ಉಪನ್ಯಾಸಕರ ಧರಣಿ 27ದಿನಕ್ಕೆ
ಅನುದಾನಕ್ಕೆ ಒಳಪಟ್ಟರೂ ಅನುಮತಿಗಾಗಿ ಕಾಯುತ್ತಿರುವ 21 ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯಅನುದಾನಕ್ಕೆ ಒಳಪಡುತ್ತಿರುವ ಪಿಯು ಕಾಲೇಜುಗಳ ಆಡಳಿತ ಮಂಡಳಿ, ಉಪನ್ಯಾಸಕರ ಹಾಗೂ ನೌಕರರ ಒಕ್ಕೂಟ...
ಬೆಂಗಳೂರು: ಅನುದಾನಕ್ಕೆ ಒಳಪಟ್ಟರೂ ಅನುಮತಿಗಾಗಿ ಕಾಯುತ್ತಿರುವ 21 ಪದವಿ ಪೂರ್ವ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಕ್ಕೆ ಒಳಪಡುತ್ತಿರುವ ಪಿಯು ಕಾಲೇಜುಗಳ ಆಡಳಿತ ಮಂಡಳಿ, ಉಪನ್ಯಾಸಕರ ಹಾಗೂ ನೌಕರರ ಒಕ್ಕೂಟ ನಡೆಸುತ್ತಿರುವ ಹೋರಾಟ 27ನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಶನಿವಾರ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಅವರು ಬೆಂಬಲ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ``ಪಾಠ ಮಾಡಿ ದೇಶದ ಭವಿಷ್ಯ ರೂಪಿಸಬೇಕಾದ ಉಪನ್ಯಾಸಕರು ಇಂದು ಬೀದಿಗೆ ಬಂದಿದ್ದಾರೆ.
ಭವಿಷ್ಯ ರೂಪಿಸಬೇಕಾದವರೇ ತಮ್ಮ ಭವಿಷ್ಯಕ್ಕಾಗಿ ಹೋರಾಟ ಮಾಡುತ್ತಿರುವುದು ದುರ್ದೈವದ ಸಂಗತಿ. ಸಂಬಂಧಪಟ್ಟ ಇಲಾಖೆ ಉಪನ್ಯಾಸಕರಿಗೆ ತತ್‍ಕ್ಷಣದ ನ್ಯಾಯ ಒದಗಿಸಬೇಕು,'' ಎಂದು ಅವರು ಒತ್ತಾಯಿಸಿದರು. ಒಕ್ಕೂಟದ ಪದಾಧಿಕಾರಿಗಳಾದ ಜಾಲಮಂಗಲ ನಾಗರಾಜ, ಎಂ. ಮಹೇಶ್ ಇದ್ದರು.