ಬೆಂಗಳೂರು ವಿಶ್ವವಿದ್ಯಾಲಯ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ಬೆಂವಿವಿಗೆ ಲೋಕಾ ನೋಟಿಸ್

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರ ಆರೋಪ ಸಂಬಂಧ ಸ್ಪಷ್ಟನೆ ನೀಡುವಂತೆ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಸೇರಿ 9 ಮಂದಿಗೆ ಲೋಕಾಯುಕ್ತ ನೋಟಿಸ್ ನೀಡಿದೆ...

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿ ನಿರ್ಮಾಣದಲ್ಲಿ ನಡೆದಿರುವ ಅವ್ಯವಹಾರ ಆರೋಪ ಸಂಬಂಧ ಸ್ಪಷ್ಟನೆ ನೀಡುವಂತೆ ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಸೇರಿ 9 ಮಂದಿಗೆ ಲೋಕಾಯುಕ್ತ ನೋಟಿಸ್ ನೀಡಿದೆ. ಜ್ಞಾನಭಾರತಿ ಆವರಣದಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕಾಗಿ ಸೆ.5, 2009ರಂದು ರು.3.80 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಪಿಎಂಜೆ ಕನ್ಸ್‍ಟ್ರಕ್ಷನ್ ಕಂಪೆನಿಗೆ ವಹಿಸಲಾಗಿತ್ತು.

ಕಾಮಗಾರಿಯನ್ನು 12 ತಿಂಗಳಿಗೆ ನಿಗದಿ ಮಾಡಿ ಬೆಂಗಳೂರು ವಿವಿ ಎಂಜಿನಿಯರ್‍ಗಳಾದ ಎನ್. ಪುಟ್ಟಸ್ವಾಮಿ ಹಾಗೂ ಪಿಎಂಜೆ ಕಂಪನಿಯ ಎಂ. ಜಗನ್ನಾಥ್ ಎಂಬುವವರ ನಡುವೆ ಗುತ್ತಿಗೆಗೆ ನೋಂದಣಿ ಮಾಡಿಕೊಳ್ಳಲಾಗಿತ್ತು. ಆದರೆ, 2013ರ ಜುಲೈನಲ್ಲಿ ಮತ್ತೆ ಅದೇ ಕಾಮಗಾರಿಗೆ ಬೆಂವಿವಿ ಕುಲಪತಿ ಪೊ್ರ. ಬಿ. ತಿಮ್ಮೇಗೌಡ ಅವರು ಹೆಚ್ಚುವರಿಯಾಗಿ ರು.149 ಲಕ್ಷವನ್ನು ಗುತ್ತಿಗೆದಾರರಿಗೆ ಬಿಡುಗಡೆ ಮಾಡಿದ್ದಾರೆ. ಹೆಚ್ಚುವರಿಯಾಗಿ ನೀಡಿದ ರು.1.5 ಕೋಟಿ ಹಣದಲ್ಲಿ ಅವ್ಯವಹಾರ ನಡೆದಿದೆ. ಕಾಮಗಾರಿ ಪ್ರಾರಂಭಗೊಂಡು 6 ವರ್ಷ ಕಳೆದರೂ ಪೂರ್ಣಗೊಳ್ಳದಿರುವುದು ಅನುಮಾನಕ್ಕೆ ಆಸ್ಪದ ನೀಡಿದೆ ಎಂದು ಕರ್ನಾಟಕ ರಾಜ್ಯ ಶಿಕ್ಷಣ ವೇದಿಕೆಯ ಅಧ್ಯಕ್ಷ ಕೆ. ಗಂಗಾಧರ ಮೂರ್ತಿ ಎಂಬುವರು ತನಿಖೆ ಕೈಗೊಳ್ಳುವಂತೆ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ರು.149 ಲಕ್ಷ ಹಣ ಬಿಡುಗಡೆಗೆ ಕಾರಣರಾದ ಬೆಂವಿವಿ ಕುಲಪತಿ ಡಾ. ಬಿ. ತಿಮ್ಮೇಗೌಡ, ಕುಲಸಚಿವೆ ಕೆ.ಕೆ. ಸೀತಮ್ಮ, ಬೆಂವಿವಿ ಎಂಜಿನಿಯರ್ ಎನ್. ಪುಟ್ಟಸ್ವಾಮಿ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಡಾ. ಬಿ.ಎಸ್. ನಾಗೇಂದ್ರ ಪ್ರಕಾಶ್, ವಾಸ್ತುಶಿಲ್ಪ ವಿಭಾಗದ ಪ್ರೊ. ಎಸ್.ವಿ. ರವೀಂದ್ರ, ಕಾನೂನು ಸಲಹೆಗಾರ ಕೆ.ಜಿ. ಬೋರೇಗೌಡ, ಹಣಕಾಸು ಅಧಿಕಾರಿ ಡಾ. ಜೀವನ್‍ಕುಮಾರ್, ಸಿಂಡಿಕೇಟ್ ಸದಸ್ಯರಾದ ಎನ್. ಅಪ್ಪಾಜಿಗೌಡ ಹಾಗೂ ಡಾ. ಗಂಗಾಧರ್ ಎಂಬುವವರ ಮೇಲೆ ಕ್ರಮಕ್ಕೆ ದೂರು ಮನವಿ ಮಾಡಲಾಗಿತ್ತು.

ದೂರನ್ನು ಪುರಸ್ಕರಿಸಿರುವ ಲೋಕಾಯುಕ್ತ ಸಂಸ್ಥೆಯು ಡಿ.24ರೊಳಗೆ ಸ್ಪಷ್ಟನೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಮಾತನಾಡಿದ ಬೆಂವಿವಿ ಕುಲಸಚಿವೆ ಕೆ.ಕೆ. ಸೀತಮ್ಮ, `ಸರ್ಕಾರದ ಅನುಮತಿ ಕೋರಿಯೇ ಆಡಳಿತಾತ್ಮಕ ಮತ್ತು ಪಾರದರ್ಶಕವಾಗಿ ಸಿಂಡಿಕೇಟ್ ಸದಸ್ಯರ ಒಪ್ಪಿಗೆ ಪಡೆದು, ಸಭೆ ನಡೆಸಿಯೇ ಹಣ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಹಣ ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಲಾಗುವುದು. ಇದರಲ್ಲಿ ಧೈರ್ಯಗೆಡುವ ಯಾವುದೇ ಸಂಗತಿಗಳಿಲ್ಲ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!