ಬೆಂಗಳೂರು: ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಪೊಲೀಸರು ಮಂಗಳವಾರವೂ ರೌಡಿಗಳ ಮನೆ ಮೇಲೆ ದಾಳಿ ಮುಂದುವರಿಸಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರ (ಪೂರ್ವ ವಿಭಾಗ) ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಮತ್ತು ಆಗ್ನೇಯ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ನೇತೃತ್ವದಲ್ಲಿ ವಿಭಾಗದ ಪೊಲೀಸ್ ಠಾಣೆಗಳ ವ್ಯಾಪ್ತಿ ಅಪರಾಧ ಚಟುವಟಿಕೆ ಹಿನ್ನೆಲೆಯಲ್ಲಿ ರೌಡಿಗಳ ಮನೆ ಮೇಲೆ ಪೊಲೀಸರು ಬೆಳಗ್ಗೆ ದಾಳಿ ನಡೆಸಿದರು.
ಬಳಿಕ ರೌಡಿಗಳ ಪರೇಡ್ ನಡೆಸಿ ಅವರ ಚಲನವಲನ ಬಗ್ಗೆ ಪರಿಶೀಲಿಸಲಾಯಿತು. ಅಪರಾಧ ಕೃತ್ಯಗಳಲ್ಲಿ ಬಾಗಿಯಾಗದಂತೆ ಎಚ್ಚರಿಕೆ ನೀಡಲಾಯಿತು.