ಮತದಾರರಿಗೆ ವಿಮಾ ಬಾಂಡ್ ಆಮಿಷ!
ರಾಯಚೂರು-ಕೊಪ್ಪಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ರು.5 ಲಕ್ಷ ಮೌಲ್ಯದ ಅಪಘಾತ ಸುರಕ್ಷಾ ವಿಮಾ ಬಾಂಡ್ ಗಳನ್ನು ವಿತರಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ...
ಕೊಪ್ಪಳ: ರಾಯಚೂರು-ಕೊಪ್ಪಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ರು.5 ಲಕ್ಷ ಮೌಲ್ಯದ ಅಪಘಾತ ಸುರಕ್ಷಾ ವಿಮಾ ಬಾಂಡ್ ಗಳನ್ನು ವಿತರಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಮತದಾನದ ಮುನ್ನಾ ದಿನ ನಗದು ಕಾಣಿಕೆ ಜತೆಗೆ ಸರ್ಕಾರಿ ಸ್ವಾಮ್ಯದ ಕಂಪನಿಯೊಂದರ ಬಾಂಡ್ ಗಳನ್ನು ನೀಡಿ ಮತದಾರರನ್ನು ಮನವೊಲಿಸುವ ಕೊನೆ ಪ್ರಯತ್ನ ಮಾಡಿರುವುದು ಕ್ಷೇತ್ರದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಕಳೆದ ಬಬಾರಿ ಬಂಗಾರದ ಉಂಗುರ ನೀಡಿದ ಪಕ್ಷವೇ ಈ ಬಾರಿಯೂ ವಿಮಾ ಸುರಕ್ಷಾ ಬಾಂಡ್ ಗಳನ್ನು ನೀಡಿ ಗೆಲ್ಲುವ ಸಾಹಸಕ್ಕೆ ಕೈ ಹಾಕಿದೆ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರಾಗಿರುವ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿ ಮತದಾರರ ಮನೆ ಮನೆಗೆ ಹೋಗಿ ಕವರ್ ಗಳನ್ನು ಅರ್ಪಿಸಲಾಗಿದೆ.