ಚಲನಾ ಪರವಾನಗಿ ಮಂಜೂರಾತಿಯಲ್ಲಿ ಅಕ್ರಮ ವಿರೋಧಿಸಿ ಆಮ್ ಆದ್ಮಿ ಕಾರ್ಯಕರ್ತರಿಂದ ಪ್ರತಿಭಟನೆ 
ಜಿಲ್ಲಾ ಸುದ್ದಿ

ಚಾಲನಾ ಪರವಾನಗಿ ಮಂಜೂರಾತಿಯಲ್ಲಿ ಅಕ್ರಮ: ಪ್ರಶ್ನಿಸಿದ ಆಪ್ ಕಾರ್ಯಕರ್ತರ ಮೇಲೆ ಹಲ್ಲೆ

ಆರ್ ಟಿಒ ಇಲಾಖೆಯ ಅಧಿಕಾರಿಯೊಬ್ಬರು ಅಕ್ರಮವಾಗಿ ಚಲಾನಾ ಪರವಾನಗಿ ನೀಡುತ್ತಿರುವುದನ್ನು ಪ್ರಶ್ನಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ನಾಯಕರ ಮೇಲೆ ಹಲ್ಲೆ ನಡೆದಿದೆ.

ಮಂಡ್ಯ: ಆರ್ ಟಿಒ ಇಲಾಖೆಯ ಅಧಿಕಾರಿಯೊಬ್ಬರು ಅಕ್ರಮವಾಗಿ ಚಾಲನಾ ಪರವಾನಗಿ ನೀಡುತ್ತಿರುವುದನ್ನು ಪ್ರಶ್ನಿಸಿದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ನಾಯಕರ ಮೇಲೆ ಹಲ್ಲೆ ನಡೆದಿದೆ.
ಕರ್ನಾಟಕ ಆಮ್ ಆದ್ಮಿ ಪಕ್ಷದ ಫೇಸ್ ಬುಕ್ ಪೇಜ್ ನಲ್ಲಿ ಅಪ್ ಡೇಟ್ ಆಗಿರುವ ಮಾಹಿತಿ ಪ್ರಕಾರ, ಮಂಡ್ಯದ ಆರ್.ಟಿ.ಒ ಇನ್ಸ್ ಪೆಕ್ಟರ್ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ವಾಹನ ಚಾಲನಾ ಪರವಾನಗಿ ನೀಡುತ್ತಿರುವುದನ್ನು ವಿರೋಧಿಸಿದ ಆಮ್ ಆದ್ಮಿ ನಾಯಕರಾದ ರವಿಕೃಷ್ಣ ರೆಡ್ಡಿ ಹಾಗೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಮಂಡ್ಯದ ನಿಧಿ ಡ್ರೈವಿಂಗ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಡಬಲ್ ಕ್ಲಚ್ ಮತ್ತು ಬ್ರೇಕ್ ಹೊಂದಿರುವ ವಾಹನದಲ್ಲಿ ಡಿಎಲ್(ಚಾಲನಾ ಪರವಾನಗಿ) ಅರ್ಜಿದಾರನ ಚಾಲನಾ ಪರೀಕ್ಷೆ ನಡೆಸಿದ್ದು ಅಲ್ಲದೇ , ಡ್ರೈವಿಂಗ್ ತರಬೇತಿ ನೀಡುವವರು ಪಕ್ಕದಲ್ಲೇ ಕುಳಿತ್ತಿದ್ದರು. ಈ ಅಕ್ರಮ ತಿಳಿದಿದ್ದರೂ ಸಹ ಪರೀಕ್ಷೆಯನ್ನು ಅಂಗೀಕರಿಸಿದ ಆರ್ ಟಿ ಒ ಇನ್ಸ್ ಪೆಕ್ಟರ್ ಷಗುರಲ್ಲಾ ಶರೀಫ್ ಪರೀಕ್ಷೆಯನ್ನು ಅಂಗೀಕರಿಸಿ ಅಕ್ರಮವಾಗಿ ಲೈಸೆನ್ಸ್ ಮಂಜೂರು ಮಾಡಲು ಮುಂದಾಗಿದ್ದರು. ಈ ಬಗ್ಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಪ್ರಶ್ನಿಸಿದಾಗ ಆರ್ ಟಿ ಒ ಇನ್ಸ್ ಪೆಕ್ಟರ್ ಶರೀಫ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಮಧ್ಯಪ್ರವೇಶಿಸಿದ ಡ್ರೈವಿಂಗ್ ಶಾಲೆಯ ಮಾಲಿಕ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ತನ್ನ ಸಿಬ್ಬಂದಿಗೆ ಸೂಚಿಸಿದ ಎಂದು ಆಪ್ ನಾಯಕರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

2029ರ ಲೋಕಸಭೆ ಚುನಾವಣೆಯಿಂದಲೇ 'ಒಂದು ರಾಷ್ಟ್ರ–ಒಂದು ಚುನಾವಣೆ' ಜಾರಿ ಸಾಧ್ಯತೆ: JPC ಮುಖ್ಯಸ್ಥ ಪಿ.ಪಿ. ಚೌಧರಿ

ಸುಪ್ರೀಂಕೋರ್ಟ್ ನಲ್ಲಿ ಹೈಡ್ರಾಮ: ಕೋರ್ಟ್ ಹಾಲ್ ನಲ್ಲಿ ಕಾಗದ ಪತ್ರ ಎಸೆದು, CJI ನಿಂದಿಸಿದ ದೂರುದಾರ!

ಸತತ 2ನೇ ದಿನವೂ Indian Stock Market ಭಾರಿ ಏರಿಕೆ: Sensex 827 ಅಂಕ ಏರಿಕೆ, 24 ಸಾವಿರ ಗಡಿ ದಾಟಿದ Nifty50

ಭೂಕುಸಿತದ ಎಫೆಕ್ಟ್: ಜುಲೈ 17 ರವರೆಗೆ ಮುಂಬೈ-ಪುಣೆ ರೈಲು ಸಂಚಾರದಲ್ಲಿ ಭಾರೀ ವ್ಯತ್ಯಯ; 30 ರೈಲುಗಳು ರದ್ದು

ಅದ್ಧೂರಿಯಾಗಿ ನಡೆಯಲಿದೆ ಶರ್ಮಿಳಾ ಮಾಂಡ್ರೆ ಮದುವೆ; ದಿನಾಂಕ, ಸ್ಥಳ ಫಿಕ್ಸ್; ಗ್ಲಾಮರಸ್‌ ನಟಿಯ ಮ್ಯಾರೇಜ್ ಎಲ್ಲಿ ಗೊತ್ತಾ?