ಹ್ಯಾಪಿ ಸ್ಕೂಲ್ಸ್ ಯೋಜನೆಗೆ ಚಾಲನೆ
ಕ್ರೆಡಾಯ್ ನ `ಹ್ಯಾಪಿ ಸ್ಕೂಲ್ಸ್' ಯೋಜನೆಯ ಭಾಗವಾಗಿ ಶೇಷಾದ್ರಿಪುದ ಸರ್ಕಾರಿ ಶಾಲೆಯ ನವೀಕರಣ ಕಾರ್ಯಕ್ಕೆ ಚಾಲನೆ ದೊರೆಯಿತು...
ಬೆಂಗಳೂರು: ಕ್ರೆಡಾಯ್ ನ `ಹ್ಯಾಪಿ ಸ್ಕೂಲ್ಸ್' ಯೋಜನೆಯ ಭಾಗವಾಗಿ ಶೇಷಾದ್ರಿಪುದ ಸರ್ಕಾರಿ ಶಾಲೆಯ ನವೀಕರಣ ಕಾರ್ಯಕ್ಕೆ ಚಾಲನೆ ದೊರೆಯಿತು.
`ಹ್ಯಾಪಿ ಸ್ಕೂಲ್ಸ್' ಯೋಜೆಗಾಗಿ ಕ್ರೆಡಾಯ್ ಸಂಸ್ಥೆಯು ರೋಟರಿ ಇಂಡಿಯಾ ಲಿಟರೆಸಿ ಮಿಶನ್ ಜೊತೆಗೆ ಕೈ ಜೋಡಿಸಿದ್ದು, 20 ಸರ್ಕಾರಿ ಶಾಲೆಗಳನ್ನು ಗುರುತಿಸಿ ಅವುಗಳ ಮೂಲಸೌಕರ್ಯ ಮತ್ತು ಇತರೆ ಅಗತ್ಯಗಳನ್ನು ಸುಧಾರಣೆಗೊಳಿಸಲಿದೆ. ಈ ಸುಧಾರಣೆಗಳಿಂದ ಕ್ಯಾಂಪಸ್ಗಳಲ್ಲಿ ಉತ್ತಮ ಹಾಜರಾತಿ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಗುರಿ ಹೊಂದಲಾಗಿದೆ. ಯೋಜನೆಯ 20 ಶಾಲೆಗಳ ಸರಣಿ ಯಲ್ಲಿ ಈ ಶಾಲೆ ಎಂಟನೆಯ ದಾಗಿದೆ. ಶೇಷಾದ್ರಿಪುರ ಸರ್ಕಾರಿ ಶಾಲೆ ಕ್ಯಾಂಪಸ್ನಲ್ಲಿ ನೀರು ಶುದ್ಧೀಕರಣ ಘಟಕ ಆರಂಭವಾಗಲಿದೆ.
ಎಲ್ಲ ಮಕ್ಕಳಿಗೆ ಶೂ, ಪ್ರಯೋಗಾಲಯ ಸಲಕರಣೆ, ಕ್ರೀಡಾ ಸಾಮಾಗ್ರಿ ಹಾಗೂ ಇ-ಲರ್ನಿಂಗ್ ಕಿಟ್ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಮಾತ ನಾಡಿದ ಕ್ರೆಡಾಯ್ ಕಾರ್ಯದರ್ಶಿ ಸುರೇಶ್ ಹರಿ, ಪ್ರತಿ ಹ್ಯಾಪಿ ಸ್ಕೂಲ್ ಅಭಿವೃದಿಟಛಿ ವೆಚ್ಚದ ಶೇ.50ರಷ್ಟನ್ನು ಆರ್ಐಎಲ್ಎಂ ಜತೆ ಹಂಚಿಕೊಳ್ಳಲಾಗಿದೆ. ಸದ್ಯಕ್ಕೆ ರು.5 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಈ ಯೋಜನೆಯಿಂದ ಸರ್ಕಾರಿ ಶಾಲೆ ತನ್ನದೇ ಅಗತ್ಯಗಳನ್ನು ಹೊಂದಲಿದೆ ಎಂದರು.