ಬೆಂಗಳೂರು: ಭಯೋತ್ಪಾದನೆ ಪ್ರಕರಣ ಸಂಬಂಧ ರಾಜ್ಯ ಪೊಲೀಸರು ಭಟ್ಕಳದಲ್ಲಿ ಬಂಧಿಸಿರುವ ವ್ಯಕ್ತಿಗಳು ಅಮಾಯಕರಲ್ಲ ಎಂದು ಗೃಹ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರೀಯ ತನಿಖಾ ಸಂಸ್ಥೆಯ ಸಹಕಾರದೊಂದಿಗೆ ನಾವು ತನಿಖೆ ನಡೆಸುತ್ತಿದ್ದೇವೆ. ಸರ್ಕಾರ ಅಮಾಯಕರನ್ನು ಬಂಧಿಸುವುದಿಲ್ಲ. ಶಂಕಿತರ ಮೇಲಿನ ಅಪಾದನೆ ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬರುತ್ತದೆ ಎಂದು ಹೇಳಿದರು.
ಶಂಕಿತ ಉಗ್ರರು ಭಟ್ಕಳದಲ್ಲಿ ನೆಲೆಸಿದ್ದ ಮನೆಯಲ್ಲಿ ನಮ್ಮ ಪೊಲೀಸುರ ಬಾಂಬ್ ತೆಗೆದುಕೊಂಡು ಹೋಗಿ ಇಟ್ಟಿಲ್ಲ. ಈ ಆರೋಪ ಸಂಪೂರ್ಣ ಸುಳ್ಳು. ಭಟ್ಕಳದಲ್ಲಿ ಶಂಕಿತ ಉಗ್ರರು ಸಿಕ್ಕಿ ಬಿದ್ದಿದ್ದಾರೆಂಬ ಮಾತ್ರಕ್ಕೆ ಇಜೀ ಭಟ್ಕಳವನ್ನು ಶಂಕೆಯಿಂದ ನೋಡಬಾರದು. ಹೀಗಾಗಿ ಭಯೋತ್ಪಾದನೆ ತನಿಖೆಗೆ ಭಟ್ಕಳದಲ್ಲಿ ಪ್ರತ್ಯೇಕ ಘಟಕ ಸ್ಥಾಪನೆ ಮಾಡಬೇಕಾದ ಅನಿವಾರ್ಯತೆ ಇಲ್ಲ ಎಂದು ಹೇಳಿದರು.