ಕಡಲೆಕಾಯಿ ಪರಿಷೆ (ಫೋಟೋ ಕೃಪೆ: ಕೆಪಿಎನ್) 
ಜಿಲ್ಲಾ ಸುದ್ದಿ

ನೈವೇದ್ಯ ಮಾಡಿ ಪರಿಷೆಗೆ ಚಾಲನೆ

ಪ್ರತಿವರ್ಷ ಕಡೇ ಕಾರ್ತಿಕ ಸೋಮವಾರ ವೇಳೆಗೆ ನಡೆಯುವ `ಕಡಲೆಕಾಯಿ ಪರಿಷೆ' ಈ ಬಾರಿ ಸರಳವಾಗಿ ಆರಂಭವಾಯಿತು. ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದ ಕಾರಣ ಪರಿಷೆಗೆ ಗಣ್ಯರಿಂದ ಚಾಲನೆ ದೊರೆಯಲಿಲ್ಲ...

ಬೆಂಗಳೂರು: ಪ್ರತಿವರ್ಷ ಕಡೇ ಕಾರ್ತಿಕ ಸೋಮವಾರ ವೇಳೆಗೆ ನಡೆಯುವ `ಕಡಲೆಕಾಯಿ ಪರಿಷೆ' ಈ ಬಾರಿ ಸರಳವಾಗಿ ಆರಂಭವಾಯಿತು. ವಿಧಾನ ಪರಿಷತ್‍ಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದ ಕಾರಣ ಪರಿಷೆಗೆ ಗಣ್ಯರಿಂದ ಚಾಲನೆ ದೊರೆಯಲಿಲ್ಲ. ಬದಲಾಗಿ ಸೋಮವಾರ ನಗರದ ದೊಡ್ಡ ಬಸವಣ್ಣನಗುಡಿಯಲ್ಲಿ ಗಣಪತಿಗೆ ಕಡಲೆಕಾಯಿ ನೈವೇದ್ಯ ಮಾಡುವ ಮತ್ತು ಬಸವನಿಗೆ ಪೂಜೆ ಮಾಡುವ ಮೂಲಕ ಪರಿಷೆಗೆ ವಿದ್ಯುಕ್ತ ಚಾಲನೆ ನೀಡಲಾಯಿತು.

ವಾಡಿಕೆಯಂತೆ ಸೋಮವಾರ ಪರಿಷೆ ಆರಂಭವಾಗುತ್ತದೆ. ಆದರೂ ಮುನ್ನಾ ದಿನವಾದ ಶನಿವಾರ ಹಾಗೂ ಭಾನುವಾರದಂದೇ ರೈತರು, ವ್ಯಾಪಾರಿಗಳ ದಂಡು ದೇವಸ್ಥಾನದ ರಸ್ತೆ ಇಕ್ಕೆಲಗಳಲ್ಲಿ ಬೀಡುಬಿಟ್ಟಿದ್ದರು. ಜನ ಭಾನುವಾರದಿಂದಲೇ ಪರಿಷೆಗೆ ಆಗಮಿಸುತ್ತಿದ್ದರು. ರಾಮಕೃಷ್ಣ ಆಶ್ರಮದ ವೃತ್ತದಿಂದ ಕಾಮತ್ ಹೋಟೆಲ್‍ವರೆಗೆ ಜನಜಾತ್ರೆಯೇ ನೆರೆದಿತ್ತು. ಒಂದೆಡೆ ಕಡಲೆಕಾಯಿ, ಇತರೆ ತಿಂಡಿತಿನಿಸುಗಳು, ಆಭರಣಗಳು, ಮಕ್ಕಳ ಆಟಿಕೆಗಳು, ಭವಿಷ್ಯ ಹೇಳುವ ರೋಬೋಟ್, ಕೀಲುಗೊಂಬೆಗಳು... ಜಾತ್ರೆಯ ಮೆರುಗನ್ನು ಹೆಚ್ಚಿಸಿದ್ದವು.

