ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಜಿಲ್ಲಾ ಸುದ್ದಿ

ಕಾಂಗ್ರೆಸ್ಸೇ ಅಸಹಿಷ್ಣುತೆ ಜನಕ: ಷ.ಶೆಟ್ಟರ್

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಚರ್ಚೆಗಿಳಿದಿರುವ ಕಾಂಗ್ರೆಸ್ಸೇ ಅಸಹಿಷ್ಣುತೆಯ ಜನಕ ಎಂದು ಇತಿಹಾಸಜ್ಞ, ಸಂಶೋಧಕ ಪ್ರೊ.ಷ. ಶೆಟ್ಟರ್ ಮಾರ್ಮಿಕವಾಗಿ ನುಡಿದಿದ್ದಾರೆ...

ನ್ಯಾಷನಲ್ ಪದವಿ ಕಾಲೇಜಿನಲ್ಲಿ ನಡೆದ ಯು.ಆರ್. ಅನಂತಮೂರ್ತಿ ಜನ್ಮದಿನದ ಕಾರ್ಯಕ್ರಮದಲ್ಲಿ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಸಾಹಿತಿ ಡಾ. ಮೊಗಳ್ಳಿ ಗಣೇಶ, ಪ್ರೊ.ಷ. ಶೆಟ್ಟರ
Manjula VN
Updated On : 22 Dec 2015, 12:23 pm

ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಚರ್ಚೆಗಿಳಿದಿರುವ ಕಾಂಗ್ರೆಸ್ಸೇ ಅಸಹಿಷ್ಣುತೆಯ ಜನಕ ಎಂದು ಇತಿಹಾಸಜ್ಞ, ಸಂಶೋಧಕ ಪ್ರೊ.ಷ. ಶೆಟ್ಟರ್ ಮಾರ್ಮಿಕವಾಗಿ ನುಡಿದಿದ್ದಾರೆ.

ಅಭಿನವ ಪ್ರಕಾಶನವು ನಗರದ ಬಸವನಗುಡಿ ಯಲ್ಲಿರುವ ನ್ಯಾಷನಲ್ ಪದವಿ ಕಾಲೇಜಿನಲ್ಲಿ ಸೋಮವಾರ ಯು.ಆರ್. ಅನಂತಮೂತಿರ್ ಅವರ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ `ಅಸಹಿಷ್ಣುತೆ: ಚಾರಿತ್ರಿಕ ಮತ್ತು ತಾತ್ವಿಕ ದೃಷ್ಟಿಕೋನ' ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಲವು ದಶಕಗಳ ಕಾಲ ದೇಶ ಆಳಿದ ಕಾಂಗ್ರೆಸ್ ತನ್ನ ಅಧಿಕಾರವಾಧಿಯಲ್ಲಿ ಪುಸ್ತಕ ನಿಷೇಧಿಸುವು ದು ಮತ್ತು ಕಲಾವಿದರನ್ನು ದೇಶದಿಂದ ಹೊರ ಕಳುಹಿಸುವುದನ್ನು ಮಾಡಿದೆ. ಇದು ಅಂದಿನ ಅಸಹಿಷ್ಣುತೆಯಾಗಿತ್ತು ಎಂದರು.

ಗತಕಾಲದಿಂದಲೂ ಸಮಾಜದಲ್ಲಿ ಸಹಿಷ್ಣುತೆ- ಅಸಹಿಷ್ಣುತೆ,  ಪರ-ವಿರೋಧಗಳು ಇದ್ದೇ ಇವೆ. ಪ್ರಸಕ್ತ ದಿನಮಾನಗಳಲ್ಲಂತೂ ಅಸಹಿಷ್ಣುತೆ ಬಗೆಗೆ ವ್ಯಾಪಕವಾದ ಚರ್ಚೆಗಳು ನಡೆಯುತ್ತಿವೆ. ನಮ್ಮ ಸುತ್ತಮುತ್ತ ಇಂತಹ ಘಟನೆಗಳು ನಡೆದಾಗ ನನಗೆ ಅತೀವ ದುಃಖ ಆವರಿಸುತ್ತದೆ. ಈ ಸಂದಿಗ್ಧ ಪರಿಸ್ಥಿತಿಯನ್ನು ನೆನೆದು ಕಣ್ಣೀರು ಹಾಕಿದ್ದೂ ಉಂಟು. ಅಸಹಿಷ್ಣುತೆ ಹುಟ್ಟು ಹಾಕಿದವರಿಗೆ ಅದರ ಪರಿಣಾಮ ತಿಳಿಯುತ್ತಿಲ್ಲ. ಇದು ಮುಗಿಯದ ಸಮಸ್ಯೆಯಾಗಿದೆಯಾ? ಎಂಬ ಅನುಮಾನ ಮೂಡುತ್ತಿದೆ. ಪ್ರತಿಯೊಬ್ಬರು ಪರಸ್ಪರ ದ್ವೇಷಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅವರು ತಿಳಿಸಿದರು.

ಇದೇ ವೇಳೆ ಡಾ. ಮೊಗಳ್ಳಿ ಗಣೇಶ್ ರಚನೆಯ ಜಾತಿ ಮೀಮಾಂಸೆ, ಗೀರ್ವಾಣಿ ರಚನೆಯ ಚಂದಮಾಮನ ಭೂಮಿ ಟೂರ್, ಜಿ. ರಾಜಶೇಖರ್ ರಚನೆಯ ಬಹುವಚನ ಭಾರತ ಕೃತಿಗಳನ್ನು ಲೋಕಾರ್ಪಣೆ ಮಾಡಲಾಯಿತು. ಪತ್ರಕರ್ತ ಎನ್.ಎ.ಎಂ. ಇಸ್ಮಾಯಿಲ್, ಅಭಿನವ ಪ್ರಕಾಶಕ ನ. ರವಿಕುಮಾರ್, ಎನ್ ಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎ.ಎಚ್. ರಾಮರಾವ್, ಪ್ರಾಂಶುಪಾಲ ಡಾ. ವೇಣುಗೋಪಾಲ್ ಉಪಸ್ಥಿತರಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement