(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಆಸ್ತಿ ತೆರಿಗೆಯ 600 ಚೆಕ್‍ಬೌನ್ಸ್

ಪಶ್ಚಿಮ ವಲಯದಲ್ಲಿ ಸುಮಾರು ರು.74 ಕೋಟಿ ಮೊತ್ತದ 600ಕ್ಕೂ ಹೆಚ್ಚು ಆಸ್ತಿ ತೆರಿಗೆ ಚೆಕ್‍ಗಳು ಬೌನ್ಸ್ ಆಗಿದ್ದು, ಡಿ.31ರೊಳಗೆ ಸಂಬಂಧಪಟ್ಟ ಮಾಲೀಕರಿಂದ ಹಣ ವಸೂಲಿ ಮಾಡುವಂತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜು ಅವರು ಅಧಿಕಾರಿಗಳಿಗೆ...

ಬೆಂಗಳೂರು: ಪಶ್ಚಿಮ ವಲಯದಲ್ಲಿ ಸುಮಾರು ರು.74 ಕೋಟಿ ಮೊತ್ತದ 600ಕ್ಕೂ ಹೆಚ್ಚು ಆಸ್ತಿ ತೆರಿಗೆ ಚೆಕ್‍ಗಳು ಬೌನ್ಸ್ ಆಗಿದ್ದು, ಡಿ.31ರೊಳಗೆ ಸಂಬಂಧಪಟ್ಟ ಮಾಲೀಕರಿಂದ ಹಣ ವಸೂಲಿ ಮಾಡುವಂತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಪಶ್ಚಿಮ ವಲಯ ಕಚೇರಿಗೆ ಭೇಟಿ ನೀಡಿದ ಅವರು, ಆಸ್ತಿ ತೆರಿಗೆ ವಸೂಲಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ವಲಯದಲ್ಲಿ ರು.390 ಕೋಟಿ ತೆರಿಗೆ ವಸೂಲಿ ಗುರಿ
ನೀಡಲಾಗಿತ್ತು. ಆದರೆ ಕೇವಲ ರು.200 ಕೋಟಿ ಮಾತ್ರ ವಸೂಲಿಯಾಗಿದೆ. ಅಲ್ಲದೆ, ಪ್ರಸಕ್ತ ಸಾಲಿನ 200 ಚೆಕ್‍ಗಳುಸೇರಿದಂತೆ ಒಟ್ಟು 600ಕ್ಕೂ ಹೆಚ್ಚು ಚೆಕ್ ಗಳು ಬೌನ್ಸ್ ಆಗಿವೆ. ಈ ತಿಂಗಳಾಂತ್ಯಕ್ಕೆ ಬೌನ್ಸ್ ಚೆಕ್‍ಗಳ ಹಣ ವಸೂಲಿ ಮಾಡದಿದ್ದರೆ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಯಾಗಲಿದ್ದೀರಿ ಎಂದು ಎಚ್ಚರಿಸಿದರು.

ಅಧಿಕಾರಿಗಳು ವರ್ಗಾವಣೆಗೊಂಡಾಗ ಹಿಂದಿನ ಅಧಿಕಾರಿಯಿಂದ ತೆರಿಗೆಗೆ ಸಂಬಂಧಪಟ್ಟ ದಾಖಲಾತಿ ಪಡೆದುಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ಅಧಿಕಾರಿಗಳನ್ನು ಅಮಾನತು
ಗೊಳಿಸಲಾಗುವುದು ಎಂದರು. ತೆರಿಗೆ ವಸೂಲಿ ಮಾಡಬೇಕೆಂಬ ಉದ್ದೇಶದಿಂದ ಪ್ರತಿ ಬುಧವಾರ ವಿಶೇಷ ತೆರಿಗೆ ವಸೂಲಾತಿ ಆಂದೋಲನ ನಡೆಸಲಾಗುತ್ತಿದೆ. ಕಳೆದ ವಾರ
ಪ್ರತಿ ವಲಯಕ್ಕೆ ಸಮಿತಿಯ ಸದಸ್ಯರು ಭೇಟಿ ನೀಡಿದ್ದರು. ಅದೇ ರೀತಿ ತಾವು ಮಹದೇವಪುರಕ್ಕೆ ಭೇಟಿ ನೀಡಲಾಗಿತ್ತು. ಈ ವೇಳೆ ಸುಮಾರು ರು.14 ಕೋಟಿ ತೆರಿಗೆ ವಸೂಲಿಯಾಗಿತ್ತು. ಡಿ.9ಕ್ಕೆ ಎಲ್ಲ ವಲಯಗಳಲ್ಲಿ ಆಂದೋಲನ ನಡೆಯಲಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