ಬಂಧಿತ ಶಂಕಿತ ಉಗ್ರರ ಬಿಡುಗಡೆಗೆ ಪೋಷಕರ ಒತ್ತಾಯ (ಸಂಗ್ರಹ ಚಿತ್ರ) 
ಜಿಲ್ಲಾ ಸುದ್ದಿ

ನಮ್ಮ ಮಕ್ಕಳಾರು ಉಗ್ರರಲ್ಲ

ನಮ್ಮ ಮಕ್ಕಳು ಅಮಾಯಕರು... ಗುಜರಿ ವ್ಯಾಪಾರಿ, ವಿದ್ಯಾರ್ಥಿ, ವೈದ್ಯರು-ಉಗ್ರರಲ್ಲ... ಪೊಲೀಸರೇ ಹುನ್ನಾರ ನಡೆಸಿ ಬಂಧಿಸಿದ್ದಾರೆ..

ಬಂಧಿತರ ಬಿಡುಗಡೆಗೆ ಪೋಷಕರ ಒತ್ತಾಯ
ಪೊಲೀಸರ ಹುನ್ನಾರವಿದು, ನ್ಯಾಯ ಕೊಡಿಸಿ
ಬೆಂಗಳೂರು:
ನಮ್ಮ ಮಕ್ಕಳು ಅಮಾಯಕರು... ಗುಜರಿ ವ್ಯಾಪಾರಿ, ವಿದ್ಯಾರ್ಥಿ, ವೈದ್ಯರು-ಉಗ್ರರಲ್ಲ... ಪೊಲೀಸರೇ ಹುನ್ನಾರ ನಡೆಸಿ ಬಂಧಿಸಿದ್ದಾರೆ... ಮಕ್ಕಳು ಬಿಡುಗಡೆ ಮಾಡಿ, ನಮಗೆ ನ್ಯಾಯ ಕೊಡಿ...

ಭಟ್ಕಳದಲ್ಲಿ ಸರ್ಕಿಟ್ ಬಾಂಬ್ ತಯಾರಿಕಾ ವಸ್ತುಗಳ ಪತ್ತೆಗೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಡಾ.ಸೈಯದ್ ಇಸ್ಮಾಯಿಲ್ ಆಘಕ್, ಅಬ್ದುಲ್ ಸಬೂರ್, ಸದ್ದಾಂ ಹುಸೇನ್‌ನ ಪೋಷಕರು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡ ಪರಿಯಿದು.

ಪಾಕಿಸ್ತಾನದಲ್ಲಿ ನಮ್ಮ ಸಂಬಂಧಿಕರಿದ್ದಾರೆ. ಹಾಗಾಗಿ ಮಗನಿಗೆ ಪಾಕ್‌ನಿಂದಲೇ ಹೆಣ್ಣು ತರಲಾಗಿದೆ. ಸೊಸೆ, ನಾವು ಪಾಕ್ ಸಂಬಂಧಿಕರೊಂದಿಗೆ ಫೋನ್, ಇಂಟರ್ನೆಟ್ ನಲ್ಲಿ ಸಂಪರ್ಕಿಸುತ್ತೇವೆ ಎಂಬುದನ್ನೇ ಪೊಲೀಸರು ಉಗ್ರರ ಜೊತೆ ನಂಟು ಹೊಂದಿದ್ದಾರೆ ಅಂದುಕೊಂಡು ಮಗ ಡಾ.ಸೈಯದ್ ಇಸ್ಮಾಯಿಲ್ ಆಘಕ್‌ನನ್ನು ಬಂಧಿಸಿರುವುದು ಸರಿಯಲ್ಲ ಎಂದು ಅಲೀಂ ಹೇಳಿದರು.

ನಮ್ಮ ಮಗ ಗುಜರಿ ವ್ಯಾಪಾರಿ. ಆತ ಅಂಥವನಲ್ಲ. ಆತನಿಗೆ ಮೂವರು ಸಣ್ಣ ಮಕ್ಕಳು. ಪೊಲೀಸರು ನಮ್ಮ ಭಟ್ಕಳ ಮನೆಯನ್ನು ಚೆಕ್ ಮಾಡಿದರೂ ಏನೂ ಸಿಕ್ಕಿಲ್ಲ. ನನ್ನ ಮಗಳ ಮದುವೆ ಜ.28ಕ್ಕಿದೆ. ಉಗ್ರನೆಂದು ಮಗನನ್ನು ಪೊಲೀಸರು ಬಂಧಿಸಿರುವುದರಿಂದ ಮದುವೆ ನಡೆಯುತ್ತದೋ ಇಲ್ಲವೋ ಎಂಬ ಆತಂಕ ಮೂಡಿದೆ' ಎಂಬ ಸದ್ದಾಂ ಹುಸೇನ್ ತಂದೆ ಫಿರೋಜ್ ಖಾನ್ ತಮ್ಮ ಅಳಲು ತೋಡಿಕೊಂಡರು.

