(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಬಾಗಿಲು ಮುರಿದು ರು.2 ಲಕ್ಷ ಹಣ ಕಳವು

ಹಗಲು ಹೊತ್ತಿನಲ್ಲೇ ಬಾಗಿಲು ಬೀಗ ಮುರಿದು ಮನೆ ಒಳಗೆ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ರು.2 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ಹನುಮಂತನಗರದಲ್ಲಿ ನಡೆದಿದೆ...

ಬೆಂಗಳೂರು: ಹಗಲು ಹೊತ್ತಿನಲ್ಲೇ ಬಾಗಿಲು ಬೀಗ ಮುರಿದು ಮನೆ ಒಳಗೆ ನುಗ್ಗಿರುವ ಕಳ್ಳರು ಬೀರುವಿನಲ್ಲಿದ್ದ ರು.2 ಲಕ್ಷ ನಗದು ದೋಚಿ ಪರಾರಿಯಾಗಿರುವ ಘಟನೆ ಹನುಮಂತನಗರದಲ್ಲಿ ನಡೆದಿದೆ.

ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಹನುಮಂತನಗರ 12ನೇ ಕ್ರಾಸ್ ನಿವಾಸಿ ವಿಶ್ವನಾಥ್ ಅವರು ಮಂಗಳವಾರ ಮಧ್ಯಾಹ್ನ 12.30ರ ಸುಮಾರಿನಲ್ಲಿ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಕಾರ್ಯ ನಿಮಿತ್ತ ಪತ್ನಿ ರಮಣಿ ಅವರೊಂದಿಗೆ ಬಸವನಗುಡಿಗೆ ತೆರಳಿದ್ದರು. ಈ ವೇಳೆ ಆಯುಧದಿಂದ ಬಾಗಿಲು ಬೀಗ ಮುರಿದು ಮನೆ ಒಳಗೆ ನುಗ್ಗಿರುವ ಕಳ್ಳರು, ಬೀರುವಿನಲ್ಲಿದ್ದ ನಗದು ದೋಚಿ ಪರಾರಿಯಾಗಿದ್ದರು. ದಂಪತಿ ಕೆಲಸ ಮುಗಿಸಿಕೊಂಡು ಸಂಜೆ 4.30ರ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಕಳ್ಳತನ ಘಟನೆಗೊತ್ತಾಗಿದೆ. ತಕ್ಷಣ ವಿಶ್ವನಾಥ್, ಹನಮಂತನಗರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಲ್‍ಸಿಡಿ ಟಿವಿ ಕಳವು: ಮನೆ ಬಾಗಿಲು ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ಎಲ್‍ಸಿಡಿ ಟಿವಿ ಕದ್ದು ಪರಾರಿಯಾಗಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೊಹಮ್ಮದ್ ಮೌಸಿನ್ ಅವರು ನಾಗರಬಾವಿ 2ನೇ ಹಂತದ 7ನೇ ಬ್ಲಾಕ್ 3 ಕ್ರಾಸ್‍ನಲ್ಲಿ ಕಟ್ಟಿಸಿರುವ ಮನೆಗೆ ಇತ್ತೀಚೆಗಷ್ಟೇ ಗೃಹಪ್ರವೇಶ ನೆರವೇರಿಸಿದ್ದರು. ಕೆಲ ದಿನಗಳ ಹಿಂದೆ ಕೆಲಸ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ದುಬೈಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕಳ್ಳರು ಬಾಗಿಲು ಬೀಗ ಮುರಿದು ಮನೆ ಒಳಗೆ ನುಗ್ಗಿ ಎಲ್‍ಸಿಡಿ ಟಿವಿ ಕದ್ದು
ಪರಾರಿಯಾಗಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್

'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!

ದೆಹಲಿ-ಚೆನ್ನೈ ಇಂಡಿಗೋ ವಿಮಾನದಲ್ಲಿ ಬೆಂಕಿ; ಹೈದರಾಬಾದ್‌ ನಲ್ಲಿ ತುರ್ತು ಲ್ಯಾಂಡಿಂಗ್