ಬೆಂಗಳೂರು: ಮಾತನಾಡುವ ವೇಳೆ ಯುವತಿಯಿಂದ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಚಾಮರಾಜಪೇಟೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.
ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವಾಲ್ಮೀಕಿ ನಗರದ ನಿವಾಸಿ ಸಲ್ಮಾನ್ ಪಾಷಾ(20) ಬಂಧಿತ ಆರೋಪಿ. ಚಾಮರಾಜಪೇಟೆ ನಿವಾಸಿ, ಗ್ಲೋಬಲ್ ಕಂಪನಿಯ ಸಾಫ್ಟ್ ವೇರ್ ಎಂಜಿನಿಯರ್ ಉದ್ಯೋಗಿ ಕಾವಶ್ರೀ ಬೆಳಗ್ಗೆ 8 ಗಂಟೆಗೆ ಮನೆಯಿಂದ ಗೋಪಾಲನ್ ಮಾಲ್‍ವರೆಗೆ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ಅಲ್ಲೇ ಇದ್ದ ಪಾಷಾ ಮೊಬೈಲ್ ಕಸಿದು
ಪರಾರಿಯಾಗಲು ಯತ್ನಿಸಿದ್ದಾನೆ.
ಇದಕ್ಕೆ ಕಾವ್ಯಶ್ರೀ ಕಳ್ಳ ಕಳ್ಳ ಎಂದು ಜೋರಾಗಿ ಕೂಗಿದ್ದಾರೆ. ಅಲ್ಲೇ ಇದ್ದ ಸ್ಥಳೀಯರು ಆತನನ್ನು ಹಿಂಬಾಲಿ ಹಿಡಿದು ಥಳಿಸಿ, ಸಂಚಾರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಲ್ಮಾನ್ ಪಾಷಾಗೆ ವೈಟ್ನರ್ ಸೇವಿಸುವ ಚಟವಿದ್ದು, ಇದನ್ನು ಖರೀದಿ ಮಾಡಲು ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಚಾಮರಾಜಪೇಟೆ ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.