ನನ್ನ ಮಗ ಎಂಬಿಎ ವಿದ್ಯಾರ್ಥಿ. ಆತನಿಗೂ, ಉಗ್ರರಿಗೂ ಯಾವುದೇ ಸಂಬಂಧವಿಲ್ಲ. ಆತ ಚೆನ್ನಾಗಿ ಓದಿ ನಮ್ಮನ್ನು ನೋಡಿಕೊಳ್ಳುವ ಭರವಸೆ ಇದೆ. ಆತನನ್ನು ಬಿಡುಗಡೆ ಮಾಡಿ ಎಂದು ಅಬ್ದುಸ್ ಸಬೂರ್ ತಂದೆ ಮೊಹಮದ್ ಹುಸೇನ್ ಕೇಳಿಕೊಂಡರು. ಸದ್ದಾಂ ಹುಸೇನ್ ಗುಜರಿ ಅಂಗಡಿ ವ್ಯಾಪಾರ ಮಾಡಿಕೊಂಡು ಇದ್ದವನು. ಅಬ್ದುಸ್ ಸಬೂರ್ ಎಂಬಿಎ ವಿದ್ಯಾರ್ಥಿ, ಸೈಯದ್ ಇಸ್ಮಾಯಿಲ್ ಆಫಕ್ ಹೊಮಿಯೋಪತಿ ವೈದ್ಯ. ಇವರ ಸಂಬಂಧಿಕರು ಪಾಕ್‌ನಲ್ಲಿರುವ ಕಾರಣ ಉಗ್ರರೆಂದು ಬಂಧಿಸಿರುವ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ. ನ್ಯಾಯಾಲಯದಲ್ಲಿ ನ್ಯಾಯ ದೊರಕುವ ಭರವಸೆ ಇದೆ ಎಂದು ಆರೋಪಿ ಪರ ವಕೀಲ ಅಕ್ಮಲ್ ರುಜ್ವಿ ಒತ್ತಾಯಿಸಿದರು.

ಬಂಧಿತ ಆರೋಪಿಗಳ ಪೋಷಕರಾದ ಕಮರುನ್ನೀಸಾ, ನೂರುನ್ನೀಸಾ, ಮುಕ್ತಾರ್, ಫಿರೋಜ್ ಖಾನ್, ಮೊಹಮದ್ ಹುಸೇನ್, ಅಬ್ದುಲ್ ಅಲೀಂ, ಸಾಯಿರಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನಮಗೆ ಮೂವರು ಚಿಕ್ಕಮಕ್ಕಳು. ಗುಜರಿ ವ್ಯಾಪಾರಿಯಾದ ನನ್ನ ಗಂಡ ಉಗ್ರರಲ್ಲ. ನಮ್ಮ ಮಾವನ ಆರೋಗ್ಯ ಹದಗೆಟ್ಟಿದೆ. ಅತ್ತೆಯ ಗೋಳು ಹೇಳತೀರದು. ಇದೇ ಜ.28ಕ್ಕೆ ನಾದಿನಿ ಮದುವೆ ಇದೆ. ಅದು ಏನಾಗುತ್ತದೋ. ಗಂಡನನ್ನು ಬಿಡುಗಡೆ ಮಾಡಿ ನಮ್ಮ ಕುಟುಂಬ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಿ.
-ಸಾಯಿರಾ, ಸದ್ದಾಂ ಹುಸೇನ್ ಪತ್ನಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ವಿಜಯೇಂದ್ರ ಮಾತನ್ನು ನಂಬುತ್ತೇನೆ, ಆದ್ರೆ...: BJPಗೆ ಘರ್ ವಾಪ್ಸಿ ಬಗ್ಗೆ ಈಶ್ವರಪ್ಪ ಶಾಕಿಂಗ್ ಹೇಳಿಕೆ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