ಮತ್ತೊಂದೆಡೆ ಗಣಪ ಹಾಗೂ ಬಸವನ ದರ್ಶನ ಮಾಡಲು ಭಕ್ತರ ದಂಡೇ ಆಗಮಿಸಿತ್ತು. ಇನ್ನು ಜಾತ್ರೆಯಲ್ಲಿ ಜನಜಂಗುಳಿ ಹೆಚ್ಚಿದ್ದ ಕಾರಣ ರಾಮಕೃಷ್ಣ ಆಶ್ರಮ ವೃತ್ತದಿಂದ ಸಂಚಾರ ಸ್ಥಗಿತಗೊಳಿಸಿ, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿತ್ತು. ಕಡಿಮೆ ಮಳಿಗೆ: ಪರಿಷೆಗೆ ರಾಜ್ಯ ಮಾತ್ರವಲ್ಲ, ನೆರೆ ರಾಜ್ಯಗಳಾದ ಆಂಧ್ರ ಹಾಗೂ ತಮಿಳು ನಾಡಿನಿಂದಲೂ ರೈತರು ಲೋಡ್‍ಗಟ್ಟಲೆ ಕಡಲೆಕಾಯಿ ತಂದು ವ್ಯಾಪಾರ ನಡೆಸುತ್ತಿದ್ದಾರೆ. ಜತೆಗೆ ಬೆಂಗಳೂರು ಗ್ರಾಮಾಂತರ, ಚಿಂತಾಮಣಿ, ಶ್ರೀನಿವಾಸಪುರ, ಆನೇಕಲ್, ಮಾಗಡಿ, ಚಿಕ್ಕಬಳ್ಳಾಪುರ, ಪಾವಗಡ, ಮಧುಗಿರಿ, ತುಮ ಕೂರು ಸೇರಿದಂತೆ ಹಲವಾರು ಪ್ರದೇಶ ಗಳಿಂದ ಬರುವ ರೈತರು ಮಳಿಗೆಗಳನ್ನು ತೆರೆದು ವ್ಯಾಪಾರ ನಡೆಸುತ್ತಿದ್ದಾರೆ.

ಕಳೆದ ವರ್ಷ ಸುಮಾರು 1500 ಕಡಲೆಕಾಯಿ ಮಳಿಗೆಗಳು ಇದ್ದವು. ಆದರೆ, ಈ ಬಾರಿ ಪರಿಷೆ 700 ಮಳಿಗೆಗಳು ಮಾತ್ರ ಇವೆ. ಆ ಮಳಿಗೆಗಳಲ್ಲೇ ಜನ ಬಗೆಬಗೆಯ ಕಡಲೆಕಾಯಿ ಖರೀದಿಸುವಲ್ಲಿ ನಿರತರಾಗಿ ದ್ದರು. ವಿವಿಧ ಊರುಗಳಿಂದ ರುಚಿರುಚಿ ಯಾದ ಕಡಲೇಕಾಯಿ ಪರಿಷೆಗೆ ಬರುತ್ತವೆ. ಉರಿದ, ಹಸಿ ಹಾಗೂ ಒಣಗಿದ ಕಡಲೇಕಾಯಿಗಳನ್ನು ಮಾರಾಟ ಮಾಡಲಾಗುತ್ತದೆ. ಕಾಲಿಡಲು ಜಾಗವಿಲ್ಲದೆ ಕಿಕ್ಕಿರಿದು ತುಂಬಿದ್ದ ಜನ ಉತ್ಸಾಹದಿಂದ ಕಡಲೆಕಾಯಿ ಖರೀದಿಸಿ ಕೊಂಡೊಯ್ಯುತ್ತಿದ್ದರು. ಕಳೆದಬಾರಿಯೂ ಸೇರಿಗೆ ರು.20 ಕ್ಕೆ ಮಾರಾಟ ಮಾಡಲಾಗಿತ್ತು. ಈ ಬಾರಿ
ಕಡಲೆಕಾಯಿ ಕಡಿಮೆ ಇದೆ. ಹಾಗಾಗಿ ರು. 20ರಿಂದ 30ಕ್ಕೆ ಮಾರಾಟ ಮಾಡಲಾಗುತ್ತಿದೆ.

