ಬಿಬಿಎಂಪಿಯ ಎಚ್ ಎಂಟಿ ವಾರ್ಡ್ ಪಾಲಿಕೆ ಸದಸ್ಯೆ ಆಶಾ ಸುರೇಶ್ ಅವರು ಗುರುವಾರ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ಅವರಿಗೆ ರಾಜಿನಾಮೆ ಪತ್ರ ಸಲ್ಲಿಸಿದರು. 
ಜಿಲ್ಲಾ ಸುದ್ದಿ

ಪಾಲಿಕೆ ಸದಸ್ಯತ್ವಕ್ಕೆ ಆಶಾ ರಾಜಿನಾಮೆ

ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳ, ಮುಸುಕಿನ ಗುದ್ದಾಟ ಪಾಲಿಕೆ ಸಭೆಯಲ್ಲಿ ಬಹಿರಂಗವಾಗಿ ಪ್ರದರ್ಶನವಾಗಿದ್ದು, ಹೊಸ ವರ್ಷ ಜಗಳದ ಮೂಲಕ ತೆರೆದುಕೊಂಡಿದೆ. ಏಕವಚನದಲ್ಲಿ ಅವಾಚ್ಯ ಶಬ್ಧ ಬಳಕೆ, ಅಭಿವೃದ್ಧಿ ಕಾಮಗಾರಿಗೆ ಅಡ್ಡಿ...

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳ, ಮುಸುಕಿನ ಗುದ್ದಾಟ ಪಾಲಿಕೆ ಸಭೆಯಲ್ಲಿ ಬಹಿರಂಗವಾಗಿ ಪ್ರದರ್ಶನವಾಗಿದ್ದು, ಹೊಸ ವರ್ಷ ಜಗಳದ ಮೂಲಕ ತೆರೆದುಕೊಂಡಿದೆ. ಏಕವಚನದಲ್ಲಿ ಅವಾಚ್ಯ  ಶಬ್ಧ ಬಳಕೆ, ಅಭಿವೃದ್ಧಿ ಕಾಮಗಾರಿಗೆ ಅಡ್ಡಿ, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ಪಕ್ಷದ ಶಾಸಕರ ವಿರುದ್ಧವೇ ಆರೋಪ ಹೊರಿಸುವ ಮೂಲಕ ಎಚ್ ಎಂಟಿ ವಾರ್ಡ್ ಸದಸ್ಯೆ ಆಶಾ ಸುರೇಶ್  ಪಾಲಿಕೆ ಸದಸ್ಯತ್ವಕ್ಕೆ ರಾಜಿನಾಮೆ ಸಲ್ಲಿಸಿದರು.

ಬಿಬಿಎಂಪಿ ಕಚೇರಿಯಲ್ಲಿ ಗುರುವಾರ ನಡೆದ ಪಾಲಿಕೆ ಮಾಸಿಕ ಸಾಮಾನ್ಯ ಸಭೆ ಗದ್ದಲ ನಡುವೆಯೇ ಪ್ರಾರಂಭವಾಯಿತು. ಸಭೆಗೆ ಬಿಬಿಎಂಪಿ ಸದಸ್ಯರು ಕರಪತ್ರಗಳನ್ನು ಹಿಡಿದು ಕಸ ಸಮಸ್ಯೆ ಇತ್ಯರ್ಥಕ್ಕೆ  ಘೋಷಣೆಗಳನ್ನು ಕೂಗಿದರು. ಇದಕ್ಕೆ ಮೇಯರ್ ಬಿ.ಎನ್.ಮಂಜುನಾಥರೆಡ್ಡಿಅವರು ಸಭೆಗೆ ಗೌರವ ಕೊಡುವುದನ್ನು ಕಲಿಯಿರಿ, ನಿಮಗೂ ಮಾತನಾಡಲು ಅವಕಾಶ ನೀಡುತ್ತೇವೆ. ಸಭೆ ನಡೆಯಲು ಅನುವು  ಮಾಡಿಕೊಡಿ ಎಂದು ಹೇಳಿದರು.

