ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾ ಸಮಿತಿಯಿಂದ ಗುರುವಾರ 60ನೇ ಕರ್ನಾಟಕ ರಾಜ್ಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಹೆಚ್ಚು ಅಂಕ ಪಡೆದ ಹಾಗೂ ಉನ್ನತ ಅಧಿಕಾರಿಗಳ ಮಕ್ಕಳಿಗೆ ಇದೇ ವೇಳೆ ವಿದ್ಯಾಸಿರಿ ಹಾಗೂ ಕನ್ನಡ ವಿದ್ಯಾಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ `ಕನ್ನಡ ವಿದ್ಯಾಶ್ರೀ ಪ್ರಶಸ್ತಿ', 10ನೇ ತರಗತಿ, ಪಿಯುಸಿ, ಪದವಿಯಲ್ಲಿ ಹೆಚ್ಚು ಅಂಕ ಗಳಿಸಿದ ಮೂವರು ವಿದ್ಯಾರ್ಥಿಗಳಿಗೆ, ನಟಿ ತಾರಾ `ವಿದ್ಯಾಸಿರಿ ಪ್ರಶಸ್ತಿ' ನೀಡಿದರು. ಕನ್ನಡವನ್ನು ಆರಾ„ಸುವ 57 ಸಂಸ್ಥೆ ಸಿಬ್ಬಂದಿಗೆ `ಕನ್ನಡಶ್ರೀ ಪ್ರಶಸ್ತಿ' ಪ್ರದಾನ ಮಾಡಿ ಗೌರವಿಸಲಾಯಿತು. ಬಿಎಂಟಿಸಿ ಅಧ್ಯಕ್ಷ ನಾಬಿsರಾಜ್ ಜೈನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಂಸ್ಥೆಯ ಕಲ್ಯಾಣ ಮಂಟಪವನ್ನು ಹೊರಗಿನವರಿಗೆ ನೀಡುವ ಬದಲು ಸಿಬ್ಬಂದಿ ಮಕ್ಕಳ ಮದುವೆಗೆ, ಸಂಸ್ಥೆ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಿ ಎಂದರು.
ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಯಕ್ಷಗಾನ ಕಲಾವಿದರಿಗೂ ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ಮಾತನಾಡಿ, ಬಿಎಂಟಿಸಿ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಸಂಸ್ಥೆ. ಇಲ್ಲಿನ ಸಿಬ್ಬಂದಿ ಸಮಾರಂಭ ಮಾಡಲು ಶಾಂತಿನಗರದ ಟಿಟಿಎಂಸಿಯಲ್ಲೇ ಸಭಾಂಗಣದ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಡಾ.ಬೈರಮಂಗಲ ರಾಮೇಗೌಡ, ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು, ಏಕಲವ್ಯ ಪುರಸ್ಕೃತೆ ಕರುಣಾ ಜೈನ್, ಕೇಂದ್ರ ಕಚೇರಿಯ ಸಿಬ್ಬಂದಿ ಮೇಲ್ವಿಚಾರಕರಾದ ಡೊಮನಿಕ್ ರಾಜು, ಹವಾಲ್ದಾರ್, ರಾಜೇಶ್ವರಿ ಅವರನ್ನೂ ಸನ್ಮಾನಿಸಲಾಯಿತು. ಬಿಎಂಟಿಸಿ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಬಿಶ್ವಜಿತ ಮಿಶ್ರಾ, ಭದ್ರತಾ ಮತ್ತು ಜಾಗೃತಿ ನಿರ್ದೇಶಕ ಡಾ.ಬಿ.ಎ. ಮಹೇಶ್, ಬಿಎಂಟಿಸಿ ಉಪಾಧ್ಯಕ್ಷ ವಿ.ಎಸ್. ಆರಾಧ್ಯ ಮತ್ತಿತರರು ಇದ್ದರು.