ಬೆಂಗಳೂರು: ಕಸ ತುಂಬಿಕೊಂಡು ನಿಂತಿದ್ದ ಬಿಬಿಎಂಪಿ ಲಾರಿಯ ಟೈರ್‍ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಸುಂಕದಕಟ್ಟೆಯ ಸಮನಹಳ್ಳಿ ಸೇತುವೆ ಬಳಿ ಶನಿವಾರ ಬೆಳಗ್ಗೆ ನಡೆದಿದೆ.
ನಿನ್ನೆ ರಾತ್ರಿ ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ, ಸಮುನಹಳ್ಳಿ ಸುತ್ತಮುತ್ತಲಿನ ಕಸವನ್ನು ತುಂಬಿಕೊಂಡು ಮರುದಿನ ಕಸ ವಿಲೇವಾರಿ ಮಾಡಲು ಲಾರಿ ಚಾಲಕ ಲಾರಿಯನ್ನು ಸೇತುವೆ ಮೇಲೆ ನಿಲ್ಲಿಸಿದ್ದ.
ಬೆಳಗ್ಗೆ ಸುಮಾರು 8 ಗಂಟೆ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು ಲಾರಿಯ ಟೈರ್‍ಗೆ ಬೆಂಕಿ ಇಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳು, ಪೊಲೀಸರು ಸ್ಥಳೀಯರನ್ನು ವಿಚಾರಣೆ ನಡೆಸಿದರೂ ಕೃತ್ಯ ಮಾಡಿದ್ದು ಯಾರು ಎಂದು ತಿಳಿದು ಬಂದಿಲ್ಲ. ಕಾಮಾಕ್ಷಿಪಾಳ್ಯ ಪೊಲೀಸರು ಆಕಸ್ಮಿಕ ಬೆಂಕಿ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.