ಬೆಂಗಳೂರು: ಮದ್ಯ ಸೇವಿಸಿ ಬಾರ್‍ನಿಂದ ಹೊರಬರುತ್ತಿದ್ದ ರೌಡಿ ಶೀಟರ್ ಮೇಲೆ ಆತನ ಸ್ನೇಹಿತರೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಪುಲಿಕೇಶಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ರೌಡಿ ಶೀಟರ್ ಪ್ರದೀಪ್(24) ಕೊಲೆಯಾದವ. ಮಂಗಳವಾರ ರಾತ್ರಿ 11ರ ಸುಮಾರಿನಲ್ಲಿ ಸ್ನೇಹಿತ ಕಾರ್ತಿಕ್ ನಿಂದ ಚಿಲ್ಲರೆ ಹಣ ಕಸಿದುಕೊಂಡಿದ್ದ ಪ್ರದೀಪ್, ಬಾರ್‍ವೊಂದಕ್ಕೆ ತೆರಳಿ ಮದ್ಯ ಸೇವಿಸಿದ್ದ. ಹಣ ಕಸಿದುಕೊಂಡಿದ್ದರಿಂದ ಕೋಪಗೊಂಡಿದ್ದ ಕಾರ್ತಿಕ್, ತನ್ನ ಸಹಚರರಾದ ಡಿ. ಜೆ.ಹಳ್ಳಿ ಬಾಗಲೂರಿನ ಸ್ಟಾಲಿನ್(19), ಆನಂದ್(19), ವಿನೋದ್(19) ಹಾಗೂ ಕರ್ಣ(19) ಅವರೊಂದಿಗೆ ಸೇರಿಕೊಂಡು ಪ್ರದೀಪ್ ಮೇಲೆ ಎರಗಿ ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದು ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪುಲಿಕೇಶಿನಗರ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ್ದಾರೆ.