ಸಭೆ ಪ್ರಾರಂಭವಾದ ಅರ್ಧಗಂಟೆ ಸುಮಾರಿಗೆ ಮಾತನಾಡಲು ಪ್ರಾರಂಭಿಸಿದ ಆಶಾ ಸುರೇಶ್, ಮೂರು ವರ್ಷಗಳಿಂದ ನಮ್ಮದೇ ಪಕ್ಷದ ಶಾಸಕರು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಪಡಿಸುತ್ತಿದ್ದಾರೆ.  ಮಾನಸಿಕ ಕಿರುಕುಳ ನೀಡುತ್ತಿದ್ದು, ಮಹಿಳೆಯಾಗಿ ಕಾರ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಜನರ ಆಶೋತ್ತರಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಸದಸ್ಯತ್ವಕ್ಕೆ ರಾಜಿನಾಮೆ  ಸಲ್ಲಿಸುತ್ತಿದ್ದೇನೆ ಎಂದರು.

ಬಿಜೆಪಿ ಸದಸ್ಯರ ಬೆಂಬಲ
ಆಶಾ ಸುರೇಶ್ ಶಾಸಕರ ಕಿರುಕುಳ ಬಗ್ಗೆ ಮಾತನಾಡುತ್ತಿದ್ದಂತೆ ಸಭೆಯ ಎಲ್ಲ ಮಹಿಳಾ ಸದಸ್ಯರು ಬೆಂಬಲ ಸೂಚಿಸಿ ಪ್ರತಿಭಟನೆಗೆ ಮುಂದಾದರು. ಅಲ್ಲದೆ, ರಾಜಿನಾಮೆ ಸಲ್ಲಿಸದಂತೆ ತಡೆದರಾದರೂ,  ಅಷ್ಟೊತ್ತಿಗೆ ಆಶಾ ಸುರೇಶ್ ಮೇಯರ್ ಅವರಿಗೆ ರಾಜಿನಾಮೆ ಸಲ್ಲಿಸಿಯಾಗಿತ್ತು. ಈ ಎಲ್ಲದರಿಂದ ಸಭೆ ಗೊಂದಲದ ಗೂಡಾಗಿತ್ತು. ಹೀಗಾಗಿ ಮೇಯರ್ ಸಭೆಯನ್ನು ಮಧ್ಯಾಹ್ನ 2.30ರವರೆಗೆ  ಮುಂದೂಡಿದರು.

ಆಶಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡ್ತೀನಿ: ಮುನಿರತ್ನ
ಎಚ್ ಎಂಟಿ ವಾರ್ಡಿನಲ್ಲಿ 5 ವರ್ಷಗಳಿಂದ ನಡೆದಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸುವಂತೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿರುವುದೇ ಈ ಅವಾಂತರಕ್ಕೆ ಕಾರಣ ಎಂದು  ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ನಾಯ್ಡು ಆಶಾ ಸುರೇಶ್ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮೂರು ವರ್ಷಗಳಿಂದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಪಡಿಸುತ್ತಿದ್ದೇನೆ ಎಂಬ ಆರೋಪದಲ್ಲಿ ಹುರುಳಿಲ್ಲ. ಅವರಿಗೆ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆಯೂ ಮಾಡಿಲ್ಲ ಎಂದರು. ಆಶಾ ಸುರೇಶ್,  ಮತ್ತು ಅವರ ಮೈದುನ ಪಾಲಿಕೆ ಸದಸ್ಯರಾಗಿದ್ದಾರೆ. ಜನರ ಮನವಿ ಮೇರೆಗೆ ಅವರಿಗೆ ತಿಳಿಯದಂತೆ ವಾರ್ಡಿಗೆ ಭೇಟಿ ನೀಡಿರುವುದರಿಂದ ಈ ರೀತಿ ಮಾತನಾಡುತ್ತಿದ್ದಾರೆ. ಅವರು ತಮ್ಮ ವಿರುದ್ಧ  ಗೋಮುಖ ವ್ಯಾಘ್ರ ಎಂಬ ಪದ ಬಳಸಿದ್ದರಿಂದ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!

ಬರ ಎಫೆಕ್ಟ್: ರೈತರ ನೆರವಿಗೆ ಧಾವಿಸಿದ ಸರ್ಕಾರ; 1,250 ಕೋಟಿ ರೂ. ಮೊದಲ ಕಂತು ಬಿಡುಗಡೆ..!