ಬಳ್ಳಾರಿ: ಬಹಿರ್ದೆಸೆಗೆ ತೆರಳಿದ್ದ ವೇಳೆ ಸಿಕ್ಕ ವಸ್ತುವನ್ನು ಕುತೂಹಲದಿಂದ ಒಡೆದು ನೋಡಿದ ಪರಿಣಾಮ ಸ್ಫೋಟ ಸಂಭವಿಸಿ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಲ್ಲಿನ ತಾಳೂರು ರಸ್ತೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.
ಆಂಧ್ರಪ್ರದೇಶ ಮೂಲದ ಉರವ ಕೊಂಡ ಮಂಡಲದ ಎರಿಸ್ವಾಮಿ (56) ಮೃತ ವ್ಯಕ್ತಿ. ಚಿಂದಿ ಆಯುವ ಕೆಲಸ ಮಾಡುತ್ತಿದ್ದ ಇವರು, ಇಲ್ಲಿನ ತಾಳೂರು ರಸ್ತೆಯ ಇಟ್ಟಂಗಿ ಭಟ್ಟಿಯ ಹಳೆಯ ಕಟ್ಟಡದಲ್ಲಿ ಈ ಕುಟುಂಬ ವಾಸವಿತ್ತು. ಶನಿವಾರ ಸಂಜೆ ಬಹಿರ್ದೆಸೆಗೆ ತೆರಳಿದ್ದ ಅವರು, ಪೆಟ್ರೋಲ್ ಬಂಕ್ ಬಳಿ ಸಿಕ್ಕ ಕೆಂಪು ಬಣ್ಣದ ಡಬ್ಬಿಯನ್ನು ಕುತೂಹಲದಿಂದ ತೆಗೆದು ನೋಡಿದಾಗ ಸ್ಫೋಟ ಸಂಭವಿಸಿದ್ದು, ಕೈ ಕಾಲುಗಳು ಛಿದ್ರವಾಗಿವೆ.