ಹೊಸ ಬಡಾವಣೆ ಠಾಣೆಗೆ ಕರೆದುಕೊಂಡು ಹೋಗಿ ಮುರುಳಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement