ಬಳ್ಳಾರಿ: ಅಕ್ರಮ ಗಣಿಗಾರಿಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯನ್ವಯ ವಿಶೇಷ ತನಿಖಾ ದಳ (ಎಸ್‍ಐಟಿ) ಲೋಕಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಸಿದೆ.
ತನಿಖಾಧಿಕಾರಿಗಳು ದಾಖಲಿಸಿರುವ ಒಟ್ಟು 68 ಎಫ್ಐಆರ್ ಗಳ ಪೈಕಿ 14 ಎಫ್ಐಆರ್ ಗಳ ಸಲ್ಲಿಕೆಯಾಗಿದೆ. ದೋಷಾರೋಪ ಪಟ್ಟಿಯಲ್ಲಿ ವಿಜಯನಗರ ಶಾಸಕ ಆನಂದಸಿಂಗ್ ಹಾಗೂ ಕೂಡ್ಲಿಗಿ ಶಾಸಕ ನಾಗೇಂದ್ರ ಸೇರಿದಂತೆ ಒಟ್ಟು 50 ಜನರ ಹೆಸರಿದೆ. ಇದನ್ನು ಎಸ್‍ಐಟಿ ಮೂಲಗಳು ಖಚಿತಪಡಿಸಿವೆ. ಅಕ್ರಮ ಗಣಿಗಾರಿಕೆಯ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‍ಐಟಿ ಅಧಿಕಾರಿಗಳು, ಎಫ್ಐಆರ್ ನಲ್ಲಿ ದಾಖಲು ಮಾಡಿರುವಂತೆ ತನಿಖಾ ಕ್ರಮದ ಹೆಜ್ಜೆ ಇಟ್ಟಿದ್ದಾರೆ.