ರಾತ್ರಿ ವೇಳೆ 10 ಗಂಟೆ ನಂತರವೂ ಜನ ಇರುತ್ತಾರೆ. ಆದರೆ, ಈ ವೇಳೆ ತಮಗೆ ವ್ಯಾಪಾರ ಮಾಡಲು ಪೊಲೀಸರು ಅವಕಾಶ ಮಾಡಿಕೊಡುವುದಿಲ್ಲ. ಪರಿಷೆ ಆರಂಭಕ್ಕೂ ಮುನ್ನಾ 1 ದಿನ ಕಡಲೆಕಾಯಿ ತಂದರೆ ವ್ಯಾಪಾರ ಉತ್ತಮವಾಗಿರುತ್ತದೆ. ಒಂದು ವೇಳೆ ಕಡಲೆಕಾಯಿ ಉಳಿದರೆ ಬುಧವಾರ ವ್ಯಾಪಾರ ಮಾಡಲು ಬಿಡುವುದಿಲ್ಲ. 2 ದಿನ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಕಡಲೆಕಾಯಿ ವ್ಯಾಪಾರಿ ಕವಿತಾ ಹೇಳುತ್ತಾರೆ.

ಪ್ಲಾಸ್ಟಿಕ್ ಮುಕ್ತ: ಈ ಬಾರಿಯ ಪರಿಷೆಯನ್ನು ಪರಿಸರ ಸ್ನೇಹಿಯನ್ನಾಗಿ ಮಾಡುವ ಉದ್ದೇಶದಿಂದ ಪ್ಲಾಸ್ಟಿಕ್ ಚೀಲ ಬಳಸದಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿತ್ತು. ಅದೇ ರೀತಿ ವ್ಯಾಪಾರಿಗಳು ಬಟ್ಟೆಯ ಕೈಚೀಲ ಬಳಸಿ, ಆ ಚೀಲದಲ್ಲಿ ಗ್ರಾಹಕರಿಗೆ ಕಡಲೆಕಾಯಿ ನೀಡು ತ್ತಿದ್ದುದು ಸಾಮಾನ್ಯ ವಾಗಿತ್ತು. ಕಡಲೆಪುರಿ ಮಾರುವ ವ್ಯಾಪಾರಿಗಳಿಗೆ 1.75 ಲಕ್ಷ ಕೈಚೀಲಗಳನ್ನು ಉಚಿತವಾಗಿ ನೀಡಲಾಗಿತ್ತು. ಪರಿಷೆ ಹಿನ್ನೆಲೆ: ಹಿಂದೆ ಈ ಪ್ರದೇಶದಲ್ಲಿ ಕೃಷಿ ಮಾಡಲಾಗುತ್ತಿತ್ತು.

ರೈತರು ಸಮೃದ್ಧವಾಗಿ ಬೆಳೆದಿದ್ದ ಕಡಲೆ ಬೆಳೆಯನ್ನು ರಾತ್ರೋರಾತ್ರಿ ಹೋರಿಯೊಂದು ತಿಂದು ಹೋಗುತ್ತಿತ್ತು. ಇದರಿಂದ ಕಂಗಾಲಾದ ರೈತರು ಹೋರಿಯನ್ನು ಹಿಡಿಯಲು ನಿರ್ಧರಿಸಿ ರಾತ್ರಿ ಕಾದುಕುಳಿತರು. ರಾತ್ರಿ ಬೆಳೆ ತಿನ್ನಲು ಬಂದ ತೇಜೋಪುಂಜವಾದ ಎತ್ತನ್ನು ನೋಡಿ ಇದೊಂದು ದೈವಸ್ವರೂಪಿ ಎಂದು ಭಾವಿಸಿ ಮೂರ್ತಿ ಪ್ರತಿಷ್ಠಾಪಿಸುತ್ತೇವೆ. ಸಮೃದ್ಧವಾಗಿ ಬೆಳೆ ಕೊಟ್ಟರೆ ಅದನ್ನು ನಿನಗೆ ಅರ್ಪಿಸುತ್ತೇವೆ ಎಂದು ಮೊರೆಯಿಟ್ಟರು. ಅಂದಿನಿಂದ ಪ್ರತಿ ಕಾರ್ತಿಕಮಾಸದಕೊನೆಸೋಮವಾರದಂದು ಬಸವನಿಗೆ ಕಡಲೇಕಾಯಿ ಅರ್ಪಿಸುವ ರೂಢಿ ಜಾರಿಗೆ ಬಂತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್

'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್

'ಪ್ರೇಮದ ಊರಲಿ' ಚಿತ್ರ ವೀಕ್ಷಣೆಗೆ ಹೋಗಿದ್ದವರಿಗೆ ಶಾಕ್; ಮನೆಯಲ್ಲಿ ಕಳ್ಳ ಲಾಕ್, ಸಿಕ್ಕಿಬಿದ್ದಿದ್ದೇ ರೋಚಕ!

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!